ನವದೆಹಲಿ: ಡಿಸೆಂಬರ್ 7ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಅವರು, ಡಿ.29ರವರೆಗೆ ಒಟ್ಟು 17 ದಿನಗಳ ಕಾಲ ಸಂಸತ್ತಿನ ಕಲಾಪ ನಡೆಯಲಿದೆ ಅಂತಾ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

'2022ರ ಸಂಸತ್ತಿನ ಚಳಿಗಾಲದ ಅಧಿವೇಶನವು ಡಿ.7ರಿಂದ ಪ್ರಾರಂಭವಾಗಿ ಡಿ.29 ರವರೆಗೆ ನಡೆಯಲಿದೆ. ಒಟ್ಟು 23 ದಿನಗಳ ಅವಧಿಯಲ್ಲಿ 17 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಅಮೃತ್ ಕಾಲದ ಅಧಿವೇಶನದಲ್ಲಿ ಶಾಸಕಾಂಗ ವ್ಯವಹಾರ, ಇತರ ವಿಷಯಗಳು ಮತ್ತು ರಚನಾತ್ಮಕ ಚರ್ಚೆಗಾಗಿ ಎದುರು ನೋಡಲಾಗುತ್ತಿದೆ’ ಎಂದು ಸಚಿವರು ತಿಳಿಸಿದ್ದಾರೆ.


ಇದನ್ನೂ ಓದಿ: Shraddha Murder Case: “ಮೋದಿ ಸರ್ಕಾರದಿಂದಾಗಿ ಶ್ರದ್ಧಾ ಪ್ರಕರಣದಂತೆ ಅನೇಕ ಘಟನೆಗಳು ಸಂಭವಿಸಿವೆ”


Viral Post: ಅಣೆಕಟ್ಟಿನ ಬಗ್ಗೆ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿ ಕೊಟ್ಟ ಉತ್ತರ ನೋಡಿ ತಲೆಕೆರೆದುಕೊಂಡ ಶಿಕ್ಷಕ!


ದಾಳಿಗೆ ಜೋಶಿ ಖಂಡನೆ


ಬಿಜೆಪಿಯ ‘ಸಂಸತ್ ಪ್ರವಾಸ ಯೋಜನೆ’ ಅಂಗವಾಗಿ ತೆಲಂಗಾಣಕ್ಕೆ ಬಂದಿದ್ದ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ನಿವಾಸದ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದಾರೆ. ‘ಟಿಆರ್‌ಎಸ್‌ನ ಈ ಧೋರಣೆ ಮತ್ತು ಅದರ ಗೂಂಡಾಗಿರಿ, ಜನಪ್ರತಿನಿಧಿಗಳಿಗೆ ಮತ್ತು ಬಿಜೆಪಿಯನ್ನು ಬೆಂಬಲಿಸುವವರಿಗೆ ಬೆದರಿಕೆ ಹಾಕುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಈ ಹಿಂದೆ ತೆಲಂಗಾಣ ಹೆಚ್ಚುವರಿ ರಾಜ್ಯವಾಗಿತ್ತು, ಆದರೆ ಈಗ ಸಾಲದ ಸುಳಿಯಲ್ಲಿ ಸಿಲುಕಿರುವ ರಾಜ್ಯವಾಗಿದೆ’ ಎಂದು ಜೋಶಿ ಆರೋಪಿಸಿದರು.


‘ಕೆಸಿಆರ್, ಕೆಟಿಆರ್ ಅವರಂತಹ ಕೆಲವು ಜನರು, ಅವರ ಕುಟುಂಬಗಳು ಮತ್ತು ಕೆಲವು ಸಚಿವರು ಶ್ರೀಮಂತರಾಗಿದ್ದಾರೆ. ಆದರೆ ರಾಜ್ಯ ಮತ್ತು ಅದರ ಜನರು ದಿನದಿಂದ ದಿನಕ್ಕೆ ಬಡವಾಗುತ್ತಿದ್ದಾರೆ’ ಎಂದು ಅವರು ಟೀಕಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.