Karnataka Election 2023: ಚುನಾವಣಾ ಪ್ರಚಾರಕ್ಕೆ 10 ಸಾವಿರ ಸರ್ಕಾರಿ ಬಸ್ಸುಗಳ ಬಳಕೆ!

Karnataka Assembly Election 2023: ಈ ಬಾರಿ 1 ಹಂತದಲ್ಲಿ ಎಲೆಕ್ಷನ್ ನಡೆಯುತ್ತಿರುವ ಹಿನ್ನೆಲೆ, ಮೇ 5ರಿಂದ ಮೇ 13ರವರೆಗೂ ಚುನಾವಣಾ ಕೆಲಸಕ್ಕೆ ಬಸ್ಸುಗಳ ಅವಶ್ಯತೆಯಿದೆ. ಚುನಾವಣಾ ಅಧಿಕಾರಿಗಳು KSRTC ಹಾಗೂ BMTC ಬಸ್ಸುಗಳನ್ನು ಬುಕಿಂಗ್ ಮಾಡಿದ್ದಾರೆ.

Written by - Puttaraj K Alur | Last Updated : Apr 26, 2023, 11:21 AM IST
  • ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚುನಾವಣೆಯ ರಂಗು ಹೆಚ್ಚಾಗಿದೆ
  • ಚುನಾವಣೆಗೆ ಬೇಕಾದ ಬಸ್‍ಗಳ ವ್ಯವಸ್ಥೆಗೂ ಈಗಾಗಲೇ ಬುಕಿಂಗ್ ಮಾಡಲಾಗಿದೆ
  • ಚುನಾವಣಾ ಪ್ರಚಾರಕ್ಕೆ 10 ಸಾವಿರ ಸರ್ಕಾರಿ ಬಸ್ಸುಗಳ ಬಳಕೆ ಮಾಡಲಾಗುತ್ತಿದೆ
Karnataka Election 2023: ಚುನಾವಣಾ ಪ್ರಚಾರಕ್ಕೆ 10 ಸಾವಿರ ಸರ್ಕಾರಿ ಬಸ್ಸುಗಳ ಬಳಕೆ! title=
ರಾಜ್ಯ ವಿಧಾನಸಭಾ ಚುನಾವಣೆ 2023

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚುನಾವಣೆಯ ರಂಗು ಹೆಚ್ಚಾಗಿದೆ. ಚುನಾವಣೆಗೆ ಬೇಕಾದ ಬಸ್‍ಗಳ ವ್ಯವಸ್ಥೆಗೂ ಈಗಾಗಲೇ ಬುಕಿಂಗ್ ಮಾಡಲಾಗಿದೆ. ಹೀಗಾಗಿ ಚುನಾವಣೆ ವೇಳೆ ಬಸ್ ಕೊರತೆ ಉಂಟಾಗುವ ಸಾಧ್ಯತೆ ಇದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಕೌಂಟ್‍ಡೌನ್ ಶುರುವಾದ ಬೆನ್ನಲ್ಲೇ ಚುನಾವಣಾ ಪ್ರಚಾರಕ್ಕೆ ರಾಜ್ಯದಾದ್ಯಂತ 10 ಸಾವಿರದಷ್ಟು ಸರ್ಕಾರಿ ಬಸ್ಸುಗಳ ಬಳಕೆ ಮಾಡಲಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಚುನಾವಣೆಯ ಪೀಕ್ ಸೀಸನ್ ಶುರುವಾಗಿದೆ. ಎಲ್ಲಾ ಪಕ್ಷಗಳು ಮತದಾರರನ್ನು ಸೆಳೆಯಲು ರಣತಂತ್ರ ರೂಪಿಸಿವೆ. ಈ ಮಧ್ಯೆ ಚುನಾವಣಾ ಅಧಿಕಾರಿಗಳು ಎಲೆಕ್ಷನ್‌ಗೆ ಬೇಕಾದ ಸಕಲ ಸಿದ್ಧತೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: "ಇಡಿ, ಸಿಬಿಐ ,ಐಟಿ ತನಿಖಾ ಸಂಸ್ಥೆಗಳು ರಾಜ್ಯದಲ್ಲಿರುವ ಭ್ರಷ್ಟಾಚಾರದ ಕಡೆ ಯಾಕೆ ನೋಡುತ್ತಿಲ್ಲ"

