ಕಾಂಗ್ರೆಸ್ ನವರು ಮೋದಿ ಅವರನ್ನು ಬೈದಷ್ಟು ಕಮಲ ಹೆಚ್ಚು ಅರಳಲಿದೆ- ಗೃಹ ಸಚಿವ ಅಮಿತ್ ಶಾ
Karnataka Assembly Elections : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ವಿಷ ಸರ್ಪ ಎಂದಿದ್ದಾರೆ. ಮನೆ ಕೊಟ್ಟ, ಅಕ್ಕಿ ನೀಡಿದ, ಶೌಚಾಲಯ ಕೊಟ್ಟ, ಭಾರತವನ್ನು ಅಭಿವೃದ್ಧಿಗೊಳಿಸುತ್ತಿರುವ ಪ್ರಧಾನಿ ಮೋದಿ ವಿಷ ಸರ್ಪವೇ..?
Karnataka Assembly Elections 2023 : ಕಾಂಗ್ರೆಸ್ ನವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಬೈದಷ್ಟು ಕಮಲ ಹೆಚ್ಚು ಅರಳಲಿದೆ ಎಂದು ಬಿಜೆಪಿ ಚಾಣಕ್ಯ, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಚಾಮರಾಜನಗರದಲ್ಲಿ ಇಂದು ಕಾಂಗ್ರೆಸ್ ಪಡೆ ವಿರುದ್ಧ ಗುಡುಗಿದರು.
ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಪ್ರೀತನ್ ನಾಗಪ್ಪ ಪರ ಬಹಿರಂಗ ಸಮಾವೇಶ ನಡೆಸಿ ಮಾತನಾದ ಬಿಜೆಪಿ ಚುನಾವಣಾ ಚಾಣಾಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ವಿಷ ಸರ್ಪ ಎಂದಿದ್ದಾರೆ. ಮನೆ ಕೊಟ್ಟ, ಅಕ್ಕಿ ನೀಡಿದ, ಶೌಚಾಲಯ ಕೊಟ್ಟ, ಭಾರತವನ್ನು ಅಭಿವೃದ್ಧಿಗೊಳಿಸುತ್ತಿರುವ ಪ್ರಧಾನಿ ಮೋದಿ ವಿಷ ಸರ್ಪವೇ..? ನೀವು ಮೋದಿ ಅವರನ್ನು ಬೈದಷ್ಟು ಕಮಲದ ಸ್ಥಾನ ಹೆಚ್ಚಾಗಲಿದೆ ಎಂದು ಗುಡುಗಿದರು.
ಇದನ್ನೂ ಓದಿ- DK Shivakumar: ಡಿ.ಕೆ ಶಿವಕುಮಾರ್ ತೆರಳುತ್ತಿದ್ದ ಹೆಲಿಕಾಪ್ಟರ್ ಗೆ ರಣಹದ್ದು ಡಿಕ್ಕಿ.. ಪ್ರಾಣಾಪಾಯದಿಂದ ಅಪಾಯದಿಂದ ಪಾರು!
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಗ್ಗೆಯೂ ಲೇವಡಿ ಮಾಡಿದ ಗೃಹ ಸಚಿವ ಅಮಿತ್ ಶಾ, ಯಾವುದೇ ವಿಶ್ವಾಸ ಇಲ್ಲದ ಗ್ಯಾರಂಟಿಗಳನ್ನು ಕಾಂಗ್ರೆಸ್ ಕೊಡುತ್ತಿದೆ, ಕಾಂಗ್ರೆಸ್ ಕೊಡುತ್ತಿರುವ ಗ್ಯಾರಂಟಿ ಭ್ರಷ್ಟಾಚಾರದ ಗ್ಯಾರಂಟಿ, ಒಂದು ಸಮುದಾಯವನ್ನು ತುಷ್ಠೀಕರಣ ಮಾಡುವ ಗ್ಯಾರಂಟಿ, ಸಮಾಜದಲ್ಲಿ ಗಲಾಟೆ ಮಾಡುವ ಗ್ಯಾರಂಟಿ ಎಂದು ಹರಿಹಾಯ್ದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ, ಕಾಂಗ್ರೆಸ್ ಗೆ ಅಧಿಕಾರ ಕೊಟ್ಟರೇ ಅದು ಅಭಿವೃದ್ಧಿಗೆ ರಿವರ್ಸ್ ಗೇರ್ ಇದ್ದಂತೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಸುರಕ್ಷಿತ ಕರ್ನಾಟಕ, ನಂ1 ರಾಜ್ಯ ಕರ್ನಾಟಕ ಆಗಲಿದೆ, ಕಾಂಗ್ರೆಸ್ ದೆಹಲಿ ಕುಳಿತವರ ಎಟಿಎಂ ಆಗಲಿದೆ ಅಷ್ಟೇ ಎಂದು ಕುಹಕವಾಡಿದರು.
ಬಿಜೆಪಿ ಮುಸ್ಲಿಂ ಮೀಸಲಾತಿಯನ್ನು ಕಿತ್ತು ಲಿಂಗಾಯತ, ಒಕ್ಕಲಿಗರಿಗೆ ಮೀಸಲಾತಿ ಕೊಟ್ಟಿದೆ, ಪ.ಜಾತಿ, ಪ.ಪಂಗಡದ ಮೀಸಲಾತಿ ಹೆಚ್ಚಿಸಿದೆ. ಆದರೆ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ಕೊಡುತ್ತೇವೆಂದು, ಹಾಗಾದಾಗ ಲಿಂಗಾಯತ, ಒಕ್ಕಲಿಗರ ಮೀಸಲಾತಿ ಕಡಿಮೆ ಆಗಲಿದೆ ಎಂದು ಕೈ ಪಡೆ ವಿರುದ್ಧ ಮೀಸಲಾತಿ ಅಸ್ತ್ರ ಪ್ರಯೋಗಿಸಿದರು.
ಇದನ್ನೂ ಓದಿ- ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಭರ್ಜರಿ ಘೋಷಣೆ : ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ
2024 ಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತೇ ಪ್ರಧಾನಿ ಆಗಬೇಕಾದರೇ ಹನೂರಲ್ಲಿ ಪ್ರೀತನ್ ಎಂಎಲ್ಎ ಆಗಬೇಕು, ಬಹುಮತದಲ್ಲಿ ಪ್ರೀತನ್ ಗೆಲ್ಲಿಸಿ ಎಂದು ಜನರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಜಿಲ್ಲೆಯ ಮಲೆಮಹದೇಶ್ಚರ, ಸಿದ್ದಪ್ಪಾಜಿ, ಮಂಟೇಸ್ವಾಮಿ, ಸಾಲೂರು ಮಠ, ಸುತ್ತೂರು ಮಠ ಮತ್ತು ಜಗಜ್ಯೋತಿ ಬಸವೇಶ್ವರರನ್ನು ಅಮಿತ್ ಶಾ ಸ್ಮರಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.