ಮೀಸಲಾತಿಯಲ್ಲಿಯೂ ಬಿಜೆಪಿ ನ್ಯಾಯ ಕೊಟ್ಟಿದೆ: ನಳಿನಕುಮಾರ್ ಕಟೀಲ್
Karnataka Assembly Election: ಜಗದೀಶ್ ಶೆಟ್ಟರ್ ಪಕ್ಷಾಂತರದಿಂದ ಬಿಜೆಪಿ ವಿಚಲಿತವಾಗಿಲ್ಲ. ಆದರೆ, ಹುಬ್ಬಳ್ಳಿ ಹತ್ತಾರು ಪ್ರದೇಶಗಳ ಕೇಂದ್ರ ಸ್ಥಾನ. ಹೀಗಾಗಿ ಎಲ್ಲ ನಾಯಕರು ಇಲ್ಲಿ ಬರ್ತಿದ್ದಾರೆ ಹೊರತು ಶೆಟ್ಟರ್ ಕಾರಣಕ್ಕೆ ಅಲ್ಲ. ಬಿಜೆಪಿ ವೀಕ್ ಇದೆ ಅಂತ ಮೋದಿ ಸೆಂಟ್ರಲ್ ಕ್ಷೇತ್ರಕ್ಕೆ ಬರ್ತಿಲ್ಲ. ಬೇರೆ ಪ್ರದೇಶಕ್ಕೆ ಬಂದಂತೆ ಮೋದಿ ಇಲ್ಲಿಯೂ ಬರ್ತಾರೆ ಎಂದರು.
Karnataka Assembly Election 2023: ಕಾಂಗ್ರೆಸ್ ಜಾತಿ ಹೆಸರಲ್ಲಿ ರಾಜಕಾರಣ ಮಾಡ್ತಿದೆ. ವೀರಶೈವ, ಲಿಂಗಾಯತರ ಹೆಸರಿನಲ್ಲಿ ರಾಜಕಾರಣ ಮಾಡಿದರು. ಲಿಂಗಾಯತ ಸಮುದಾಯದ ಬಗ್ಗೆ ಸಿದ್ಧರಾಮಯ್ಯ ಹೀನವಾಗಿ ಮಾತನಾಡಿದ್ದಾರೆ. ಸಿದ್ಧರಾಮಯ್ಯ ತುಷ್ಠೀಕರಣ ರಾಜಕಾರಣ ಮಾಡುತ್ತಿದ್ದಾರೆ. ಆದರೆ, ಮೀಸಲಾತಿಯಲ್ಲಿಯೂ ಬಿಜೆಪಿ ನ್ಯಾಯ ಕೊಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲ್ ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದ್ದಾರೆ.
ಜಗದೀಶ್ ಶೆಟ್ಟರ್ ಪಕ್ಷಾಂತರದಿಂದ ಬಿಜೆಪಿ ವಿಚಲಿತವಾಗಿಲ್ಲ. ಆದರೆ, ಹುಬ್ಬಳ್ಳಿ ಹತ್ತಾರು ಪ್ರದೇಶಗಳ ಕೇಂದ್ರ ಸ್ಥಾನ. ಹೀಗಾಗಿ ಎಲ್ಲ ನಾಯಕರು ಇಲ್ಲಿ ಬರ್ತಿದ್ದಾರೆ ಹೊರತು ಶೆಟ್ಟರ್ ಕಾರಣಕ್ಕೆ ಅಲ್ಲ. ಬಿಜೆಪಿ ವೀಕ್ ಇದೆ ಅಂತ ಮೋದಿ ಸೆಂಟ್ರಲ್ ಕ್ಷೇತ್ರಕ್ಕೆ ಬರ್ತಿಲ್ಲ. ಬೇರೆ ಪ್ರದೇಶಕ್ಕೆ ಬಂದಂತೆ ಮೋದಿ ಇಲ್ಲಿಯೂ ಬರ್ತಾರೆ ಎಂದರು.
ಎಲ್ಲ ವರ್ಗದ ಜನರ ಜೊತೆ ಮಾತಾಡ್ತೀವೆ. ಒಂದು ಸಮುದಾಯದ ಓಲೈಕೆ ಮಾಡೋ ಕೆಲಸ ಮಾಡಿಲ್ಲ. ಮರಾಠ ಸಮುದಾಯಕ್ಕೆ ಮೀಸಲಾತಿಯಲ್ಲಿ ಅನ್ಯಾಯ ಆರೋಪ ವಿಚಾರ ಎಲ್ಲ ಸಮುದಾಯಗಳಿಗೂ ನ್ಯಾಯ ಕೊಡ್ತೇವೆ ಎಂದರು.
ಇದನ್ನೂ ಓದಿ- ಚುನಾವಣ ಪ್ರಚಾರದ ಅಖಾಡಕ್ಕೆ ಇಳಿಯಲಿದ್ದಾರೆ ಆಕ್ಷನ್ ಪ್ರಿನ್ಸ್
ಇದೇ ವೇಳೆ ಪಕ್ಷದಲ್ಲಿ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಗೆ ಮೂಲೆಗುಂಪು ಮಾಡ್ತೀವಿ ಎನ್ನುವ ಆಡಿಯೋ ಬಹಿರಂಗ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಈ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ- Karnataka Election 2023: ಮೈಸೂರಿನ ಮೈಲಾರಿ ಹೋಟೆಲ್‍ನಲ್ಲಿ ಇಡ್ಲಿ-ದೋಸೆ ಸವಿದ ಪ್ರಿಯಾಂಕಾ ಗಾಂಧಿ
ಶೆಟ್ಟರ್ ಗೆ ಟಿಕೆಟ್ ಕೈತಪ್ಪಲು ಬಿ.ಎಲ್.ಸಂತೋಷ್ ಕಾರಣ ಎಂಬ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆಯೂ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷರು, ನಮ್ಮ ಪಕ್ಷದಲ್ಲಿ ಒಬ್ಬರ ತೀರ್ಮಾನ ಆಗೋಲ್ಲ ಅಂತ ಶೆಟ್ಟರ್ ಅವರಿಗೂ ಗೊತ್ತಿದೆ. ಆದರೆ, ಪಾರ್ಟಿ ಬಿಟ್ಟ ಮೇಲೆ ಶೆಟ್ಟರ್ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.