ಸಾರಿಗೆ ವ್ಯವಸ್ಥೆಗೆ ರಾಜ್ಯದಾದ್ಯಂತ ಅಂದಾಜು 10 ಸಾವಿರ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಹಾಗೂ ಆರ್‌ಟಿಓ ವಾಹನಗಳನ್ನೂ ಬಳಸಲಾಗುತ್ತದೆ. ಎಲೆಕ್ಷನ್ ಡ್ಯೂಟಿಗೆ ನಗರದಲ್ಲಿ 1 ಸಾವಿರ ಸರ್ಕಾರಿ ಬಸ್ಸುಗಳ ಬಳಕೆ ಮಾಡಲಾಗಿದೆ. ಮೇ 5ರಿಂದ ಮೇ 14ರವರೆಗೂ ಬಸ್‍ಗಳ ಕೊರತೆ ಸಾಧ್ಯತೆಯಿದೆ.

ಈ ಬಾರಿ 1 ಹಂತದಲ್ಲಿ ಎಲೆಕ್ಷನ್ ನಡೆಯುತ್ತಿರುವ ಹಿನ್ನೆಲೆ, ಮೇ 5ರಿಂದ ಮೇ 13ರವರೆಗೂ ಚುನಾವಣಾ ಕೆಲಸಕ್ಕೆ ಬಸ್ಸುಗಳ ಅವಶ್ಯತೆಯಿದೆ. ಚುನಾವಣಾ ಅಧಿಕಾರಿಗಳು KSRTC ಹಾಗೂ BMTC ಬಸ್ಸುಗಳನ್ನು ಬುಕಿಂಗ್ ಮಾಡಿದ್ದಾರೆ. ಒಟ್ಟು 800ರಿಂದ 1000 ಬಸ್ಸುಗಳನ್ನ ಬುಕ್ ಮಾಡಿಕೊಳ್ಳಲಾಗಿದೆ. ಜೊತೆಗೆ 800 RTO ವಾಹನಗಳನ್ನು ಸ್ಕ್ರೀನಿಂಗ್ ಹಾಗೂ ಸ್ಕಾಡ್‍ಗಳಿಗೆ ನೀಡಲು ಬಳಕೆ ಮಾಡಲಾಗುತ್ತಿದೆ. ಸರ್ಕಾರಿ ಬಸ್‍ಗಳನ್ನು ಪೋಲಿಸ್ ಇಲಾಖೆ, BBMP, RTO, ಸಾರಿಗೆ ಇಲಾಖೆಗಳ ಸಿಬ್ಬಂದಿಯನ್ನು ಡ್ರಾಪ್ ಮತ್ತು ಪಿಕಪ್ ಜೊತೆಗೆ ಚುನಾವಣಾ ಕೆಲಸಗಳಿಗೆ ಬಳಕೆ ಮಾಡಲಾಗುತ್ತಿದೆ.

ಇದನ್ನೂ ಓದಿ: "ಸವಾರಿ ಮಾಡುವ ನಿಮ್ಮ ಸರ್ವಾಧಿಕಾರಿ ಧೋರಣೆಯನ್ನು ಕನ್ನಡಿಗರು ಈಗ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ" 

ಬೆಂಗಳೂರು ನಗರದಲ್ಲಿ 8,063 ಪೋಲಿಂಗ್ ಬೂತ್‍ಗಳಿವೆ. ಮತ ಕೇಂದ್ರಗಳಿಗೆ ಕೊಂಡೊಯ್ಯಲು ಮತ್ತು ಮತದಾನ ಮುಗಿದ ಮೇಲೆ ಸ್ಟ್ರಾಂಗ್ ರೂಂಗೆ ತರಲು ವಾಹನಗಳ ಅವಶ್ಯಕತೆಯಿದೆ. ನಗರದಲ್ಲಿರುವ ಒಂದೊಂದು RTO ಕಚೇರಿಗಳಿಗೂ ನೂರರಿಂದ ಇನ್ನೂರು ಗಾಡಿ ಬುಕ್ಕಿಂಗ್ ಮಾಡಲಾಗ್ತಿದೆ. ಈ ಹಿನ್ನೆಲೆ RTO ಅಧಿಕಾರಿಗಳು ಸಹ ಚುನಾವಣಾ ಸಿದ್ಧತೆ ನಡೆಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News