Viral Post: ಅಣೆಕಟ್ಟಿನ ಬಗ್ಗೆ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿ ಕೊಟ್ಟ ಉತ್ತರ ನೋಡಿ ತಲೆಕೆರೆದುಕೊಂಡ ಶಿಕ್ಷಕ!

Viral Post: ಭಾಕ್ರಾ ನಂಗಲ್ ಅಣೆಕಟ್ಟಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರವನ್ನು ಓದಿದ ನಂತರ ಶಿಕ್ಷಕರು ಆಶ್ಚರ್ಯಚಕಿತರಾದರು. ಏಕೆಂದರೆ ಆ ಉತ್ತರದಲ್ಲಿ ವಿದ್ಯಾರ್ಥಿಯು ಹೀಗೆ ಬರೆದಿದ್ದ. “ಸಟ್ಲೆಜ್ ನದಿಯ ಮೇಲೆ ಭಾಕ್ರಾ ನಂಗಲ್ ಅಣೆಕಟ್ಟನ್ನು ನಿರ್ಮಿಸಲಾಗಿದೆ” ಎಂದು ಬರೆದಿದ್ದ. ಇದು ಒಂದೇ ಒಂದು ವಿಷಯ ತಿಳಿದಿತ್ತು ಎಂದು ತೋರುತ್ತದೆ.

Written by - Bhavishya Shetty | Last Updated : Nov 19, 2022, 09:32 AM IST
    • ಕೆಲವು ಮಕ್ಕಳು ತಮ್ಮ ಚೇಷ್ಟೆಯಿಂದ ತಮಾಷೆಯ ಸನ್ನಿವೇಷವನ್ನು ಸೃಷ್ಟಿಸುತ್ತಾರೆ
    • ವಿದ್ಯಾರ್ಥಿಯೊಬ್ಬನ ಉತ್ತರ ಪತ್ರಿಕೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ
    • ಭಾಕ್ರಾ ನಂಗಲ್ ಅಣೆಕಟ್ಟಿನ ಬಗ್ಗೆ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿ ವಿಚಿತ್ರವಾಗಿ ಉತ್ತರ ನೀಡಿದ್ದಾನೆ
Viral Post: ಅಣೆಕಟ್ಟಿನ ಬಗ್ಗೆ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿ ಕೊಟ್ಟ ಉತ್ತರ ನೋಡಿ ತಲೆಕೆರೆದುಕೊಂಡ ಶಿಕ್ಷಕ! title=
Viral News

Viral Post: ಮಾನವ ಜೀವನದಲ್ಲಿ ಶಿಕ್ಷಣದ ಪ್ರಾಮುಖ್ಯತೆ ತುಂಬಾ ಹೆಚ್ಚಾಗಿದೆ. ಜ್ಞಾನವು ಉತ್ತಮ ವ್ಯಕ್ತಿತ್ವವನ್ನು ನಿರ್ಮಿಸುತ್ತದೆ. ಕೆಲವು ಮಕ್ಕಳು ಅಧ್ಯಯನದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಆದರೆ ಕೆಲವರು ಯಾವಾಗಲೂ ಓದುವಿಕೆಯಿಂದ ದೂರ ಓಡುತ್ತಾರೆ. ಆದರೆ ಕೆಲವು ಮಕ್ಕಳು ತಮ್ಮ ಚೇಷ್ಟೆಯಿಂದ ತಮಾಷೆಯ ಸನ್ನಿವೇಷವನ್ನು ಸೃಷ್ಟಿಸುತ್ತಾರೆ. ಅಂತೆಯೇ ವಿದ್ಯಾರ್ಥಿಯೊಬ್ಬನ ಉತ್ತರ ಪತ್ರಿಕೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಇದನ್ನೂ ಓದಿ: 2020ರಲ್ಲೇ ಶ್ರದ್ಧಾ ಹತ್ಯೆಗೆ ಸಂಚು: ಅಂದೇ ಅಫ್ತಾಬ್‌ನನ್ನು ಬಂಧಿಸಿದ್ದರೆ ಬದುಕುತ್ತಿತ್ತು ಜೀವ..!

