ನವದೆಹಲಿ:  ಏರ್ ಇಂಡಿಯಾ ವಿಮಾನ ಕೇರಳದ ರನ್‌ವೇಯಲ್ಲಿ ಜಾರಿಬಿದ್ದಿದೆ. ದುಬೈನಿಂದ ಕೋಜಿಕೋಡ್‌ಗೆ (Kozhikode) ಬರುತ್ತಿದ್ದ ವಿಮಾನ ಕೇರಳದ ಕೋಜಿಕೋಡ್‌ನಲ್ಲಿ ರನ್‌ವೇಯಲ್ಲಿ ಅಪಘಾತಕ್ಕೀಡಾಗಿದೆ. ಈ ವಿಮಾನದಲ್ಲಿ ಒಟ್ಟು 191 ಜನರು ಇದ್ದರು. ವಿಮಾನ ಅಪಘಾತದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ದುಃಖ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಕೇರಳ ಸಿಎಂ ಜೊತೆ ಪಿಎಂ ಮೋದಿ ಮಾತು:
ಈ ಅಪಘಾತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡ ದುಃಖ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು ಕೋಜಿಕೋಡ್‌ನಲ್ಲಿನ ವಿಮಾನ ಅಪಘಾತದಿಂದ ನನಗೆ ನೋವಾಗಿದೆ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ದುಃಖದಲ್ಲಿ ನಾವೂ ಇದ್ದೇವೆ. ಗಾಯಗೊಂಡವರು ಆದಷ್ಟು ಬೇಗ ಗುಣಮುಖರಾಗಲೆಂದು ಆಶಿಸುತ್ತೇನೆ. ನಾನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿದ್ದೇನೆ. ಸಂತ್ರಸ್ತರಿಗೆ ಎಲ್ಲಾ ರೀತಿಯ ಸಹಾಯ ದೊರೆಯುತ್ತಿದೆ ಎಂದು ತಿಳಿಸಿದ್ದಾರೆ.


ಅಮಿತ್ ಷಾ (Amit Shah) ಅವರ ಪ್ರತಿಕ್ರಿಯೆ ಬಂದಿತು. ಕೇರಳದ ಕೋಜಿಕೋಡ್‌ನಲ್ಲಿ ನಡೆದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ದುರಂತ ಅಪಘಾತದ ಬಗ್ಗೆ ತಿಳಿದು ನನಗೆ ಬಹಳ ದುಃಖವಾಗಿದೆ. ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿ ಸಂತ್ರಸ್ತರನ್ನು ರಕ್ಷಿಸುವಂತೆ ಎನ್‌ಡಿಆರ್‌ಎಫ್‌ಗೆ ನಿರ್ದೇಶಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.


ಕೋಜಿಕೋಡ್ ವಿಮಾನ ನಿಲ್ದಾಣದ ರನ್‌ವೇ ರೀತಿಯೇ ಅಪಾಯಕಾರಿ ಈ ರನ್‌ವೇಗಳು


MEA ಸಹಾಯವಾಣಿ 24x7 ಮುಕ್ತವಾಗಿದೆ:


1800 118 797
+91 11 23012113
+91 11 23014104
+91 11 23017905
Fax: +91 11 23018158
Email: covid19@mea.gov.in


ರಾಹುಲ್ ಗಾಂಧಿ (Rahul Gandhi) ಕೂಡ ಈ ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.  ಈ ಬಗ್ಗೆ ಟ್ವೀಟ್ ಮಾಡಿರುವ ಕೋಜಿಕೋಡ್ನಲ್ಲಿ ವಿಮಾನ ಅಪಘಾತದ ವಿನಾಶಕಾರಿ ಸುದ್ದಿ ಕೇಳಿ ನಾನು ಆಘಾತಕ್ಕೊಳಗಾಗಿದ್ದೇನೆ. ಅಪಘಾತದಲ್ಲಿ ಮೃತಪಟ್ಟವರ ಸ್ನೇಹಿತರು ಮತ್ತು ಕುಟುಂಬಕ್ಕೆ ತೀವ್ರ ಸಂತಾಪ. ಗಾಯಾಳುಗಳ ಶೀಘ್ರ ಚೇತರಿಕೆಗಾಗಿ ಪ್ರಾರ್ಥನೆ ಎಂದು ಬರೆದಿದ್ದಾರೆ.