Zomato Co-founder Mohit Gupta Resign: ಆನ್ಲೈನ್ ಫುಡ್ ಡೆಲಿವರಿ ಕಂಪನಿ ಜೊಮಾಟೊ ಬಗ್ಗೆ ದೊಡ್ಡ ಅಪ್ಡೇಟ್ ಹೊರಬಿದ್ದಿದೆ. ಕಂಪನಿಯ ಸಹ ಸಂಸ್ಥಾಪಕ ಮೋಹಿತ್ ಗುಪ್ತಾ ಕಂಪನಿಗೆ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆಗೆ ಕಾರಣವನ್ನೂ ಅವರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Shraddha Murder Case: ಅಫ್ತಾಬ್ ಪೊಲೀಸ್ ಕಸ್ಟಡಿ ವಿಸ್ತರಣೆ, ಗಲ್ಲು ಶಿಕ್ಷೆಗೆ ವಕೀಲರ ಆಗ್ರಹ
ಜೊಮಾಟೊ ಕಂಪನಿಯು ತನ್ನ ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಶುಕ್ರವಾರ ಹೇಳಿಕೆ ನೀಡಿದೆ. ನಾಲ್ಕೂವರೆ ವರ್ಷಗಳ ಹಿಂದೆ ಕಂಪನಿ ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮೋಹಿತ್ ಗುಪ್ತಾ. ಇದರ ನಂತರ 2020ರಲ್ಲಿ ಬಡ್ತಿ ಪಡೆದ ಅವರು, ಕಂಪನಿಯ ಆಹಾರ ವಿತರಣಾ ವ್ಯವಹಾರದ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮೋಹಿತ್ ಗುಪ್ತಾ ರಾಜೀನಾಮೆಗೆ ಕಾರಣ:
ಮೋಹಿತ್ ಗುಪ್ತಾ ಅವರು ತಮ್ಮ ರಾಜೀನಾಮೆಯನ್ನು ಕಂಪನಿಗೆ ಕಳುಹಿಸುವ ಮೂಲಕ ತಮ್ಮ ನಿರ್ಧಾರವನ್ನು ತಿಳಿಸಿದರು. ಈ ಸಂದೇಶದಲ್ಲಿ ಗುಪ್ತಾ, 'ಹೊಸ ಸಾಹಸದ ಹುಡುಕಾಟದಲ್ಲಿ ನಾನು ಜೊಮಾಟೊವನ್ನು ತೊರೆಯಲು ನಿರ್ಧರಿಸಿದ್ದೇನೆ, ಇದರಿಂದ ನಾನು ಜೀವನವನ್ನು ಆನಂದಿಸಬಹುದು' ಎಂದು ಹೇಳಿದ್ದಾರೆ. ಕಂಪನಿಯು ನಂತರ ಮೋಹಿತ್ ಗುಪ್ತಾ ಅವರ ಈ ಸಂದೇಶವನ್ನು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ಗೆ (BSE) ಕಂಪನಿಯಲ್ಲಿನ ಪುನರ್ರಚನೆಯ ಬಗ್ಗೆ ತಿಳಿಸಿದೆ.
ಇದನ್ನೂ ಓದಿ: ಶ್ರದ್ಧಾ ದೆವ್ವವಾಗಿ ಬಂದು ಅಫ್ತಾಬ್ನನ್ನು 70 ತುಂಡು ಮಾಡ್ಬೇಕು: ರಾಮ್ ಗೋಪಾಲ್ ವರ್ಮಾ
'ಮುಖ್ಯ ವ್ಯವಸ್ಥಾಪಕ ಸ್ಥಾನ ಇರಲಿಲ್ಲ'
ಮೋಹಿತ್ ಗುಪ್ತಾ ತಮ್ಮ ಸ್ವಂತ ಇಚ್ಛೆಯ ಮೇರೆಗೆ ಜೊಮಾಟೊದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂದು ಕಂಪನಿ ತಿಳಿಸಿದೆ. ಕಂಪನಿಗಳ ಕಾಯಿದೆ 2013 ರ ಅಡಿಯಲ್ಲಿ ಅವರು ಜೊಮಾಟೊದಲ್ಲಿ ಮುಖ್ಯ ವ್ಯವಸ್ಥಾಪಕ ಹುದ್ದೆಯಲ್ಲಿರಲಿಲ್ಲ. ಮೋಹಿತ್ ಗುಪ್ತಾ ಮೊದಲು, 2021 ರಲ್ಲಿ ಕಂಪನಿಯ ಇನ್ನೊಬ್ಬ ಸಹ-ಸಂಸ್ಥಾಪಕ ಗೌರವ್ ಗುಪ್ತಾ ರಾಜೀನಾಮೆ ನೀಡಿದ್ದರು. ಅವರು Zomato ನಲ್ಲಿ ಪೂರೈಕೆಯ ಮುಖ್ಯಸ್ಥರಾಗಿದ್ದರು. ಮೋಹಿತ್ ಮತ್ತು ಗೌರವ್ ಗುಪ್ತಾ ದೀಪಿಂದರ್ ಗೋಯಲ್ ಅವರೊಂದಿಗೆ ಜೊಮಾಟೊವನ್ನು ಪ್ರಾರಂಭಿಸಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.