Diwali Firecrackers Rule 2022: ದೀಪಾವಳಿಯಂದು ಪಟಾಕಿ ಸಿಡಿಸಬಹುದೇ? ಈ ನಿಯಮಗಳನ್ನೊಮ್ಮೆ ತಿಳಿಯಿರಿ
Diwali Firecrackers guidelines 2022: ದೀಪಾವಳಿ ಹಬ್ಬದ ಆಚರಣೆಗಳ ಸಿದ್ಧತೆಗಳ ಮಧ್ಯೆ, ಕೆಲವು ರಾಜ್ಯಗಳು ಪಟಾಕಿಗಳ ಮೇಲೆ ನಿರ್ಬಂಧಗಳನ್ನು ವಿಧಿಸಿವೆ. ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧವಿದ್ದರೂ ಕೆಲವು ರಾಜ್ಯಗಳಲ್ಲಿ ಹಸಿರು ಪಟಾಕಿ ಸಿಡಿಸಲು ಮಾತ್ರ ಅವಕಾಶವಿದೆ. ಅಂತಹ ಪರಿಸ್ಥಿತಿಯಲ್ಲಿ, ಪಟಾಕಿ ಸಿಡಿಸುವ ಮೊದಲು, ಈ ನಿಯಮಗಳನ್ನು ಒಮ್ಮೆ ತಿಳಿಯಿರಿ.
Diwali Firecrackers guidelines 2022: ದೀಪಾವಳಿ ಎಂದರೆ ಬೆಳಕಿನ ಹಬ್ಬ. ವಾಸ್ತವವಾಗಿ, ಹಬ್ಬಗಳು ಪ್ರತಿಯೊಬ್ಬರಿಗೂ ವಿಭಿನ್ನ ಅರ್ಥಗಳನ್ನು ಹೊಂದಿವೆ. ಕೆಲವರಿಗೆ ದೀಪಾವಳಿ ಎಂದರೆ ಸುಂದರವಾದ ದೀಪಗಳು, ವಿದ್ಯುತ್ ದೀಪಗಳು, ಬಣ್ಣ ಬಣ್ಣದ ರಂಗೋಲಿ ಮತ್ತು ಸಿಹಿತಿಂಡಿಗಳು ನೆನಪಾಗುತ್ತವೆ. ಇನ್ನೂ ಕೆಲವರಿಗೆ ದೀಪಾವಳಿ ಎಂದರೆ ಪಟಾಕಿಗಳನ್ನು ಸಿಡಿಸಿ ಆಚರಿಸುವ ಸಂಭ್ರಮಾಚರಣೆ. ಆದರೆ, ವಾಯುಮಾಲಿನ್ಯದ ದೃಷ್ಟಿಯಿಂದ ಮತ್ತು ಕರೋನಾವೈರಸ್ ಹಾವಳಿಯಿಂದಾಗಿ ಕೆಲವು ರಾಜ್ಯಗಳಲ್ಲಿ ಪಟಾಕಿ ಸಿಡಿಸುವ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಪಟಾಕಿ ಸಿಡಿಸುವ ಮೊದಲು, ಈ ನಿಯಮಗಳನ್ನು ಒಮ್ಮೆ ತಿಳಿಯಿರಿ.
ದೀಪಾವಳಿಯಲ್ಲಿ ಪಟಾಕಿಗಳನ್ನು ಸುಡುವುದರಿಂದ ಮಾಲಿನ್ಯದ ಮಟ್ಟವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದು ಅನೇಕ ರೀತಿಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪಟಾಕಿಯನ್ನು ನಿಷೇಧಿಸಲಾಗಿದೆ. ಕೆಲವು ರಾಜ್ಯಗಳಲ್ಲಿ ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೂ ಸಹ ಹಸಿರು ಪಟಾಕಿಗಳನ್ನು ಮಾತ್ರ ಬಳಸಳು ಅನುಮತಿ ನೀಡಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಟಾಕಿ ಸಂಪೂರ್ಣ ನಿಷೇಧ:
ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರವು ದೀಪಾವಳಿಯಿಂದ ಹೊಸ ವರ್ಷದವರೆಗೆ ಯಾವುದೇ ರೀತಿಯ ಪಟಾಕಿಗಳನ್ನು ನಿಷೇಧಿಸಿದೆ. ಜನವರಿ 1, 2023 ರವರೆಗೆ ದೆಹಲಿಯಲ್ಲಿ ಪಟಾಕಿ ಮಾರಾಟ ಮತ್ತು ಖರೀದಿಗೆ ಸಂಪೂರ್ಣ ನಿಷೇಧವಿದೆ. ಆದೇಶ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿ ಸರ್ಕಾರ ಮತ್ತು ಪರಿಸರ ಸಚಿವರು ಸೂಚನೆ ನೀಡಿದ್ದಾರೆ. ಅಂದರೆ ಪಟಾಕಿ ಸಿಡಿಸಿದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. ದೆಹಲಿಯಲ್ಲಿ, ಪಟಾಕಿ ಸುಡುವ ವ್ಯಕ್ತಿಗೆ 6 ತಿಂಗಳುಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು, ನಂತರ ಪಟಾಕಿ ಮಾರಾಟ ಅಥವಾ ಸಂಗ್ರಹಿಸಿದರೆ 3 ವರ್ಷ ಜೈಲು ಶಿಕ್ಷೆ ವಿಧಿಸಬಹುದು.
