Plasma Exchange For Liver: ಭಾರತದಲ್ಲಿ, ಪತಿ ಮತ್ತು ಪತ್ಯಿನ ನಡುವಿನ ಸಂಬಂಧವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಬಿಹಾರದ ದಂಪತಿ ಜೋಡಿಯೊಂದು ಇದಕ್ಕೆ ಉದಾಹರಣೆಯನ್ನು ಪ್ರಸ್ತುತಪಡಿಸಿದ್ದಾರೆ. 6 ತಿಂಗಳ ಹಿಂದೆ 21 ವರ್ಷದ ಮಹಿಳೆಯೊಬ್ಬಳು ತನ್ನ 29 ವರ್ಷದ ಪತಿ ಹಾಸಿಗೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿದಾಳೆ. ಅಸ್ವಸ್ಥ ಪತಿಯೊಂದಿಗೆ ಪತ್ನಿ ಆಸ್ಪತ್ರೆ ತಲುಪಿದಾಗ ಪತಿಗೆ ಲಿವರ್ ವೈಫಲಯದ ಹಿಂದೆ ಆತ ಮೂರ್ಛೆ ಹೋಗಿರುವುದು ಆಸ್ಪತ್ರೆಯಲ್ಲಿ ಪತ್ತೆಯಾಗಿದೆ. ಪತಿಯೇ ಮನೆಗೆ ಆದಾಯ ತರುವ ಪ್ರಮುಖ ವ್ಯಕ್ತಿಯಾದ ಕಾರಣ, ಪತ್ನಿಯ ಹೊರತಾಗಿ ಇಬ್ಬರು ಮಕ್ಕಳು ಹಾಗೂ ವೃದ್ಧ ತಾಯಿಯ ಜವಾಬ್ದಾರಿಯನ್ನೂ ಆತ ನಿಭಾಯಿಸುತ್ತಿದ್ದ. ಬಿಹಾರ ಮೂಲದ ಶಿವ ಅವರಿಗೆ ಯಕೃತ್ತು ಕಸಿ ಮಾಡಲು ಸೂಚಿಸಲಾಗಿತ್ತು ಆದರೆ ದಾನಿ ಹುಡುಕುವಲ್ಲಿ ಸಾಕಷ್ಟು ತೊಂದರೆಗಳು ಎದುರಾಗಿದ್ದವು. ಏಕೆಂದರೆ, ಶಿವನ ರಕ್ತದ ಗುಂಪು ಬಿ ಪಾಸಿಟಿವ್ ಆಗಿದ್ದು ಅದು ಒಡಹುಟ್ಟಿದವರ ಜೊತೆಗೂ ಕೂಡ ಹೊಂದಿಕೆಯಾಗಲಿಲ್ಲ. ಈ ಸಂದರ್ಭದಲ್ಲಿ ಪತ್ನಿ ತನ್ನ ಪತಿಗೆ ಲಿವರ್ ಕೊಡಲು ಸಿದ್ಧಳಾಗಿದ್ದಾಳೆ. ಆದರೆ ಆಕೆಯ ರಕ್ತದ ಗುಂಪು ಎ (ಬ್ಲಡ್ ಗ್ರೂಪ್ ಎ+) ಪಾಸಿಟಿವ್ ಆಗಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-February 27 ರಿಂದ ಗ್ರಹಗಳ ರಾಜಕುಮಾರನ ವಿಶೇಷ ಕೃಪೆಯಿಂದ ಈ 3 ರಾಶಿಗಳ ಭಾಗ್ಯೋದಯ!


ರಕ್ತದ ಗುಂಪು ಹೊಂದಿಕೆಯಾಗದ ಕಾರಣ ಕಸಿ ಕಷ್ಟಕರವಾಗಿತ್ತು, ಆದರೆ ಅಸಾಧ್ಯವಾಗಿರಲಿಲ್ಲ. ದೊಡ್ಡ ಆಸ್ಪತ್ರೆಯಲ್ಲಿ ಈ ಕಸಿ ನೆರೆವೇರಿಸಬಹುದಾಗಿತ್ತು. ಹೀಗಾಗಿ, ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ, ಆದರೆ ಶಸ್ತ್ರಚಿಕಿತ್ಸೆಗೆ ಮುನ್ನ ಸಾಕಷ್ಟು ಸಾಕಷ್ಟು ಸಿದ್ಧತೆಗಳನ್ನು ನಡೆಸಲಾಗಿದೆ. ಶಿವನ ರಕ್ತದ ಗುಂಪಿನಲ್ಲಿರುವ ಪ್ರತಿಕಾಯಗಳಿಗೆ ಚಿಕಿತ್ಸೆ ನೀಡಲಾಗಿದೆ.  ಈ  ಕುರಿತು ಮಾಹಿತಿ ನೀಡಿರುವ ಡಾ.ಮೆಹ್ತಾ ಪ್ರಕಾರ, ರಕ್ತದ ಗುಂಪು ಹೊಂದಿಕೆಯಾಗದ ಕಾರಣ ಯಕೃತ್ತಿನ ಕಸಿ ಮಾಡುವಲ್ಲಿ ಸಾಕಷ್ಟು ಅಪಾಯವಿತ್ತು. ವಿಶೇಷವಾಗಿ ವಯಸ್ಕರಲ್ಲಿ, ಮಕ್ಕಳ ದೇಹವು ಹೊಂದಿಕೆಯಾಗದ ರಕ್ತವನ್ನು ಹೆಚ್ಚು ಸುಲಭವಾಗಿ ಹೀರಿಕೊಳ್ಳುತ್ತದೆ, ಆದರೆ ವಯಸ್ಕರಲ್ಲಿ, ಸಾಕಷ್ಟು ಸಾಕಷ್ಟು ಸಿದ್ಧತೆಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.


