Karnataka election 2023: 1 ಕೋಟಿ ಮೌಲ್ಯದ ವಸ್ತು, 10 ಟನ್ ಪಡಿತರ & ಕಂತೆ ಕಂತೆ ಹಣ ವಶಕ್ಕೆ!

Karnataka Assembly election 2023: ಚಿಕ್ಕೋಡಿಯಲ್ಲಿ ದಾಖಲೆ ಇಲ್ಲದೆ ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ ಸುಮಾರು 2.31 ಲಕ್ಷ ಮೌಲ್ಯದ 10 ಟನ್ ಪಡಿತರ ಅಕ್ಕಿಯನ್ನು ಎಫ್‍ಎಸ್‍ಟಿ ಹಾಗೂ ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆಸಿಕೊಂಡಿದ್ದಾರೆ.

Written by - Puttaraj K Alur | Last Updated : Apr 11, 2023, 01:04 PM IST
  • ಮಂಡ್ಯದಲ್ಲಿ ಒಟ್ಟು 1 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ
  • ಚಿಕ್ಕೋಡಿಯಲ್ಲಿ 2.31 ಲಕ್ಷ ಮೌಲ್ಯದ 10 ಟನ್ ಅಕ್ರಮ ಪಡಿತರ ವಶಕ್ಕೆ
  • ಸರ್ಕಾರಿ ಬಸ್‍ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 12 ಲಕ್ಷ 73 ಸಾವಿರ ರೂ. ಹಣ ಜಪ್ತಿ
Karnataka election 2023: 1 ಕೋಟಿ ಮೌಲ್ಯದ ವಸ್ತು, 10 ಟನ್ ಪಡಿತರ & ಕಂತೆ ಕಂತೆ ಹಣ ವಶಕ್ಕೆ!  title=
ಮಂಡ್ಯದಲ್ಲಿ1 ಕೋಟಿ ಮೌಲ್ಯದ ವಸ್ತು ವಶ!

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾರರಿಗೆ ಆಮಿಷ ಒಡ್ಡಲು ಬೆಲೆಬಾಳುವ ವಸ್ತುಗಳು ಮತ್ತು ಕಂತೆ ಕಂತೆ ಹಣವನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ. ಈ ಹಿನ್ನೆಲೆ ಜಿಲ್ಲಾ ಮತ್ತು ತಾಲೂಕು ಚೆಕ್‍ಪೋಸ್ಟ್‍ಗಳಲ್ಲಿ ಚುನಾವಣಾಧಿಕಾರಿಗಳು, ಪೊಲೀಸರು ಭರ್ಜರಿ ಭೇಟೆಯಾಡುತ್ತಿದ್ದಾರೆ.

ಮಂಡ್ಯದಲ್ಲಿ1 ಕೋಟಿ ಮೌಲ್ಯದ ವಸ್ತುಗಳು ವಶ!

ಮಂಡ್ಯದಲ್ಲಿ ದಾಖಲೆ ಇಲ್ಲದ ನಗದು ಹಾಗೂ ವಸ್ತುಗಳನ್ನು ಸೀಜ್ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ನಗದು, ಮದ್ಯ, ಡ್ರಗ್ಸ್ ಸೇರಿ ಹಲವು ವಸ್ತುಗಳನ್ನು ಸೀಜ್ ಮಾಡಲಾಗಿದೆ. ಚುನಾವಣೆ ಘೋಷಣೆ ಬಳಿಕ ದೊಡ್ಡ ಮೊತ್ತದ ಹಣ ಸಿಕ್ಕಿಬಿದ್ದಿದೆ. ಕಳೆದ ವಾರದಲ್ಲಿ 56 ಲಕ್ಷದ 61 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿತ್ತು. ಈ ವಾರ 1 ಕೋಟಿ 12 ಲಕ್ಷ ರೂ. ಮೌಲ್ಯದ ನಗದು ಮತ್ತು ವಸ್ತುಗಳನ್ನು ಸೀಜ್ ಮಾಡಲಾಗಿದೆ.

