ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 5 ವಿಧಾನಸಭಾ ಕ್ಷೇತ್ರಗಳಿವೆ. ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಮತ್ತು ಕೊಪ್ಪಳ ಇವು ವಿಧಾನಸಭಾ ಕ್ಷೇತ್ರಗಳಾಗಿವೆ. ಕೊಪ್ಪಳ ಜಿಲ್ಲೆಯ 5 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಈ ಪೈಕಿ 3 ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದು, 1 ಬಿಜೆಪಿ ಹಾಗೂ 1 ಕ್ಷೇತ್ರ ಜನಾರ್ದನರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪಾಲಾಗಿದೆ.


COMMERCIAL BREAK
SCROLL TO CONTINUE READING

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗಾಲಿ ಜನಾರ್ದನರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ದು, ಹಾಲಿ ಶಾಸಕ ಬಿಜೆಪಿಯ ಪರಣ್ಣ ಮುನವಳ್ಳಿಗೆ ಸೋಲಿನ ರುಚಿ ತೋರಿಸಿದ್ದಾರೆ.


ಇದನ್ನೂ ಓದಿ: Karnataka Election Results 2023: ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಜಯ, ಇಲ್ಲಿದೆ ಬೀದರ್ ಜಿಲ್ಲೆಯ ಫೈನಲ್ ರಿಸಲ್ಟ್


ಕೊಪ್ಪಳ ಫಲಿತಾಂಶದ ವಿವರ:


ಗಂಗಾವತಿ - ಕೆಆರ್‌ಪಿಪಿ - ಜನಾರ್ದನರೆಡ್ಡಿ


ಕನಕಗಿರಿ - ಕಾಂಗ್ರೆಸ್‌ - ಶಿವರಾಜ್ ತಂಗಡಗಿ


ಯಲಬುರ್ಗಾ - ಕಾಂಗ್ರೆಸ್‌ - ಬಸವರಾಜ ರಾಯರೆಡ್ಡಿ


ಕೊಪ್ಪಳ - ಕಾಂಗ್ರೆಸ್‌ - ಕೆ.ರಾಘವೇಂದ್ರ ಹಿಟ್ನಾಳ್‌


ಕುಷ್ಟಗಿ – ಬಿಜೆಪಿ - ದೊಡ್ಡನಗೌಡ ಪಾಟೀಲ್


ಮೇ 10ರಂದು ನಡೆದ ಮತದಾನದಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ಶೇ.78ರಷ್ಟು ಮತದಾನವಾಗಿತ್ತು. ಈ ಪೈಕಿ ಯಲಬುರ್ಗಾದಲ್ಲಿ ಅತಿಹೆಚ್ಚು ಅಂದರೆ ಶೇ.78.57ರಷ್ಟು ಮತ ಚಲಾವಣೆಯಾಗಿತ್ತು.


ಇದನ್ನೂ ಓದಿ: Karnataka Assembly election result : ಸೋಲಿನ ಹೊಣೆ ಹೊರುತ್ತೇನೆ: ನಳಿನ್‍ಕುಮಾರ್ ಕಟೀಲ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.