Sumitra Mahajan: `ನನ್ನ ಸಾವನ್ನು ಅಷ್ಟು ಬೇಗ ಅಂನೌನ್ಸ್ ಮಾಡುವ ಅರ್ಜೆಂಟ್ ಏನಿತ್ತು?`
ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಮೃತಪಟ್ಟಿದ್ದಾರೆ ಎಂಬ ಸುಳ್ಳು ಸುದ್ದಿ
ನವದೆಹಲಿ: ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಮೃತಪಟ್ಟಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದ ಕಾಂಗ್ರೆಸ್ ನಾಯಕ ಶಶಿ ತರೂರ್ ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ. ಈ ಸಾವಿನ ಬಗ್ಗೆ ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವದಂತಿಗಳು ಶುರುವಾಗಿವೆ.
ಈ ಕುರಿತು ಪ್ರತಿಕ್ರಿಯೆಸಿರುವ ಸುಮಿತ್ರಾ ಮಹಾಜನ್(Sumitra Mahajan), ನಾನು ಚೆನ್ನಾಗಿದ್ದೇನೆ. ತರೂರ್ ಹಾಗೆ ಮಡಿದ ನಂತ್ರ ನನ್ನ ಸಾವು ದೂರಾಗಿದೆ. ಆದ್ರೆ, ನನ್ನ ಸಾವನ್ನು ಅಷ್ಟು ಬೇಗ ಅಂನೌನ್ಸ್ ಮಾಡುವ ಅರ್ಜೆಂಟ್ ಏನಿತ್ತು? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : OLA Electric Scooter: ಭಾರತದಲ್ಲಿ ಶೀಘ್ರವೇ ಲಾಂಚ್ ಆಗಲಿದೆ OLA ಎಲೆಕ್ಟ್ರಿಕ್ ಸ್ಕೂಟರ್
ಕಾಂಗ್ರೆಸ್(Congress) ಸಂಸದರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಮಹಾಜನ್, “ನನ್ನ ಸಹೋದರ ಶ್ರೀ ತರೂರ್ ಅವರನ್ನು ಟ್ವಿಟರ್‌ನಲ್ಲಿ ನಿರಾಕರಿಸಿದರು ಆದರೆ ನನ್ನ ಸಾವನ್ನು ಅಷ್ಟು ಬೇಗ ಅಂನೌನ್ಸ್ ಮಾಡುವ ಅರ್ಜೆಂಟ್ ಏನಿತ್ತು? ಎಂದು ಕೇಳಿದರು. ಮಾಹಿತಿ ಪರಿಶೀಲಿಸದೆ ಸುದ್ದಿ ಪ್ರಸಾರ ಮಾಡದಿದ ಸುದ್ದಿ ವಾಹಿನಿಗಳ ಮೇಲೆ ಕೂಡ ಗರಂ ಆದರು.
ಕರೋನಾ ಬಿಕ್ಕಟ್ಟಿನ ಮಧ್ಯೆ Covid ಸೆಂಟರ್‌ನ ಐಸಿಯು ವಾರ್ಡ್‌ನಲ್ಲಿ ಬೆಂಕಿ; 13 ರೋಗಿಗಳ ಸಜೀವ ದಹನ
"ಸುದ್ದಿಯ ಸತ್ಯಸತತೆ ಪರಿಶೀಲಿಸದೆ ನ್ಯೂಸ್ ಚಾನೆಲ್(News Channel) ಗಳು ನನ್ನ ನಿಧನದ ಬಗ್ಗೆ ವರದಿಯನ್ನು ಹೇಗೆ ಬಿತ್ತರಿಸಿದರು? ಎಂದು ಮಹಾಜನ್ ಕೇಳಿದರು.
ಇದನ್ನೂ ಓದಿ : ಒಂದೇ ದಿನದಲ್ಲಿ ದೆಹಲಿಯಲ್ಲಿ 306 ಕೊರೊನಾ ಸಾವು, 26 ಸಾವಿರ ಪ್ರಕರಣ ದಾಖಲು
ಗುರುವಾರ ತಡರಾತ್ರಿ ಮಾಡಿದ ಟ್ವೀಟ್‌ನಲ್ಲಿ, ತರೂರು(Shashi Tharoor), “ಮಾಜಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಜಹಾನ್ ಅವರ ನಿಧನದ ಬಗ್ಗೆ ತಿಳಿದು ದುಃಖಿತವಾಗಿದೆ” ಎಂದು ಬರೆದಿದ್ದರು.
ಇದನ್ನೂ ಓದಿ : ಚುನಾವಣಾ ರ್ಯಾಲಿ ಹಾಗೂ ರೋಡ್ ಷೋ ನಿಷೇಧಿಸಿದ ಚುನಾವಣಾ ಆಯೋಗ
"ಮಾಸ್ಕೋದಲ್ಲಿ ಬ್ರಿಕ್ಸ್ ಸಂಸದೀಯ ನಿಯೋಗವನ್ನು ಮುನ್ನಡೆಸಲು ಅವರು ಮತ್ತು ದಿವಂಗತ ಸುಷ್ಮಾ ಸ್ವರಾಜ್ ನನ್ನನ್ನು ಕೇಳಿದಾಗ ಸೇರಿದಂತೆ ಅವರೊಂದಿಗೆ ಅನೇಕ ಸಕಾರಾತ್ಮಕ ಸಂವಹನಗಳು ನನಗೆ ನೆನಪಿದೆ. ಅವರ ಕುಟುಂಬ ಮತ್ತು ಪ್ರಾರ್ಥನೆಗಳಿಗೆ ನನ್ನ ಸಂತಾಪ: ಓಂ ಶಾಂತಿ! ” ಎಂದು ಟ್ವೀಟ್ ನಲ್ಲಿ ತರೂರು ಬರೆದಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.