ಕರೋನಾ ಬಿಕ್ಕಟ್ಟಿನ ಮಧ್ಯೆ Covid ಸೆಂಟರ್‌ನ ಐಸಿಯು ವಾರ್ಡ್‌ನಲ್ಲಿ ಬೆಂಕಿ; 13 ರೋಗಿಗಳ ಸಜೀವ ದಹನ

Fire in Hospital: ಮಹಾರಾಷ್ಟ್ರದ ವಾಸೈನ ಕೋವಿಡ್ ಕೇಂದ್ರದಲ್ಲಿ ಭಾರಿ ಬೆಂಕಿಯಿಂದ 13 ರೋಗಿಗಳು ಸಾವನ್ನಪ್ಪಿದ್ದಾರೆ.

Written by - Yashaswini V | Last Updated : Apr 23, 2021, 08:25 AM IST
  • ವಿರಾರ್‌ನ ವಿಜಯ್ ವಲ್ಲಭ್ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಅಗ್ನಿ ಅವಘಡ
  • ಎಸಿ ಸ್ಫೋಟದ ನಂತರ ಐಸಿಯು ವಾರ್ಡ್‌ಗೆ ಬೆಂಕಿ ಕಾಣಿಸಿಕೊಂಡಿದೆ
  • ಅಪಘಾತದಲ್ಲಿ ಈವರೆಗೆ 13 ರೋಗಿಗಳು ಸಾವನ್ನಪ್ಪಿದ್ದಾರೆ
ಕರೋನಾ ಬಿಕ್ಕಟ್ಟಿನ ಮಧ್ಯೆ Covid ಸೆಂಟರ್‌ನ ಐಸಿಯು ವಾರ್ಡ್‌ನಲ್ಲಿ ಬೆಂಕಿ; 13 ರೋಗಿಗಳ ಸಜೀವ ದಹನ  title=
Fire In Covid Center (Image courtesy: ANI)

Fire In Covid Center: ಕರೋನಾವೈರಸ್ ಅಟ್ಟಹಾಸದಿಂದ ಮೊದಲೇ ತತ್ತರಿಸಿರುವ ಮಹಾರಾಷ್ಟ್ರದಲ್ಲಿ ಇಂದು ಬೆಳಿಗ್ಗೆ ಕೋವಿಡ್ ಸೆಂಟರ್‌ನ ಐಸಿಯುನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು 13 ರೋಗಿಗಳು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಗುರುವಾರ ತಡರಾತ್ರಿ ವಿರಾರ್‌ನ ವಿಜಯ್ ವಲ್ಲಭ್ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ (ICU Ward) 3.30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಇದರಲ್ಲಿ 13 ರೋಗಿಗಳು ಸಾವನ್ನಪ್ಪಿದ್ದಾರೆ. ಘಟನೆಯ ಮಾಹಿತಿ ಬಂದ ಕೂಡಲೇ, ಅಗ್ನಿಶಾಮಕ ದಳದ ಹೊರತಾಗಿ, ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಿಯಂತ್ರಿಸಲಾಯಿತು.

ಇದನ್ನೂ ಓದಿ - Covid-19 ರೋಗಿಯನ್ನು ಯಾವಾಗ ಆಸ್ಪತ್ರೆಗೆ ಸೇರಿಸಬೇಕು? ಕೇವಲ 6 ನಿಮಿಷಗಳಲ್ಲಿ ಈ ರೀತಿ ಪತ್ತೆ ಹಚ್ಚಿ

ಎಸಿಯಲ್ಲಿ ಸ್ಫೋಟದ ನಂತರ ಐಸಿಯು ವಾರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ:
ಘಟನಾ ಸ್ಥಳದಲ್ಲಿದ್ದ ಅಧಿಕಾರಿಯೊಬ್ಬರು, 'ಎಸಿಯಲ್ಲಿ ಸ್ಫೋಟದ ನಂತರ ಐಸಿಯು ವಾರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಾಗ ಐಸಿಯು ವಾರ್ಡ್‌ನಲ್ಲಿ 17 ರೋಗಿಗಳು ಚಿಕಿತ್ಸೆಯಲ್ಲಿದ್ದರು. ಈ ಪೈಕಿ 13 ಜನರು ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಅಗ್ನಿಶಾಮಕ ದಳ, ಆಸ್ಪತ್ರೆಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ರೋಗಿಗಳನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ - Home Quarantine: ಆರೋಗ್ಯ ಸಚಿವಾಲಯದ ಈ ಟಿಪ್ಸ್ ಅನುಸರಿಸಿ ಮನೆಯಲ್ಲಿಯೇ ನಿಮ್ಮ Oxygen ಮಟ್ಟ ಸುಧಾರಿಸಿ

ನಾಸಿಕ್‌ನಲ್ಲಿ ಆಮ್ಲಜನಕ ಸೋರಿಕೆಯಾದ ಕಾರಣ 24 ಮಂದಿ ಸಾವನ್ನಪ್ಪಿದ್ದಾರೆ:
ಇದಕ್ಕೂ ಮೊದಲು ಮಹಾರಾಷ್ಟ್ರದ (Maharashtra) ನಾಸಿಕ್‌ನಲ್ಲಿ ಬುಧವಾರ (ಏಪ್ರಿಲ್ 21) ಟ್ಯಾಂಕರ್‌ನಿಂದ ಆಮ್ಲಜನಕ ಸೋರಿಕೆಯಾದ ಕಾರಣ 24 ಕರೋನಾ ಸೋಂಕಿತ ರೋಗಿಗಳು ಸಾವನ್ನಪ್ಪಿದ್ದರು. ಈ ಘಟನೆ ನಾಸಿಕ್‌ನ ಜಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ನಡೆದಿದ್ದು, ಇದ್ದಕ್ಕಿದ್ದಂತೆ ಟ್ಯಾಂಕರ್‌ನಿಂದ ಆಮ್ಲಜನಕ ಸೋರಿಕೆಯಾದ ಕಾರಣ ಇಡೀ ಆಸ್ಪತ್ರೆ ಆವರಣದಲ್ಲಿ ಹೊಗೆ ಕಾಣಿಸಿಕೊಂಡಿದೆ. ಘಟನೆಯ ಬಗ್ಗೆ ತನಿಖೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆದೇಶಿಸಿದ್ದಾರೆ ಮತ್ತು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 5-5 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

  

Trending News