ಇದನ್ನೂ ಓದಿ: ಬಿಬಿಎಂಪಿ ಅಧಿಕಾರಿಗಳಿಂದ ಎಲೆಕ್ಷನ್ ಜಾಥಾ

ಚಿಕ್ಕೋಡಿಯಲ್ಲಿ 10 ಟನ್ ಅಕ್ರಮ ಪಡಿತರ ವಶಕ್ಕೆ

ದಾಖಲೆ ಇಲ್ಲದೆ ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ ಸುಮಾರು 2.31 ಲಕ್ಷ ಮೌಲ್ಯದ 10 ಟನ್ ಪಡಿತರ ಅಕ್ಕಿಯನ್ನು ಎಫ್‍ಎಸ್‍ಟಿ ಹಾಗೂ ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದ ಚೆಕ್‍ಪೋಸ್ಟ್‍ನಲ್ಲಿ ಜಪ್ತಿ ಮಾಡಲಾಗಿದೆ. ಚುನಾವಣೆಯ ಹಿನ್ನೆಲೆ ಕರ್ನಾಟಕ-ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಸಂಕೇಶ್ವರದ ಚೆಕ್‍ಪೋಸ್ಟ್‍ನಲ್ಲಿ ಎಫ್‍ಎಸ್‍ಟಿ ಹಾಗೂ ಪೊಲೀಸ್‍ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಯಾವದೇ ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಲಾರಿ ಹಾಗೂ ಸುಮಾರು 2.31 ಲಕ್ಷ ಮೌಲ್ಯದ 10 ಟನ್ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.

2.50 ಲಕ್ಷ ರೂ. ವಶಕ್ಕೆ!

ಕರ್ನಾಟಕ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಬೆಳಗಾವಿ ಪೊಲೀಸ್‌ರಿಂದ ಚೆಕ್‌ಪೋಸ್ಟ್‌ಗಳಲ್ಲಿ ಸರ್ಪಗಾವಲು ಹಾಕಲಾಗಿದೆ. ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಿಪ್ಪಾಣಿ ಚೆಕ್‌ಪೋಸ್ಟ್‌ನಲ್ಲಿ 2 ಲಕ್ಷದ 50 ಸಾವಿರ ರೂ. ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬಿ.ಎಸ್.ಯಡಿಯೂರಪ್ಪ ಬಿಜೆಪಿ ಬಳಸಿ ಬಿಸಾಡುವ ಟಿಶ್ಯೂ ಪೇಪರ್ ಆಗಿದ್ದಾರೆ: ಕಾಂಗ್ರೆಸ್

ಯಾದಗಿರಿಯಲ್ಲಿ 12.73 ಲಕ್ಷ ರೂ. ಜಪ್ತಿ!

ಸರ್ಕಾರಿ ಬಸ್‍ನಲ್ಲಿ ಅಕ್ರಮ ಹಣ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ದಾಖಲೆ ಇಲ್ಲದ 12 ಲಕ್ಷ 73 ಸಾವಿರ ರೂ. ಹಣವನ್ನು ಜಪ್ತಿ ಮಾಡಿದ್ದಾರೆ. ಚಂದಪ್ಪ ಚವ್ಹಾಣ್ ಬಸ್‍ನಲ್ಲಿ ದಾಖಲೆಯಿಲ್ಲದೆ ಹಣ ಸಾಗಾಟ ಮಾಡುತ್ತಿದ್ದ. ಶಹಾಪೂರ ಡಿಪೋದ ಕೆಂಭಾವಿ – ಹೈದರಾಬಾದ್‍ ನಡುವೆ ಸಂಚರಿಸುವ ಬಸ್‍ಅನ್ನು ಯಾದಗಿರಿ ನಗರದ ಗಂಜ್ ಪ್ರದೇಶದಲ್ಲಿ ಪೊಲೀಸರು ಚೆಕ್ ಮಾಡಿದ್ದಾರೆ. ಈ ವೇಳೆ ಚಂದಪ್ಪ ಸಾಗಾಟ ಮಾಡುತ್ತಿದ್ದ 12 ಲಕ್ಷ 73 ಸಾವಿರ ಹಣ ಜಪ್ತಿ ಮಾಡಲಾಗಿದೆ. ಯಾದಗಿರಿ ನಗರ ಠಾಣೆ ಪಿಎಸ್‍ಐ ಸುರೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಯಾದಗಿರಿ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News