Karnataka Election Results 2023: ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಜಯ, ಇಲ್ಲಿದೆ ಬೀದರ್ ಜಿಲ್ಲೆಯ ಫೈನಲ್ ರಿಸಲ್ಟ್

Bidar District Assembly Election Result 2023: ರಾಜ್ಯ ವಿಧಾನಸಭೆಗೆ ಈ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಬಹುಮತ ದೊರೆತಿದೆ, ಇತ್ತೀಚಿನ ಮಾಹಿತಿಗಳ ಪ್ರಕಾರ್ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಒಟ್ಟು 136 ಸ್ಥಾನಗಳಲ್ಲಿ ತನ್ನ ಟ್ರೆಂಡ್ ಮುಂದುವರೆಸಿದ್ದರೆ, ಬಿಜೆಪಿ 65 ಮತ್ತು ಜೆಡಿಎಸ್ 19 ಸ್ಥಾನಗಳಲ್ಲಿ ತನ್ನ ಟ್ರೆಂಡ ಕಾಯ್ದುಕೊಂಡಿವೆ. ಕಲ್ಯಾಣ ಕರ್ನಾಟಕದ ಬೀದರ್ ಜಿಲ್ಲೆಯ ಕುರಿತು ಹೇಳುವುದಾದರೆ. ಬೀದರ್ ಜಿಲ್ಲೆಯ ಎಲ್ಲಾ ಆರು ಸ್ಥಾನಗಳ ಫಲಿತಾಂಶ ಇದೀಗ ಪ್ರಕಟಗೊಂಡಿದ್ದು, ಬಿಜೆಪಿ ಜಿಲ್ಲೆಯ ಒಟ್ಟು 6 ಸ್ಥಾನಗಳ ಪೈಕಿ 4 ಸ್ಥಾನಗಳಲ್ಲಿ ಜಯಭೇರಿ ಭಾರಿಸಿದೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷ 2 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡರೆ, ಕಳೆದ ಬಾರಿ ಒಂದು ಸ್ಥಾನ ಗೆದ್ದುಕೊಂಡಿದ್ದ ಜೆಡಿಎಸ್ ಗೆ ಈ ಬಾರಿ ಒಂದೂ ಸ್ಥಾನ ಲಭಿಸಿಲ್ಲ. ಬನ್ನಿ ಫೈನಲ್ ಫಲಿತಾಂಶ ಏನು ತಿಳಿದುಕೊಳ್ಳೋಣ,   

Written by - Nitin Tabib | Last Updated : May 13, 2023, 05:28 PM IST
  • ಈ ಬಾರಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ಜಿಲ್ಲೆಯ ಒಟ್ಟು ಆರು ಸ್ಥಾನಗಳ ಪೈಕಿ
  • ಒಟ್ಟು ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ, ಕಾಂಗ್ರೆಸ್ 2 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ.
  • ಬನ್ನಿ ಜಿಲ್ಲೆಯ ಯಾವ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ,
Karnataka Election Results 2023:  ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಜಯ, ಇಲ್ಲಿದೆ ಬೀದರ್ ಜಿಲ್ಲೆಯ ಫೈನಲ್ ರಿಸಲ್ಟ್ title=
ಬೀದರ ಜಿಲ್ಲೆ ವಿಧಾನಸಭೆ ಚುನಾವಣೆ 2023 ಫಲಿತಾಂಶ

Bidar District Assembly Election Results 2023: ರಾಜ್ಯ ವಿಧಾನಸಭೆಗೆ ಮೇ 10, 2023 ರಂದು ನಡೆದ ಚುನಾವಣೆಗಳ ಫಲಿತಾಂಶ ಪ್ರಕತದೊಂದಿದ್ದು ಬಹುತೇಕ ಸ್ಥಾನಗಳಲ್ಲಿ ಕಾಂಗ್ರೆಸ್ ಅಬ್ಯಾರ್ಥಿಗಳು ಜಯ ದಾಖಲಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸರ್ಕಾರ ರಚನೆಯತ್ತ ದಾಪುಗಾಲನ್ನು ಇಟ್ಟಿದೆ. 

