ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ನಿರಂತರವಾಗಿ ಹೆಚ್ಚುತ್ತಿರುವ  ಕರೋನಾವೈರಸ್ (Coronavirus)  ಪ್ರಕರಣಗಳಿಂದ ದೆಹಲಿಯ ಉದ್ಯಮಿಗಳು ಭಯಭೀತರಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ದೆಹಲಿ ಮಾರುಕಟ್ಟೆಗಳ ಮುಚ್ಚುವಿಕೆಯ ಬಗ್ಗೆ ಆನ್‌ಲೈನ್ ಸಮೀಕ್ಷೆಯ ಮೂಲಕ ಕಾನ್ಫಿಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ದೆಹಲಿಯ ಟ್ರೇಡರ್ಸ್ ಅಸೋಸಿಯೇಷನ್‌ನ ಅಭಿಪ್ರಾಯವನ್ನು ಕೋರಿತು. CAITಯ ಸಮೀಕ್ಷೆಯಲ್ಲಿ 2800 ವ್ಯಾಪಾರಿ ಸಂಘಗಳಿಗೆ ಪ್ರಶ್ನೆಗಳನ್ನು ಕೇಳಲಾಗಿದ್ದು, ಅದರಲ್ಲಿ 2610 ಉತ್ತರಗಳನ್ನು ಸ್ವೀಕರಿಸಲಾಗಿದೆ.


ದೆಹಲಿಯಲ್ಲಿ ಮತ್ತೆ ಲಾಕ್‌ಡೌನ್ ಜಾರಿಯಾಗಲಿದೆಯೇ? ಇಲ್ಲಿದೆ ಆರೋಗ್ಯ ಸಚಿವರ ಮಹತ್ವದ ಹೇಳಿಕೆ


COMMERCIAL BREAK
SCROLL TO CONTINUE READING

CAIT ಸಮೀಕ್ಷೆ:
1. ದೆಹಲಿಯಲ್ಲಿ ಕರೋನಾ  ಕೋವಿಡ್ -19 (Covid-19) ವೇಗವಾಗಿ ಹರಡುತ್ತಿದೆ ಎಂದು 99.4 ರಷ್ಟು ವ್ಯಾಪಾರಿಗಳು ನಂಬಿದ್ದಾರೆ.


2. 92.8 ರಷ್ಟು ವ್ಯಾಪಾರಿಗಳು ಮಾರುಕಟ್ಟೆ ಮುಕ್ತವಾಗಿದ್ದರೆ ಕರೋನಾ ಮತ್ತಷ್ಟು ಹರಡಬಹುದು ಎಂದು ಭಯಭೀತರಾಗಿದ್ದಾರೆ.


3. ದೆಹಲಿಯ ಕರೋನಾದ ರೋಗಿಗಳಿಗೆ ಆರೋಗ್ಯ ಸೌಲಭ್ಯಗಳು ಸಾಕಾಗುವುದಿಲ್ಲ ಎಂದು ಶೇಕಡಾ 92.7 ರಷ್ಟು ವ್ಯಾಪಾರಿಗಳು ನಂಬಿದ್ದಾರೆ.


4. 96.6 ರಷ್ಟು ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ಕರೋನ ಹರಡುವ ಬಗ್ಗೆ ಚಿಂತಿತರಾಗಿದ್ದಾರೆ.


5. ಕರೋನಾದಿಂದಾಗಿ 88.1 ರಷ್ಟು ವ್ಯಾಪಾರಿಗಳು ಮಾರುಕಟ್ಟೆಯನ್ನು ಮುಚ್ಚುವ ಪರವಾಗಿದ್ದಾರೆ.


ದೆಹಲಿಯಲ್ಲಿ COVID 19 ಹೆಚ್ಚಾಗುತ್ತಿರುವದರಿಂದ ಸ್ಮಶಾನಕ್ಕೆ ಜಾಗಹುಡುಕಿ ಎಂದ ಡಿಡಿಎಂಎ


CAIT ತನ್ನ ಸಮೀಕ್ಷೆಯ ವರದಿಯನ್ನು ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ, ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಕಳುಹಿಸಿದೆ. ಆದ್ದರಿಂದ ದೆಹಲಿಯ ವ್ಯಾಪಾರಿಗಳ ಕಾಳಜಿಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಮತ್ತು ಶೀಘ್ರದಲ್ಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.


ಜೀವನಪೂರ್ತಿ ಲಾಕ್‌ಡೌನ್‌ನಲ್ಲಿ ಉಳಿಯಲು ಸಾಧ್ಯವಿಲ್ಲ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್


ದೆಹಲಿಯಲ್ಲಿ ಕರೋನಾಸೋಂಕಿಗೆ ಒಳಗಾದವರ ಸಂಖ್ಯೆ 36 ಸಾವಿರ ದಾಟಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 2137 ಪ್ರಕರಣಗಳು ದಾಖಲಾಗಿವೆ. ದೆಹಲಿಯಲ್ಲಿ ಒಟ್ಟು ಕರೋನಾ ರೋಗಿಗಳ ಸಂಖ್ಯೆ 36824ಕ್ಕೆ ಏರಿದೆ. ಆಸ್ಪತ್ರೆಗಳಲ್ಲಿ 22,212 ಜನರ ಚಿಕಿತ್ಸೆ ಮುಂದುವರೆದಿದೆ. 13,398 ಜನರು ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಈವರೆಗೆ 1214 ಜನರು ಸಾವನ್ನಪ್ಪಿದ್ದಾರೆ.