ಇದನ್ನೂ ಓದಿ-12 ಗಂಟೆಗಳ ಬಳಿಕ ಕುಂಭ ರಾಶಿಯಲ್ಲಿ ಸೂರ್ಯ, 3 ರಾಶಿಗಳ ಜನರಿಗೆ ಭಾರಿ ಧನಲಾಭ, ಬಡ್ತಿ-ಇನ್ಕ್ರಿಮೆಂಟ್ ಭಾಗ್ಯ!


ಪ್ಲಾಸ್ಮಾಫೆರೆಸಿಸ್ ಪ್ರಕ್ರಿಯೆಯ ಮೂಲಕ ಪ್ರತಿಕಾಯಗಳನ್ನು ತಟಸ್ಥಗೊಳಿಸಲಾಯಿತು. ನಮ್ಮ ದೇಹಕ್ಕೆ ಯಾವುದೇ ವಿದೇಶಿ ವಸ್ತು ಬಂದರೆ, ರಕ್ತದಲ್ಲಿರುವ ಪ್ರತಿಕಾಯಗಳು ದಾಳಿ ಮಾಡಲು ಪ್ರಾರಂಭಿಸುತ್ತವೆ ಏಕೆಂದರೆ ಪ್ರತಿಕಾಯಗಳು ದೇಹವನ್ನು ರಕ್ಷಿಸಲು ಪ್ರಾರಂಭಿಸುತ್ತವೆ. ಪಾರ್ವತಿಯ ಪಿತ್ತಜನಕಾಂಗದ ವಿಷಯದಲ್ಲಿ ಹೀಗಾಗಬಾರದೆಂದು ಶಿವನ ರಕ್ತದಲ್ಲಿರುವ ಪ್ರತಿಕಾಯಗಳನ್ನು ಒಂದು ರೀತಿಯಲ್ಲಿ ಸ್ಥಿರಗೊಳಿಸಲಾಯಿತು. ಇದಾದ ಬಳಿಕ ಚೀಫ್ ಲಿವರ್ ಟ್ರಾನ್ಸ್ ಪ್ಲಾಂಟ್ ಸರ್ಜನ್ ಡಾ.ನೈಮಿಶ್ ಮೆಹ್ತಾ ಅವರನ್ನು ಹೊರತುಪಡಿಸಿ 21 ಜನರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ. 12 ಗಂಟೆಗಳ ನಡೆದ ಈ ಶಸ್ತ್ರಚಿಕಿತ್ಸೆಯಲ್ಲಿ ಹೊಂದಾಣಿಕೆಯಾಗದ ರಕ್ತವನ್ನು ಸ್ವೀಕರಿಸುವುದು ವೈದ್ಯರಿಗೆ ಸವಾಲಾಗಿತ್ತು ಆದರೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ಶಿವ ತನ್ನ ಕುಟುಂಬದೊಂದಿಗೆ ಮರುದಿನ ಮಾತನಾಡಿದ್ದಾನೆ.


ಇದನ್ನೂ ಓದಿ-Bad Cholesterol ನಿಯಂತ್ರಣ, ತೂಕ ಇಳಿಕೆಯ ಜೊತೆಗೆ ಹಲವು ಆರೋಗ್ಯ ಲಾಭಗಳನ್ನು ಹೊಂದಿದೆ ಈ ಚಹಾ!


ಬಿಹಾರದ ರಹವಾಸಿಯಾಗಿರುವ ಶಿವನ ಪ್ರಕಾರ, ನಿಜವಾದ ಅರ್ಥದಲ್ಲಿ ತನ್ನ ಪತ್ನಿ ತನ್ನ ಜೀವ ಉಳಿಸುವಲ್ಲಿ ಪಾರ್ವತಿ ದೇವಿಯ ಪಾತ್ರವನ್ನು ನಿರ್ವಹಿಸಿದ್ದಾಳೆ ಎಂದಿದ್ದಾರೆ. ನನ್ನ ಪತ್ನಿಗೆ ನಾನು ಜೀವನ ಪೂರ್ತಿ ಋಣಿಯಾಗಿದ್ದೇನೆ ಎಂದು ಆತ ಹೇಳಿದ್ದಾನೆ. ಮಹಾ-ಶಿವರಾತ್ರಿಯ ಈ ಸಂದರ್ಭದಲ್ಲಿ ನನಗೆ ಸಿಕ್ಕ ಬಹುದೊಡ್ಡ ಉಡುಗೊರೆ ಇದಾಗಿದೆ ಎಂದು ಶಿವ ಹೇಳಿದ್ದಾನೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.