ಬೀದರ್ ಜಿಲ್ಲೆಯ ಕುರಿತು ಹೇಳುವುದಾದರೆ, ಧರ್ಮ, ಸೌಹಾರ್ಧ, ಸಂಸ್ಕೃತಿಗಳು ಬಲವಾಗಿ ಬೇರೂರಿರುವ 'ಕಲ್ಯಾಣ'ದ ಈ ಜಿಲ್ಲೆಯಲ್ಲಿ ಒಟ್ಟು 6 ವಿಧಾನ ಸಭಾ ಕ್ಷೇತ್ರಗಳಿವೆ. ಈ ಭಾಗದಲ್ಲಿ ಮಠಗಳು ಹಾಗೂ ಮಠಾಧೀಶರ ಪ್ರಭಾವವೇ ಹೆಚ್ಚು. ಕಳೆದ ಬಾರಿಯ ಅಂದರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ಜಿಲ್ಲೆಯ ಒಟ್ಟು 6 ಸ್ಥಾನಗಳ ಪೈಕಿ 4 ಸ್ಥಾನಗಳನ್ನು ಕಾಂಗ್ರೆಸ್ ತನ್ನ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇನ್ನೊಂದೆಡೆ ಬಿಜೆಪಿ ಹಾಗೂ ಜೆಡಿಎಸ್ ತಲಾ ಒಂದು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದವು. ಆದರೆ  ಈ ಬಾರಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ಜಿಲ್ಲೆಯ ಒಟ್ಟು  ಆರು ಸ್ಥಾನಗಳ ಪೈಕಿ ಒಟ್ಟು ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ, ಕಾಂಗ್ರೆಸ್ 2 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಬನ್ನಿ ಜಿಲ್ಲೆಯ ಯಾವ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ, 

ಬೀದರ್ ಜಿಲ್ಲೆಯ ಕುರುಕ್ಷೇತ್ರ
>> ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು-63 
>> ಜಿಲ್ಲೆಯಲ್ಲಿ ಒಟ್ಟು ಮತದಾರರ ಸಂಖ್ಯೆ- 13,01,546 
>> ಪುರುಷ ಮತದಾರರ ಸಂಖ್ಯೆ- 6,78, 421
>> ಮಹಿಳಾ ಮತದಾರರ ಸಂಖ್ಯೆ- 6.23.061
>> ಲೈಂಗಿಕ ಅಲ್ಪಸಂಖ್ಯಾತರು- 64

ಜಿಲ್ಲೆಯಲ್ಲಿ ಬರುವ ವಿವಿಧ ಕ್ಷೇತ್ರಗಳ ಸಂಕ್ಷಿಪ್ತ ಮಾಹಿತಿ
1. ಹುಮಾನಾಬಾದ್ 
ಕ್ಷೇತ್ರದ ಮಾಹಿತಿ
>> ಮತದಾರರ ಸಂಖ್ಯೆ-2,33,577
>> ಪುರುಷ ಮತದಾರರ ಸಂಖ್ಯೆ-1,21,884
>> ಮಹಿಳಾ ಮತದಾರರ ಸಂಖ್ಯೆ-1,11,681
ಹುಮಾನಾಬಾದ್ ವಿಧಾನಸಭೆ ಕ್ಷೇತ್ರದಲ್ಲಿ ಭಾರತೀಯ ಜನತಾಪಕ್ಷದ ಅಭ್ಯರ್ಥಿ ರಾಜು ಪಾಟೀಲ್ ತಮ್ಮ ಸಮೀಪದ ಪ್ರತಿಸ್ಪರ್ಧಿ ರಾಜಶೇಖರ್ ಬಸವರಾಜ್ ಪಾಟೀಲ್ ಅವರ ವಿರುದ್ಧ 1594 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ರಾಜು ಪಾಟೀಲ್ ಅವರಿಗೆ ಒಟ್ಟು 75515(42.23%) ಮತಗಳು ಬಂದರೆ, ರಾಜ್ ಶೇಖರ್ ಪಾಟೀಲ್ ಅವರಿಗೆ 73921 (42.34%) ಮತಗಳು ಬಂದಿವೆ

2018ರ ವಿಧಾನಸಭೆ ಚುನಾವಣಾ ಫಲಿತಾಂಶ
INC- ರಾಜಶೇಖರ್- 74,945 ಅಂತರ: 31814(47.04%)
BJP- ಸುಭಾಷ್ -43,131 (27.07%)    
JDS-ಎಂ ನಸೀಮೊದ್ದಿನ್ ಪಟೇಲ್ 34,280 (21.51%)

2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಸಿದ್ದು ಪಾಟೀಲ್
ಕಾಂಗ್ರೆಸ್- ರಾಜಶೇಖರ್ ಬಸವರಾಜ್ ಪಾಟೀಲ್
ಜೆಡಿಎಸ್-ಸಿ ಎಂ ಫೈಜ್     

