ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರಚಾರ ಕೈಗೊಂಡಿರುವ ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬುಧವಾರ ಅಗ್ರಹಾರದಲ್ಲಿರುವ 80 ವರ್ಷಗಳಷ್ಟು ಹಳೆಯ ಪ್ರಸಿದ್ಧ ಮೈಲಾರಿ ಹೋಟೆಲ್ನಲ್ಲಿ ಇಡ್ಲಿ-ದೋಸೆ ಸವಿದರು.
ಬುಧವಾರ ಬೆಳಗ್ಗೆ ಮೈಸೂರಿನ ಅಗ್ರಹಾರದಲ್ಲಿರುವ ಖ್ಯಾತ ಮೈಲಾರಿ ಹೋಟೆಲ್ಗೆ ತೆರಳಿದ ಪ್ರಿಯಾಂಕಾ ಗಾಂಧಿ ಇಡ್ಲಿ ಮತ್ತು ದೋಸೆ ಸವಿದರು. ಇದೇ ವೇಳೆ ಹೋಟೆಲ್ನ ಅಡುಗೆ ಕೋಣೆಗೆ ಹೋದ ಪ್ರಿಯಾಂಕಾ ಬಾಣಸಿಗರ ಜೊತೆ ದೋಸೆಯನ್ನು ತಯಾರಿಸಿ ಖುಷಿಪಟ್ಟರು.
ಇದನ್ನೂ ಓದಿ: ಮತಗಟ್ಟೆ ಸಾಮಗ್ರಿ ವಿಚಾರ: ಟೆಂಡರ್ನಲ್ಲಿ ಕಪ್ಪುಪಟ್ಟಿಯಲ್ಲಿದ್ದ ಚಿಲುಮೆ ಸಂಸ್ಥೆ ಭಾಗಿ
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ @priyankagandhi ಅವರು ಮೈಸೂರಿನ ಪ್ರಸಿದ್ಧ ಮೈಲಾರಿ ಹೋಟೆಲ್ನಲ್ಲಿ ದೋಸೆ ಸವಿದು ಮಕ್ಕಳ ಜೊತೆ ಒಡನಾಡಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ @rssurjewala, ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರು ಜೊತೆಗಿದ್ದರು. pic.twitter.com/UzszTD6aku— Karnataka Congress (@INCKarnataka) April 26, 2023
ಮೈಲಾರಿ ಹೋಟೆಲ್ಗೆ ಬಂದಿದ್ದ ಪ್ರಿಯಾಂಕಾರನ್ನು ಕಂಡ ಸ್ಥಳೀಯರು ಅವರ ಜೊತೆಗೆ ಫೋಟೋ ತೆಗೆಸಿಕೊಂಡರು. ಚುನಾವಣೆ ಹಿನ್ನೆಲೆ ಪ್ರಿಯಾಂಕಾ ಅವರು ಶೃಂಗೇರಿಗೆ ಭೇಟಿ ನೀಡಲಿದ್ದು, ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಶೃಂಗೇರಿಯ ಬಾಳೆಹಿನ್ನೂರಿಗೆ ಭೇಟಿ ನೀಡಿ ಕಲಾರಂಗ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 3.15ಕ್ಕೆ ಹಿರಿಯೂರಿನ ಹುಳಿಯಾರ್ ರಸ್ತೆಯಲ್ಲಿರುವ ಸಾರ್ವಜನಿಕ ಕ್ರೀಡಾಂಗಣದಲ್ಲಿ ಗೊಲ್ಲ ಸಮುದಾಯದ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ.
ಮಧ್ಯಾಹ್ನ 3.30ಕ್ಕೆ ಹಿರಿಯೂರಿನ ನಂಜಯ್ಯನ ಕೊಟ್ಟಿಗೆ ಗಾಂಧಿ ವೃತ್ತದ ಮೂಲಕ ರಂಜಿತ್ ಹೊಟೇಲ್ವರೆಗೆ ರೋಡ್ ಶೋ ನಡೆಸಲಿದ್ದಾರೆ. ಪ್ರಿಯಾಂಕಾ ಗಾಂಧಿಯವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಣದೀಪ್ ಸರ್ಜೇವಾಲಾ ಹಾಗೂ ಎಸ್.ಟಿ.ಸೋಮಶೇಖರ್ ಮುಂತಾದವರು ಸಾಥ್ ನೀಡಿದರು.
ಇದನ್ನೂ ಓದಿ: "ಸವಾರಿ ಮಾಡುವ ನಿಮ್ಮ ಸರ್ವಾಧಿಕಾರಿ ಧೋರಣೆಯನ್ನು ಕನ್ನಡಿಗರು ಈಗ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ"
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.