ಇಲ್ಲಿ ಭಾಕ್ರಾ ನಂಗಲ್ ಅಣೆಕಟ್ಟಿನ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಶ್ನೆಯನ್ನು ಕೇಳಲಾಗಿದ್ದು, ಓರ್ವ ವಿದ್ಯಾರ್ಥಿ ಮಾತ್ರ ವಿಚಿತ್ರವಾಗಿ ಉತ್ತರ ನೀಡಿದ್ದಾನೆ. ಇದನ್ನು ಕಂಡ ಶಿಕ್ಷಕ ಶಾಕ್ ಆಗಿದ್ದಾರೆ.

ಭಾಕ್ರಾ ನಂಗಲ್ ಅಣೆಕಟ್ಟಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರವನ್ನು ಓದಿದ ನಂತರ ಶಿಕ್ಷಕರು ಆಶ್ಚರ್ಯಚಕಿತರಾದರು. ಏಕೆಂದರೆ ಆ ಉತ್ತರದಲ್ಲಿ ವಿದ್ಯಾರ್ಥಿಯು ಹೀಗೆ ಬರೆದಿದ್ದ. “ಸಟ್ಲೆಜ್ ನದಿಯ ಮೇಲೆ ಭಾಕ್ರಾ ನಂಗಲ್ ಅಣೆಕಟ್ಟನ್ನು ನಿರ್ಮಿಸಲಾಗಿದೆ” ಎಂದು ಬರೆದಿದ್ದ. ಇದು ಒಂದೇ ಒಂದು ವಿಷಯ ತಿಳಿದಿತ್ತು ಎಂದು ತೋರುತ್ತದೆ. ಆದರೆ ಪುಟ ತುಂಬುವ ಸಲುವಾಗಿ ಅಲ್ಲಿ ಇಲ್ಲಿ ತಲೆ-ಕಾಲು ಇಲ್ಲದೇ ಮಾತನಾಡಿದ್ದು, ಇದನ್ನು ಓದಿ ಸಾಮಾಜಿಕ ಜಾಲತಾಣಿಗರೂ ನಗೆಗಡಲಲ್ಲಿ ತೇಲಿಸಿದೆ.

ಭಾಕ್ರಾ ನಂಗಲ್ ಅಣೆಕಟ್ಟಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ, ಆತ ಅದನ್ನು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು, ಸರ್ದಾರ್ ಪಟೇಲ್ ಮತ್ತು ಮಧುಬಾಲಾ ಅವರಿಗೆ ಲಿಂಕ್ ಮಾಡಿದ್ದಾನೆ.

ವಿದ್ಯಾರ್ಥಿಯ ಈ ವೈರಲ್ ಉತ್ತರವನ್ನು ಫನ್ ಕಿ ಲೈಫ್ ಎಂಬ ಖಾತೆಯಿಂದ Instagram ನಲ್ಲಿ ಹಂಚಿಕೊಂಡಿದೆ. ಭಾಕ್ರಾ ನಂಗಲ್ ಅಣೆಕಟ್ಟಿಗೆ ಸಂಬಂಧಿಸಿದಂತೆ ವಿದ್ಯಾರ್ಥಿ ನೀಡಿದ ಈ ಉತ್ತರವನ್ನು ಇಲ್ಲಿಯವರೆಗೆ 27 ಸಾವಿರಕ್ಕೂ ಹೆಚ್ಚು ಬಳಕೆದಾರರು ಲೈಕ್ ಮಾಡಿದ್ದಾರೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇಂತಹ ಉತ್ತರ ಬರೆದ ವಿದ್ಯಾರ್ಥಿಗೆ ಶಿಕ್ಷಕರು 10ಕ್ಕೆ 0 ಅಂಕ ನೀಡಿದರೂ ಸಾಮಾಜಿಕ ಜಾಲತಾಣ ಬಳಕೆದಾರರ ಮನ ಗೆದ್ದಿದ್ದಾರೆ.

ಇದನ್ನೂ ಓದಿ: Shraddha Walkar New Chat Viral:“ಹಾಸಿಗೆಯಿಂದ ಏಳಲಾಗುತ್ತಿಲ್ಲ”: ಅಫ್ತಾಬ್ ಕ್ರೌರ್ಯದ ಸತ್ಯ ಬಯಲಿಗೆ.. ಶ್ರದ್ಧಾ ಮೆಸೇಜ್ ಓದಿ

ವೈರಲ್ ಪೋಸ್ಟ್‌ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಹೆಚ್ಚಿನ ಬಳಕೆದಾರರು ನಗುವ ಎಮೋಜಿಯೊಂದಿಗೆ ಕಾಮೆಂಟ್ ಮಾಡಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News