Video : ಬಾಹುಬಲಿ ಗೊಲ್ಗಪ್ಪಾವನ್ನು ಯಾವತ್ತಾದರೂ ತಿಂದಿದ್ದೀರಾ? ಈ ಪಾನೀಪುರಿಯಲ್ಲಿ ಇರುತ್ತದೆ ಐದು ಬಗೆಯ ನೀರು

ಅದೆಷ್ಟೇ ಖಾರವಾಗಿದ್ದರೂ ಪಾನಿ-ಪುರಿ ತಿನ್ನುವುದನ್ನು ಮಾತ್ರ ಜನ ನಿಲ್ಲಿಸುವುದಿಲ್ಲ. ಪಾನಿಪುರಿಯನ್ನು ಇಷ್ಟಪಡದವರು ಬಹಳ ವಿರಳ. ಒಂದು ಪ್ಲೇಟ್ ಪಾನಿಪುರಿ ತಿಂದ ಬಳಿಕ ಇನ್ನೂ ಬೇಕು ಎನ್ನುವಂತಾಗುವುದು ಸಹಜ. 

Written by - Ranjitha R K | Last Updated : Dec 29, 2021, 10:27 AM IST
  • ಬಾಹುಬಲಿ ಪಾನಿ ಪುರಿ ವಿಡಿಯೋ ವೈರಲ್
  • ಈ ಪಾನಿಪುರಿಯಲ್ಲಿ ಹಾಕಲಾಗುತ್ತದೆ 5 ಬಗೆಯ ನೀರು
  • ಸುಮಾರು 6 ಮಿಲಿಯನ್ ಜನರು ವೀಕ್ಷಿಸಿದ್ದಾರೆ ವಿಡಿಯೋ
Video : ಬಾಹುಬಲಿ ಗೊಲ್ಗಪ್ಪಾವನ್ನು ಯಾವತ್ತಾದರೂ ತಿಂದಿದ್ದೀರಾ? ಈ ಪಾನೀಪುರಿಯಲ್ಲಿ ಇರುತ್ತದೆ ಐದು ಬಗೆಯ ನೀರು   title=
ಬಾಹುಬಲಿ ಪಾನಿ ಪುರಿ ವಿಡಿಯೋ ವೈರಲ್ (photo youtube)

ನವದೆಹಲಿ : Bahubali Golgappa Video: ಪಾನಿ-ಪುರಿ, ಅಥವಾ ಗೋಲ್ಗಪ್ಪ, ಈ  ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ಪಾನಿ-ಪುರಿಯನ್ನು (Pani Puri) ಇಷ್ಟಪಡದವರು ಬಹಳ ಕಡಿಮೆ. ಪಾನಿ ಪೂರಿ ಮಾರುವವರ ಬಳಿ ಪಾನಿ ಪುರಿಗಾಗಿ ದೊಡ್ಡ ಲೈನ್ ನಿಂತಿರುತ್ತದೆ. ಕೆಲವರಿಗಂತೂ ಪಾನಿ ಪುರಿಯನ್ನು ಎಷ್ಟು ಕೊಟ್ಟರೂ ತಿನ್ನುತ್ತಲೇ ಇರುತ್ತಾರೆ. 

ಬಾಹುಬಲಿ ಪಾನಿ ಪುರಿ :
ಅದೆಷ್ಟೇ ಖಾರವಾಗಿದ್ದರೂ ಪಾನಿ-ಪುರಿ (Pani Puri) ತಿನ್ನುವುದನ್ನು ಮಾತ್ರ ಜನ ನಿಲ್ಲಿಸುವುದಿಲ್ಲ. ಪಾನಿಪುರಿಯನ್ನು ಇಷ್ಟಪಡದವರು ಬಹಳ ವಿರಳ. ಒಂದು ಪ್ಲೇಟ್ ಪಾನಿಪುರಿ ತಿಂದ ಬಳಿಕ ಇನ್ನೂ ಬೇಕು ಎನ್ನುವಂತಾಗುವುದು ಸಹಜ. ಪಾನಿಪುರಿಯ ರುಚಿಯೇ ಅಂಥದ್ದು. ನೀವು ಬಗೆ ಬಗೆಯ ಪಾನಿ ಪೂರಿ ತಿಂದಿರಬಹುದು. ಬಾಹುಬಲಿ ಪಾನಿ ಪುರಿಯ  ರುಚಿಯನ್ನು ಯಾವತ್ತಾದರೂ ಸವಿದಿದ್ದೀರಾ ? ಇಲ್ಲ ಎಂದಾದರೆ ಆ ಬಾಹುಬಲಿ ಪಾನಿ ಪುರಿಯ (Bahubali Panipuri) ಮಾಹಿತಿ ಇಲ್ಲಿದೆ..

