ಬೆಂಗಳೂರು: ಕಳೆದ 3 ದಿನಗಳಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದೆಹಲಿಯಲ್ಲಿ ಟಿಕೆಟ್ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಇನ್ನು ಸ್ವಕ್ಷೇತ್ರ ಶಿಗ್ಗಾವಿ ಟಿಕೆಟ್ ಪಡೆಯಲು ಹರಸಾಹಾಸ ಪಡುತ್ತಿದ್ದಾರೆ ಎನ್ನಲಾಗುತ್ತಿದೆ.


COMMERCIAL BREAK
SCROLL TO CONTINUE READING

‘ನೀವು ಮುಖ್ಯಮಂತ್ರಿ ಆಗಿದ್ದೀರಿ, ನಿಮಗೆ ಶಿಗ್ಗಾವಿ ಕ್ಷೇತ್ರಕ್ಕೆ ಯಾಕೆ ಸೀಮಿತ ಮಾಡಿಕೊಳ್ಳುತ್ತಿರಿ, ಬಿಜೆಪಿ ಬಲಹೀನ ಆಗಿರುವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಪಕ್ಷವನ್ನು ಯಾಕೆ ಬೆಳಸಬಾರದು?’ ಎಂದು ಹೈಕಮಾಂಡ್ ಸಿಎಂ ಬೊಮ್ಮಾಯಿಗೆ ಹೊಸ ಚ್ಯಾಲೆಂಜ್ ನೀಡಿದೆ ಅಂತಾ ಮೂಲಗಳು ತಿಳಿಸಿವೆ. ಇನ್ನು ತಮ್ಮ ಸ್ಪರ್ಧೆ ಎಲ್ಲಿ ಅನ್ನೋದರ ಬಗ್ಗೆ ಈಗಾಗಲೇ ಸ್ಪಷ್ಟಿಕರಣ ನೀಡಿರುವ ಸಿಎಂ, ಶಿಗ್ಗಾವಿಯಿಂದಲೇ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ ಶಿಗ್ಗಾವಿ ಜೊತೆಗೆ ಹಳೆ ಮೈಸೂರು ಅಥವಾ ಕಾಂಗ್ರೆಸ್ ಪ್ರಾಬಲ್ಯವಿರುವ ಕ್ಷೇತ್ರದ ಬಗ್ಗೆ ಚಿಂತನೆ ನಡೆಸಿ, ಇದರಿಂದ ಬಿಜೆಪಿ ಪಕ್ಷಕ್ಕೆ ಶಕ್ತಿ ಬರಲಿದೆ ಎಂದು ಸಭೆಯಲ್ಲಿ ‘ಕಮಲ’ ಪಕ್ಷದ ವರಿಷ್ಠರು ಸಲಹೆ ನೀಡಿದ್ದಾರೆ.


ಇದನ್ನೂ ಓದಿ: "ಸರ್ಕಾರದ ಹಣದಲ್ಲಿ ಬಿಜೆಪಿಯ ಜಾತ್ರೆ"- ಕಾಂಗ್ರೆಸ್ ಟೀಕೆ


ಇದಲ್ಲದೆ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಬಗ್ಗೆ ಗಂಭೀರ ಸೂಚನೆ ನೀಡಿರುವ ಬಿಜೆಪಿ ಹೈಕಮಾಂಡ್, ಹಳೆಯ ಮೈಸೂರು ಭಾಗದಲ್ಲಿ ಬಿಜೆಪಿ ಭದ್ರ ಬುನಾದಿ‌ ಹಾಕಲು ಘಟಾನುಘಟಿ ನಾಯಕರನ್ನೇ ಕಣಕ್ಕಿಳಿಸುವ ಚಿಂತನೆ ನಡೆಸಿದೆಯಂತೆ. ಹಾಗಾದ್ರೆ ಏನದು ಹಳೆಯ ಮೈಸೂರು ಭಾಗದಲ್ಲಿನ ಬಿಜೆಪಿಯ ರಣತಂತ್ರ? ಹಳೆಯ ಮೈಸೂರು ಭಾಗದ ಪ್ರತಿಷ್ಠಿತ ಕ್ಷೇತ್ರಗಳಾಗಿರುವ ವರುಣಾ, ಕನಕಪುರ, ಚನ್ನಪಟ್ಟಣ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಅಡ್ಜೆಟ್‌ಮೆಂಟ್ ಪಾಲಿಟಿಕ್ಸ್ ತಪ್ಪಿಸಲು ಮಾಸ್ಟರ್‌ಪ್ಲಾನ್ ರೂಪಿಸಲಾಗಿದೆಯಂತೆ. 2 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಆಖಾಡಕ್ಕೆ ಇಳಿಯಬೇಕೆಂದು ಸೂಚನೆ ರವಾನಿಸಿದ್ದಾರೆ ಎನ್ನಲಾಗಿದೆ.


ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥ್‌ನಾರಾಯಣ್, ವಿ.ಸೋಮಣ್ಣ ಹಾಗೂ ಕೆ.ಎಸ್.ಈಶ್ವರಪ್ಪರ ಹೆಸರಿನ ಮುಂದೆ ಮತ್ತೊಂದು ಕ್ಷೇತ್ರಗಳ ಆಯ್ಕೆ ಮಾಡಲಾಗಿದೆ. ಆರ್.ಅಶೋಕ್‌ಗೆ ಪದ್ಮನಾಭನಗರ ಕ್ಷೇತ್ರದ ಜೊತೆಗೆ ಕನಕಪುರ ಕೂಡ ನೀಡುವುದು, ಅಶ್ವತ್ಥ್‌ನಾರಾಯಣ್‌ಗೆ ಮಲ್ಲೇಶ್ವರಂ ಜೊತೆಗೆ ಚನ್ನಪಟ್ಟಣ ನೀಡುವುದು, ವಿ.ಸೋಮಣ್ಣರಿಗೆ ಗೋವಿಂದರಾಜನಗರ ಜೊತೆಗೆ ವರುಣಾ ನೀಡುವುದು ಹಾಗೂ ಸಿ.ಪಿ.ಯೋಗೇಶ್ವರ್‌ಗೆ ಚನ್ನಪಟ್ಟಣದ ಬದಲಿಗೆ ರಾಮನಗರದಲ್ಲಿ ಕಣಕ್ಕೆ ಇಳಿಸುವುದು.


ಇದನ್ನೂ ಓದಿ: ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಮುಳುಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ: ಡಿ.ಕೆ.ಸುರೇಶ್


ಒಂದು ವೇಳೆ ಏನಾದ್ರೂ ಸಿದ್ದರಾಮಯ್ಯ ಕೋಲಾರದಿಂದ ಕಣಕ್ಕೆ ಇಳಿದರೆ,  ಶಿವಮೊಗ್ಗ ಜೊತೆಗೆ ಈಶ್ವರಪ್ಪರಿಗೆ ಕೋಲಾರ ಸಹ ನೀಡುವುದು. ಈ ಮೂಲಕ ಹಳೆಯ ಮೈಸೂರು ಭಾಗದ ಕೆಲ ಕ್ಷೇತ್ರಗಳನ್ನು ಹೈವೋಲ್ಟೇಜ್ ಕ್ಷೇತ್ರಗಳಾಗಿ ಮಾರ್ಪಾಡು ಮಾಡುವ ಚಿಂತನೆಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರಂತೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.