ಚುನಾವಣ ಪ್ರಚಾರದ ಅಖಾಡಕ್ಕೆ ಇಳಿಯಲಿದ್ದಾರೆ ಆಕ್ಷನ್ ಪ್ರಿನ್ಸ್

Karnataka Election Campaign: ಸ್ಯಾಂಡಲ್‌ವುಡ್‌ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಏಪ್ರಿಲ್ 28ರಿಂದ ವಿವಿಧ ಪಕ್ಷಗಳ ತಮ್ಮ ಕೆಲವು  ಸ್ನೇಹಿತರ ಪರ ಮತಬೇಟೆ ನಡೆಸಲಿದ್ದಾರೆ. ಪೊಗರು  ಪೋರ ಧ್ರುವ ಸರ್ಜಾ ಏಪ್ರಿಲ್ 28ರಂದು ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಸಚಿವ ಡಾ. ಕೆ. ಸುಧಾಕರ್ ಪರ ಪ್ರಚಾರ ನಡೆಸಲಿದ್ದಾರೆ. 

Written by - Yashaswini V | Last Updated : Apr 26, 2023, 01:17 PM IST
  • ಇದೇ ತಿಂಗಳ 28ರಿಂದ ಸ್ನೇಹಿತರ ಪರ ಧ್ರುವ ಸರ್ಜಾ ಮತಬೇಟೆ
  • ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾರಕರ್
  • ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಿರುವ ಧ್ರುವ ಸರ್ಜಾ
ಚುನಾವಣ ಪ್ರಚಾರದ ಅಖಾಡಕ್ಕೆ ಇಳಿಯಲಿದ್ದಾರೆ ಆಕ್ಷನ್ ಪ್ರಿನ್ಸ್  title=

Karnataka Election Campaign 2023: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ದಿನಗಳಷ್ಟೇ ಬಾಕಿ ಉಳಿದಿವೆ. ಈ ಮಧ್ಯೆ ಅಧಿಕಾರ ಚುಕ್ಕಾಣಿ ಹಿಡಿಯಲು ಶ್ರಮ ವಹಿಸುತ್ತಿರುವ ರಾಜಕೀಯ ಪಕ್ಷಗಳು ಬಿರು ಬಿಸಿಲನ್ನೂ ಲೆಕ್ಕಿಸದೆ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ.  ಮಾತ್ರವಲ್ಲ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ತಮ್ಮ ಪಕ್ಷದ ಪರವಾಗಿ ಕ್ಯಾಂಪೇನ್ ಮಾಡಲು ಸ್ಟಾರ್ ನಟ-ನಟಿಯರ ಮೊರೆ ಹೋಗಿದ್ದಾರೆ. ಇದೀಗ ಸ್ಯಾಂಡಲ್‌ವುಡ್‌ ಆಕ್ಷನ್ ಪ್ರಿನ್ಸ್ ಕೂಡ ಚುನಾವಣಾ ಪ್ರಚಾರದ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆ. 

ಹೌದು, ಸ್ಯಾಂಡಲ್‌ವುಡ್‌ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಏಪ್ರಿಲ್ 28ರಿಂದ ವಿವಿಧ ಪಕ್ಷಗಳ ತಮ್ಮ ಕೆಲವು  ಸ್ನೇಹಿತರ ಪರ ಮತಬೇಟೆ ನಡೆಸಲಿದ್ದಾರೆ. ಪೊಗರು  ಪೋರ ಧ್ರುವ ಸರ್ಜಾ ಏಪ್ರಿಲ್ 28ರಂದು ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಸಚಿವ ಡಾ. ಕೆ. ಸುಧಾಕರ್ ಪರ ಪ್ರಚಾರ ನಡೆಸಲಿದ್ದಾರೆ. 

ಇದನ್ನೂ ಓದಿ- Karnataka Election 2023: ಜಗದೀಶ್ ಶೆಟ್ಟರ್ & ಲಕ್ಷ್ಮಣ ಸವದಿ ಸೋಲಿಸಲು ಪಣ ತೊಟ್ಟ ಬಿಎಸ್‍ವೈ!

ಸಚಿವ ಡಾ. ಕೆ. ಸುಧಾಕರ್ ಮಾತ್ರವಲ್ಲದೆ ಅರಕಲಗೂಡಿನಲ್ಲಿ ಬಿಜೆಪಿ ಅಭ್ಯರ್ಥಿ ಯೋಗಾ ರಮೇಶ್, ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ  ಜ್ಯೋತಿ ಗಣೇಶ್ ಪರ ಕೂಡ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪ್ರಚಾರ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ‌‌ ಎಂದು ಮಾಹಿತಿ ಲಭ್ಯವಾಗಿದೆ. 

ಇದನ್ನೂ ಓದಿ- Karnataka Election 2023: ಚುನಾವಣಾ ಪ್ರಚಾರಕ್ಕೆ 10 ಸಾವಿರ ಸರ್ಕಾರಿ ಬಸ್ಸುಗಳ ಬಳಕೆ!

ಇದಲ್ಲದೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ಪರ ಮತಬೇಟೆ ನಡೆಸಲಿರುವ ಧ್ರುವ ಸರ್ಜಾ, ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ನಟ ನಿಖಿಲ್ ಕುಮಾರ್ ಪರವಾಗಿಯೂ ಮತಭೇಟೆಗಿಳಿಯೋ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ರಾಮನಗರದಲ್ಲಿ ತಮ್ಮ ಪರ ಪ್ರಚಾರ ನಡೆಸುವಂತೆ ನಿಖಿಲ್ ಕುಮಾರಸ್ವಾಮಿ ಈಗಾಗಲೇ ಧ್ರುವ ಸರ್ಜಾ ಅವರೊಂದಿಗೆ ಮಾತುಕತೆ ನಡೆಸಿದ್ದು ಇದಕ್ಕೆ ಧ್ರುವ ಕೂಡ ಓಕೆ ಎಂದಿದ್ದಾರೆ ಎನ್ನಲಾಗಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News