ಇದನ್ನೂ ಓದಿ : Omicron ಆತಂಕದ ನಡುವೆಯೇ ಸಮಾಧಾನಕರ ಸಂಗತಿ, ಎಷ್ಟು ಸಮಯದ ಬಳಿಕ ಸಹಜವಾಗಲಿದೆ ಸ್ಥಿತಿ? ತಜ್ಞರು ನೀಡಿದ ಅಭಿಪ್ರಾಯ

ಈ ಪಾನಿ-ಪುರಿಯನ್ನು ನಾಗ್ಪುರದಲ್ಲಿ (Nagpura) ಮಾರಾಟ ಮಾಡಲಾಗುತ್ತದೆ. ಇದು ಗಾತ್ರದಲ್ಲಿ ಎಷ್ಟು ದೊಡ್ಡದಾಗಿದೆ ಎಂದರೆ ಅದನ್ನು ಒಂದೇ ಬಾರಿಗೆ ತಿನ್ನಲು ಸಾಧ್ಯವಾಗುವುದಿಲ್ಲ. ಈ ಪಾನಿಪುರಿ ನೋಡಿದರೆ ಸಾಕು ಬಾಯಲ್ಲಿ ನೀರೂರುತ್ತೆ. ಈ ಬಾಹುಬಲಿ ಪಾನಿಪುರಿಯ ವಿಡಿಯೋವನ್ನು  (Panipuri video) ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. 

ಇದರಲ್ಲಿರುತ್ತದೆ 5 ಬಗೆಯ ನೀರು :
ಈ ಪಾನಿಪುರಿಯಲ್ಲಿ 5 ಬಗೆಯ ನೀರು ಹಾಕಲಾಗುತ್ತದೆ. ಪಾನಿ-ಪುರಿ ಮಾರಾಟ ಮಾಡುವ ವ್ಯಕ್ತಿ ಮೊದಲು, ತನ್ನ ಕೈಯಲ್ಲಿ ಪೂರಿ ತೆಗೆದುಕೊಳ್ಳುವುದನ್ನು ವೀಡಿಯೊದಲ್ಲಿ (Video) ಕಾಣಬಹುದು. ನಂತರ ಅದರಲ್ಲಿ 5 ಬಗೆಯ ಫ್ಲೇವರ್ ನ ನೀರನ್ನು ಹಾಕುತ್ತಾರೆ. ನಂತರ ಪೂರಿ ಮೇಲೆ ಆಲೂಗಡ್ಡೆಯ ಸ್ಟಫ್ಫಿಂಗ್ ಇಡುತ್ತಾರೆ. ಕೊನೆಯದಾಗಿ, ಅದರ ಮೇಲೆ ಮೊಸರು, ನಮ್ಕೀನ್  ಮತ್ತು ದಾಳಿಂಬೆಯನ್ನು (Pomegranate) ಹಾಕುತ್ತಾರೆ. ಇಷ್ಟಾದ ಮೇಲೆ ಬಾಹುಬಲಿ ಪಾನಿ-ಪುರಿ ತಿನ್ನಲು ರೆಡಿಯಾಗುತ್ತದೆ. 

 

ಇದನ್ನೂ ಓದಿ : WATCH: 6 ಕೋಟಿ ಲಂಬೋರ್ಗಿನಿ ಕಾರಿನಲ್ಲಿ ತೆರಳಿ 10 ರೂ. ಪೆಟ್ರೋಲ್ ಹಾಕೆಂದ ಯುವಕ.. ಮುಂದಾಗಿದ್ದೇನು ನೋಡಿ.!

ಈ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ Nagpur Cha Kartik  ಹೆಸರಿನ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವೀಡಿಯೊವನ್ನು ಇಲ್ಲಿಯವರೆಗೆ ಸುಮಾರು 6 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಇಲ್ಲಿಯವರೆಗೆ 23 ಲಕ್ಷಕ್ಕೂ ಹೆಚ್ಚು ಜನರು ಅದನ್ನು ಲೈಕ್ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News