ಇದನ್ನೂ ಓದಿ- Diwali 2022: 2000 ವರ್ಷಗಳ ಬಳಿಕ ದೀಪಾವಳಿಯಂದು ಸುಖ-ಸಮೃದ್ಧಿ ಹೆಚ್ಚಿಸಲು ನಿರ್ಮಾಣಗೊಳ್ಳುತ್ತಿವೆ 5 ರಾಜಯೋಗಗಳು
ಪಂಜಾಬ್‌ನಲ್ಲಿ, ದೀಪಾವಳಿಯಂದು ರಾತ್ರಿ 8 ರಿಂದ 10 ರವರೆಗೆ ಎರಡು ಗಂಟೆಗಳ ಕಾಲ ಮಾತ್ರ ಪಟಾಕಿಗಳನ್ನು ಸಿಡಿಸಲು ಅನುಮತಿ:
ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವೂ ಇದೆ, ಆದರೆ ಈ ರಾಜ್ಯದಲ್ಲಿ ಪಟಾಕಿ ಅಭಿಮಾನಿಗಳಿಗೆ ಸ್ವಲ್ಪ ಪರಿಹಾರವನ್ನು ನೀಡಲಾಗಿದೆ. ಪಂಜಾಬ್‌ನಲ್ಲಿ, ದೀಪಾವಳಿಯಂದು ರಾತ್ರಿ 8 ರಿಂದ 10 ರವರೆಗೆ ಎರಡು ಗಂಟೆಗಳ ಕಾಲ ಮಾತ್ರ ಪಟಾಕಿಗಳನ್ನು ಸಿಡಿಸಲು ಅನುಮತಿಸಲಾಗಿದೆ. ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಬಹುದು. ರಾಜ್ಯದ ಪರಿಸರ ಸಚಿವ ಗುರ್ಮೀತ್ ಸಿಂಗ್ ಪ್ರಕಾರ, ಹಸಿರು ಪಟಾಕಿ ಹೊರತುಪಡಿಸಿ, ಎಲ್ಲಾ ರೀತಿಯ ಪಟಾಕಿಗಳ ಮಾರಾಟ ಮತ್ತು ಸಂಗ್ರಹಣೆಯನ್ನು ನಿಷೇಧಿಸಲಾಗಿದೆ.
ಹರಿಯಾಣದಲ್ಲಿ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಪಟಾಕಿಗಳನ್ನು ನಿಷೇಧಿಸಲಾಗಿದೆ:
ಹರಿಯಾಣದಲ್ಲಿ, ಹಸಿರು ಪಟಾಕಿಗಳನ್ನು ಹೊರತುಪಡಿಸಿ ಎಲ್ಲಾ ಪಟಾಕಿಗಳ ಮಾರಾಟ, ಸಂಗ್ರಹಣೆ ಮತ್ತು ತಯಾರಿಕೆಯನ್ನು ನಿಷೇಧಿಸಲಾಗಿದೆ. ಸರ್ಕಾರದ ಆದೇಶದ ಪ್ರಕಾರ ಉಳಿದೆಲ್ಲ ಪಟಾಕಿಗಳು ವಿಷಕಾರಿ ಅನಿಲವನ್ನು ಹೊರಸೂಸುತ್ತವೆ ಹಾಗಾಗಿ ಹಸಿರು ಪಟಾಕಿ ಹೊರತುಪಡಿಸಿ ಉಳಿದೆಲ್ಲ ಪಟಾಕಿಗಳನ್ನು ನಿಷೇಧಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಪಟಾಕಿ ಸಿಡಿಸಲು ಇಲ್ಲ ನಿಷೇಧ, ಆದರೆ...
