ನವದೆಹಲಿ : ಇಲ್ಲೊಬ್ಬ ಮಹಿಳೆ ಕೇವಲ 3 ತಿಂಗಳ ಅಂತರದಲ್ಲಿ ಎರಡು ಬಾರಿ ಮಗುವಿಗೆ ಜನ್ಮ ನೀಡಿದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ನಡೆದಿರುವುದು ಬಿಹಾರದ ಸಮಸ್ತಿಪುರದಲ್ಲಿ (Samastipur). ಇಲ್ಲಿ ಮಹಿಳೆ ಎರಡು ಬಾರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ದಾಖಲೆಗಳಲ್ಲಿಯೂ ಇದು ದಾಖಲಾಗಿದೆ. 


COMMERCIAL BREAK
SCROLL TO CONTINUE READING

ಸರ್ಕಾರದ ಯೋಜನೆಯ ಲಾಭ ಪಡೆಯಲು ವಂಚನೆ :
ಮಾಹಿತಿಯ ಪ್ರಕಾರ, ಈ ಪ್ರಕರಣವು ಸಮಸ್ತಿಪುರದ ಉಜಿಯಾರಪುರ ಪಿಎಚ್‌ಸಿಯಲ್ಲಿ ನಡೆದಿದೆ. ಹರ್ಪುರ್ ರೆಬಾರಿ ಗ್ರಾಮದ ಮಹಿಳೆಯೊಬ್ಬರು ಉಜಿಯಾರ್‌ಪುರ ಆಸ್ಪತ್ರೆಯಲ್ಲಿ (Hospital) ಎರಡು ಬಾರಿ ದಾಖಲಾಗಿರುವುದಾಗಿ ತೋರಿಸಲಾಗಿದೆ.   ಜನನಿ ಬಾಲ ಸುರಕ್ಷಾ ಯೋಜನೆಯ (Jananai bala suraksha yojana) ಲಾಭ ಪಡೆಯಲು ಮಹಿಳೆ ಈ ವಂಚನೆ ಎಸಗಿರುವುದಾಗಿ ತಿಳಿದು ಬಂದಿದೆ.  


ಇದನ್ನೂ ಓದಿ :  Video : ಬಾಹುಬಲಿ ಗೊಲ್ಗಪ್ಪಾವನ್ನು ಯಾವತ್ತಾದರೂ ತಿಂದಿದ್ದೀರಾ? ಈ ಪಾನೀಪುರಿಯಲ್ಲಿ ಇರುತ್ತದೆ ಐದು ಬಗೆಯ ನೀರು


3 ತಿಂಗಳಲ್ಲಿ 2 ಹೆರಿಗೆ :
ಮಾಧ್ಯಮಗಳ ವರದಿ ಪ್ರಕಾರ, ಗ್ರಾಮದ ನಿವಾಸಿ ಆಶಾ ರೀತಾ ದೇವಿ ಎಂಬವರ ಸಹಾಯದಿಂದ 28 ವರ್ಷದ ಮಹಿಳೆ ಈ ಕೆಲಸ ಮಾಡಿದ್ದಾಳೆ. ಆಸ್ಪತ್ರೆ ದಾಖಲೆಗಳ (Hospital records) ಪ್ರಕಾರ, ಮಹಿಳೆಯನ್ನು  ಜುಲೈ 24 ರಂದು ಮೊದಲ ಬಾರಿಗೆ ಉಜಿಯಾರ್‌ಪುರ ಪಿಎಚ್‌ಸಿಗೆ ಹೆರಿಗೆಗೆಂದು ದಾಖಲಿಸಲಾಗಿತ್ತು.  ಅದೇ ದಿನ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇದರ ನಂತರ, ಮಹಿಳೆಯು ನವೆಂಬರ್ 3 ರಂದು ಉಜಿಯಾರ್‌ಪುರ ಪಿಎಚ್‌ಸಿಯಲ್ಲಿ ಮತ್ತೊಮ್ಮೆ ಹೆರಿಗೆಗೆ (Baby Birtha) ದಾಖಲಾಗಿದ್ದಾಳೆ. ಅಲ್ಲದೆ ನವೆಂಬರ್ 4 ರಂದು ಗಂಡು ಮಗುವಿಗೆ ಜನ್ಮ ನೀಡಿರುವುದಾಗಿ ದಾಖಲಿಸಲಾಗಿದೆ. 


ಪ್ರಕರಣ ಬಯಲಾದದ್ದು ಹೇಗೆ ?
ಉಜಿಯಾರಪುರ ಪಿಎಚ್‌ಸಿಯಲ್ಲಿ ಜನನಿ ಬಾಲ ಸುರಕ್ಷಾ ಯೋಜನೆಗಾಗಿ ನವೆಂಬರ್‌ನಲ್ಲಿ ಹೆರಿಗೆಯಾದ ದಾಖಲೆಯನ್ನು ಸಿದ್ಧಪಡಿಸಲಾಗುತ್ತಿದೆ. ಈ ವೇಳೆ ವಿಷಯ ಬೆಳಕಿಗೆ ಬಂದಿದೆ. ಜುಲೈ 24ರಂದು ಮಹಿಳೆಗೆ ಹೆರಿಗೆಯಾಗಿರುವುದು   ದಾಖಲೆಗಳಲ್ಲಿ ಪತ್ತೆಯಾಗಿದೆ. ಇದಕ್ಕಾಗಿ ಜನನಿ ಬಾಲ ಸುರಕ್ಷಾ ಯೋಜನೆಯಡಿ ಪ್ರೋತ್ಸಾಹ ಧನವನ್ನೂ ಮಹಿಳೆ ಪಡೆದಿದ್ದಾಳೆ. ವಿಷಯ ತಿಳಿದು ಆಸ್ಪತ್ರೆ ಆಡಳಿತ ಮಂಡಳಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದೆ.


ಇದನ್ನೂ ಓದಿ :  ಹಿಂದು ಮತ್ತು ಹಿಂದುತ್ವದ ಕುರಿತ ಹಳೆಯ ಪೋಸ್ಟ್ ಹಂಚಿಕೊಂಡ ಶಶಿ ತರೂರ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.