2. ಬೀದರ್ ದಕ್ಷಿಣ
ಕ್ಷೇತ್ರದ ಮಾಹಿತಿ
>> ಮತದಾರರ ಸಂಖ್ಯೆ-1,96,623
>> ಪುರುಷ ಮತದಾರರ ಸಂಖ್ಯೆ-1,01,920
>> ಮಹಿಳಾ ಮತದಾರರ ಸಂಖ್ಯೆ-94,700

ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಭಾರತೀಯ ಜನತಾಪಕ್ಷದ ಶೈಲೇಂದ್ರ ಬೆಳ್ದಾಡೆ ಅವರು ತಮ್ಮ ಸಮೀಪದ ಕಾಂಗ್ರೆಸ್ ಪ್ರತಿಸ್ಪರ್ಧಿ ಅಶೋಕ್ ಖೇಣಿ ವಿರುದ್ಧ 1263 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶೈಲೇಂದ್ರ ಬೆಳ್ದಾಡೆ ಅವರಿಗೆ 49872 (32.51%)  ಮತಗಳು ಬಂದರೆ, ಅಶೋಕ್ ಖೇಣಿ ಅವರಿಗೆ 48609 (31.69%) ಮತಗಳು ದೊರೆತಿವೆ. 

2018ರ ವಿಧಾನಸಭೆ ಚುನಾವಣಾ ಫಲಿತಾಂಶ
JDS- ಬಂಡೆಪ್ಪ- 55,107 (39.68%)- ಅಂತರ- 12742 (39.68%)
BJP- ಡಾ ಶೈಲೇಂದ್ರ ಬೆಲ್ದಾಳೆ- 42,365 (30.50%)    
INC- ಅಶೋಕ್ ಖೇಣಿ- 35,131 (25.29%)

2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಡಾ. ಶೈಲೇಂದ್ರ ಬೆಳದಲೆ
ಕಾಂಗ್ರೆಸ್- ಅಶೋಕ್ ಖೇಣಿ
ಜೆಡಿಎಸ್    - ಬಂಡೆಪ್ಪಾ ಕಾಶೆಂಪುರ್

3. ಬೀದರ್
ಕ್ಷೇತ್ರದ ಮಾಹಿತಿ
>> ಮತದಾರರ ಸಂಖ್ಯೆ-2,14,608
>> ಪುರುಷ ಮತದಾರರ ಸಂಖ್ಯೆ-1,09,861
>> ಮಹಿಳಾ ಮತದಾರರ ಸಂಖ್ಯೆ-1,04,721

ಬೀದರ್ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಹೀಮ್ ಖಾನ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್ ನ ಸೂರ್ಯಕಾಂತ್ ನಾಗಮಾರಪಳ್ಳಿ ಅವರನ್ನು 10780 ಮತಗಳ ಅಂತರದಿಂದ ಸೋಲಿಸುವ ಮೂಲಕ ಜಯಮಾಲೆಯನ್ನು ತನ್ನ ಕೊರಳಿಗೆ ಹಾಕಿಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಹೀಮ್ ಖಾನ್ ಗೆ 69165 (46.03%)ಮತಗಳನ್ನು ಪಡೆದುಕೊಂಡರೆ ಜೆಡಿಎಸ್ ಅಭ್ಯರ್ಥಿಗೆ 58385 (38.85%) ಮತಗಳು ಬಂದಿವೆ

2018ರ ವಿಧಾನಸಭೆ ಚುನಾವಣಾ ಫಲಿತಾಂಶ
INC- ರಹೀಂ ಖಾನ್- 73,270- ಅಂತರ: 10245(52.10%)
BJP- ಸೂರ್ಯಕಾಂತ್ ನಾಗಮಾರಪಳ್ಳಿ- 63,025 (44.82%)
BSP- ಎಂ ಮುನಿಯಪ್ಪ- 1,384 (0.98%)

2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಈಶ್ವರ್ ಚಂದ್ರ ವಿದ್ಯಾಸಾಗರ್
ಕಾಂಗ್ರೆಸ್- ರಹೀಮ್ ಖಾನ್ 
ಜೆಡಿಎಸ್- ಸೂರ್ಯಕಾಂತ್ ನಾಗಮಾರಪಳ್ಳಿ    

4. ಭಾಲ್ಕಿ 
ಕ್ಷೇತ್ರದ ಮಾಹಿತಿ
>> ಮತದಾರರ ಸಂಖ್ಯೆ- 2,22,472
>> ಪುರುಷ ಮತದಾರರ ಸಂಖ್ಯೆ- 1,16,904
>> ಮಹಿಳಾ ಮತದಾರರ ಸಂಖ್ಯೆ- 1,05,560