ಉತ್ತರ ಪ್ರದೇಶದಲ್ಲಿ ಪಟಾಕಿ ಸಿಡಿಸಲು ಯಾವುದೇ ಕಟ್ಟುನಿಟ್ಟಿನ ನಿಷೇಧವಿಲ್ಲ, ಆದರೆ ನಿಯಮಗಳು ಕಠಿಣವಾಗಿವೆ. ದೀಪಾವಳಿಗೆ ಪಟಾಕಿ ಅಂಗಡಿಗಳನ್ನು ಜನಸಂದಣಿಯಿಂದ ದೂರವಿಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ. ಪರಿಸರ ಮತ್ತು ಆರೋಗ್ಯಕ್ಕೆ ಸೂಕ್ಷ್ಮವಾಗಿರುವ ಪಟಾಕಿಗಳ ಖರೀದಿ ಮತ್ತು ಮಾರಾಟವನ್ನು ತಡೆಯಬೇಕು ಎಂದು ಭಾನುವಾರ ಹೇಳಿದರು. ಆದಾಗ್ಯೂ, ಉತ್ತರ ಪ್ರದೇಶದಲ್ಲಿ ಪಟಾಕಿ ಅಂಗಡಿಗಳು ಜನವಸತಿ ಪ್ರದೇಶಗಳಿಂದ ದೂರದಲ್ಲಿವೆ ಮತ್ತು ಅಲ್ಲಿ ಅಗ್ನಿಶಾಮಕ ದಳದ ಸರಿಯಾದ ವ್ಯವಸ್ಥೆ ಇದೆ ಎಂದು ಖಚಿತಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ- Diwali 2022 Yog: ನಾಳೆ ಈ ಮೂರು ರಾಶಿಗಳ ಮೇಲಿರಲಿದೆ ಲಕ್ಷ್ಮಿಯ ವಿಶೇಷ ಕೃಪೆ
ಪಶ್ಚಿಮ ಬಂಗಾಳದಲ್ಲಿ ಹಸಿರು ಪಟಾಕಿಗಳು ಮಾತ್ರ ಬಳಸಲು ಅವಕಾಶ:
ಕೋಲ್ಕತ್ತಾ ಹೈಕೋರ್ಟ್‌ನ ನಿರ್ದೇಶನದಂತೆ ಅಕ್ಟೋಬರ್ 24 ರಂದು ಕಾಳಿ ಪೂಜೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ಹಸಿರು ಪಟಾಕಿಗಳನ್ನು ಮಾತ್ರ ಅನುಮತಿಸಿದೆ. ಹಬ್ಬದ ಸಂದರ್ಭದಲ್ಲಿ ಕ್ಯೂಆರ್ ಕೋಡ್ ಹೊಂದಿರುವ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಯಾವುದೇ ಪಟಾಕಿಗಳನ್ನು ಆಮದು ಮಾಡಿಕೊಳ್ಳಬಾರದು ಮತ್ತು ಮಾರಾಟ ಮಾಡಬಾರದು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಹಸಿರು ಪಟಾಕಿ ಹೊರತುಪಡಿಸಿ ಎಲ್ಲಾ ರೀತಿಯ ಪಟಾಕಿಗಳ ಮಾರಾಟ ಮತ್ತು ಸಂಗ್ರಹಣೆಗೆ ನಿಷೇಧವಿದೆ. ದೀಪಾವಳಿಯಂದು ರಾತ್ರಿ 8 ರಿಂದ 10 ರವರೆಗೆ ಪಟಾಕಿ ಸಿಡಿಸಲು ಅವಕಾಶವಿರುತ್ತದೆ. ಮತ್ತೊಂದೆಡೆ, ಛಠ್ ಪೂಜೆಯ ದಿನದಂದು ನೀವು ಬೆಳಿಗ್ಗೆ 6 ರಿಂದ 8 ರವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಸಾಧ್ಯವಾಗುತ್ತದೆ.
ತಮಿಳುನಾಡಿನಲ್ಲಿ ಪಟಾಕಿ ಸಿಡಿಸಲು ಎರಡು ಗಂಟೆ ನಿಗದಿ:
ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಪಟಾಕಿ ಸಿಡಿಸಲು ಎರಡು ಗಂಟೆ ನಿಗದಿಪಡಿಸಲಾಗಿದೆ. ಈ ಬಾರಿಯೂ ಈ ವಿನಾಯಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ಹಬ್ಬದ ದಿನ ತಮಿಳುನಾಡಿನಲ್ಲಿದ್ದರೆ ರಾತ್ರಿ 7ರಿಂದ 9ರವರೆಗೆ ಪಟಾಕಿ ಸಿಡಿಸಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.