Shraddha Murder Case: “ಮೋದಿ ಸರ್ಕಾರದಿಂದಾಗಿ ಶ್ರದ್ಧಾ ಪ್ರಕರಣದಂತೆ ಅನೇಕ ಘಟನೆಗಳು ಸಂಭವಿಸಿವೆ”

Shraddha Murder Case: ಎಐಯುಡಿಎಫ್ ಶಾಸಕ ಅಮಿನುಲ್ ಇಸ್ಲಾಂ ಮಾತನಾಡಿ, ಮೋದಿ ಸರ್ಕಾರ ಬರುವ ಮೊದಲು ಯಾರೋ ತುಂಡು ತುಂಡಾಗಿ ಕೊಂದಂತಹ ಘಟನೆಗಳು ನಡೆದಿರಲಿಲ್ಲ. ಬಿಜೆಪಿಯವರು ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳುವುದಿಲ್ಲ. ನರೇಂದ್ರ ಮೋದಿಯವರು ದೀರ್ಘಕಾಲ ಉಳಿದರೆ, ಪ್ರತಿ ನಗರದಲ್ಲಿ ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ.

Written by - Bhavishya Shetty | Last Updated : Nov 19, 2022, 08:50 AM IST
    • ಶ್ರದ್ಧಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಯುಡಿಎಫ್ ಶಾಸಕನ ವಿವಾದಾತ್ಮಕ ಹೇಳಿಕೆ
    • ಮೋದಿ ಸರಕಾರದಿಂದಾಗಿಯೇ ಶ್ರದ್ಧಾ ಪ್ರಕರಣದಂತಹ ಕೇಸ್ ಗಳು ನಡೆದಿದೆ
    • ಎಐಯುಡಿಎಫ್ ಶಾಸಕ ಅಮಿನುಲ್ ಇಸ್ಲಾಂ ಹೇಳಿಕೆ
Shraddha Murder Case: “ಮೋದಿ ಸರ್ಕಾರದಿಂದಾಗಿ ಶ್ರದ್ಧಾ ಪ್ರಕರಣದಂತೆ ಅನೇಕ ಘಟನೆಗಳು ಸಂಭವಿಸಿವೆ” title=
shraddha case

Shraddha Murder Case: ದೆಹಲಿಯಲ್ಲಿ ನಡೆದ ಶ್ರದ್ಧಾ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಆರೋಪಿ ಅಫ್ತಾಬ್ ಶ್ರದ್ಧಾಳನ್ನು 35 ತುಂಡುಗಳಾಗಿ ಕತ್ತರಿಸಿ ಮೆಹ್ರೌಲಿ ಅರಣ್ಯ ಸೇರಿದಂತೆ ವಿವಿಧೆಡೆ ಎಸೆದಿದ್ದಾನೆ. ಪೊಲೀಸರು ಇನ್ನೂ ಶ್ರದ್ಧಾ ಶವದ ತುಂಡುಗಳಿಗಾಗಿ ಹುಡುಕಾಟದಲ್ಲಿ ತೊಡಗಿದ್ದಾರೆ. ಈ ಮಧ್ಯೆ, ಶ್ರದ್ಧಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಯುಡಿಎಫ್ ಶಾಸಕ ಅಮಿನುಲ್ ಇಸ್ಲಾಂ ಅವರ ವಿವಾದಾತ್ಮಕ ಹೇಳಿಕೆ ಅಸ್ಸಾಂನಲ್ಲಿ ಮುನ್ನೆಲೆಗೆ ಬಂದಿದೆ. ಮೋದಿ ಸರಕಾರದಿಂದಾಗಿಯೇ ಶ್ರದ್ಧಾ ಪ್ರಕರಣದಂತಹ ಕೇಸ್ ಗಳು ನಡೆದಿದೆ ಎಂದು ಶಾಸಕ ಅಮಿನುಲ್ ಇಸ್ಲಾಂ ಹೇಳಿದ್ದಾರೆ.

ಇದನ್ನೂ ಓದಿ: Shraddha Murder Case: ಅಫ್ತಾಬ್ ಪೊಲೀಸ್ ಕಸ್ಟಡಿ ವಿಸ್ತರಣೆ, ಗಲ್ಲು ಶಿಕ್ಷೆಗೆ ವಕೀಲರ ಆಗ್ರಹ

ಎಐಯುಡಿಎಫ್ ಶಾಸಕ ಅಮಿನುಲ್ ಇಸ್ಲಾಂ ಮಾತನಾಡಿ, ಮೋದಿ ಸರ್ಕಾರ ಬರುವ ಮೊದಲು ಯಾರೋ ತುಂಡು ತುಂಡಾಗಿ ಕೊಂದಂತಹ ಘಟನೆಗಳು ನಡೆದಿರಲಿಲ್ಲ. ಬಿಜೆಪಿಯವರು ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳುವುದಿಲ್ಲ. ನರೇಂದ್ರ ಮೋದಿಯವರು ದೀರ್ಘಕಾಲ ಉಳಿದರೆ, ಪ್ರತಿ ನಗರದಲ್ಲಿ ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ.

ಪೊಲೀಸರ ಪ್ರಕಾರ, ಶ್ರದ್ಧಾ ಆರೋಪಿ ಅಫ್ತಾಬ್‌ನ ಲಿವ್-ಇನ್ ಪಾರ್ಟ್ ನರ್. ಇಬ್ಬರೂ ದೆಹಲಿಯ ಛತ್ತರ್‌ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಮೇ 18, 2022 ರಂದು, ಅಫ್ತಾಬ್ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದನು. ಇದಾದ ಬಳಿಕ ಶ್ರದ್ಧಾ ಶವವನ್ನು ಮರೆಮಾಚಲು ಗರಗಸದಿಂದ 35 ತುಂಡು ಮಾಡಿ ಸುಮಾರು 3 ವಾರಗಳ ಕಾಲ ಮನೆಯಲ್ಲಿಟ್ಟಿದ್ದ. ಮೃತದೇಹದ ತುಂಡುಗಳು ಕೊಳೆಯದಂತೆ ಅಫ್ತಾಬ್ ಹೊಸ ಫ್ರಿಡ್ಜ್ ಕೂಡ ಖರೀದಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ:  ಶ್ರದ್ಧಾ ದೆವ್ವವಾಗಿ ಬಂದು ಅಫ್ತಾಬ್‍ನನ್ನು 70 ತುಂಡು ಮಾಡ್ಬೇಕು: ರಾಮ್ ಗೋಪಾಲ್ ವರ್ಮಾ

ಆರೋಪದ ಪ್ರಕಾರ, ಅಫ್ತಾಬ್ ಶ್ರದ್ಧಾಳ ದೇಹದ ತುಂಡುಗಳನ್ನು ಮೆಹ್ರೌಲಿ ಕಾಡಿನಲ್ಲಿ ಎಸೆದಿದ್ದಾನೆ. ಆದರೆ, ನಂತರ ತನಿಖೆಯಲ್ಲಿ ಅಫ್ತಾಬ್ ಶ್ರದ್ಧಾ ದೇಹದ ತುಂಡುಗಳನ್ನು ಹಲವೆಡೆ ಎಸೆದಿರುವುದು ಬೆಳಕಿಗೆ ಬಂದಿದೆ. ಶುಕ್ರವಾರವೂ ಪೊಲೀಸರು ಮೃತದೇಹದ ತುಣುಕುಗಳನ್ನು ಹುಡುಕಲು ಹರಿಯಾಣದ ಗುರುಗ್ರಾಮ್‌ಗೆ ತೆರಳಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News