ಪಾರಂಪರಿಕವಾಗಿ ಕಾಂಗ್ರೆಸ್ ನ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಕೂಡ ಕಾಂಗ್ರೆಸ್ ಅಭ್ಯರ್ಥಿ ಈಶ್ವರ್ ಖಂಡ್ರೆ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಪ್ರಕಾಶ್ ಖಂಡ್ರೆ ಅವರನ್ನು 27706 ಮತಗಳ ಭರ್ಜರಿ ಅಂತರದಿಂದ ಸೋಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಈಶ್ವರ್ ಖಂಡ್ರೆ ಅವರಿಗೆ 99451 (56.9%) ಮತಗಳು ಬಂದರೆ, ಪ್ರಕಾಶ್ ಖಂಡ್ರೆ ಅವರಿಗೆ 71745 (41.05%) ಮತಗಳು ದೊರೆತಿವೆ. 

2018ರ ವಿಧಾನಸಭೆ ಚುನಾವಣಾ ಫಲಿತಾಂಶ
INC- ಈಶ್ವರ್ ಖಂಡ್ರೆ- 84,673 ಅಂತರ: 21438 (50.68%)
BJP-ಡಿ ಕೆ ಸಿದ್ರಾಮ್- 63,235 (37.85%)    
JDS- ಖಂಡ್ರೆ ಪ್ರಕಾಶ್- 15,142 (9.06%)

2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಪ್ರಕಾಶ್ ಖಂಡ್ರೆ
ಕಾಂಗ್ರೆಸ್- ಈಶ್ವರ್ ಖಂಡ್ರೆ
ಜೆಡಿಎಸ್- ರೌಫ್ ಪಟೇಲ್    

ಇದನ್ನೂ ಓದಿ-Kalaburagi Assembly Election Result 2023: ಕಲಬುರಗಿ ಜಿಲ್ಲೆಯ 9ರ ಪೈಕಿ 7 ಕ್ಷೇತ್ರಗಳು ‘ಕೈ’ವಶ..!

5. ಔರಾದ್
ಕ್ಷೇತ್ರದ ಮಾಹಿತಿ
>> ಮತದಾರರ ಸಂಖ್ಯೆ-2,13,194
>> ಪುರುಷ ಮತದಾರರ ಸಂಖ್ಯೆ- 1,11,027
>> ಮಹಿಳಾ ಮತದಾರರ ಸಂಖ್ಯೆ- 1,02,167

ಔರಾದ್ ಕ್ಷೇತ್ರದ ಕುರಿತು ಹೇಳುವುದಾದ್ರೆ, ಈ ಕ್ಷೇತ್ರದಲ್ಲಿ ಭಾರತೀಯ ಜನತಾಪಕ್ಷದ ಪ್ರಭು ಚವ್ಹಾನ್ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಭೀಮಸೇನ್ ರಾವ್ ಶಿಂಧೆ ಅವರನ್ನು 9569 ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಪ್ರಭು ಚವ್ಹಾನ್ ಅವರಿಗೆ 81382 (51.31%) ಮತಗಳು ಬಂದರೆ, ಭೀಮಸೇನ್ ರಾವ್ ಶಿಂಧೆ ಅವರಿಗೆ 71813 (45.28%) ಮತಗಳು ಬಿದ್ದಿವೆ. 

2018ರ ವಿಧಾನಸಭೆ ಚುನಾವಣಾ ಫಲಿತಾಂಶ
BJP- ಪ್ರಭು ಚೌಹಾಣ್-75,061- ಅಂತರ: 10592  (50.92%)
INC- ವಿಜಯಕುಮಾರ್-64,469 (43.73%)
JDS- ಧನಾಜಿ- 2,605 (1.77%)

2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಪ್ರಭು ಚವ್ಹಾನ್
ಕಾಂಗ್ರೆಸ್- ಡಾ. ಶಿಂಧೆ ಭೀಮಸೇನ್ ರಾವ್
ಜೆಡಿಎಸ್- ಜೈಸಿಂಗ    

ಇದನ್ನೂ ಓದಿ-Yadgir Assembly Election Result 2023: ಯಾದಗಿರಿ ಜಿಲ್ಲೆಯಲ್ಲಿ ‘ಕೈ’ಚಳಕಕ್ಕೆ ಬಿಜೆಪಿ ಕಂಗಾಲು!

6. ಬಸವಕಲ್ಯಾಣ
ಕ್ಷೇತ್ರದ ಮಾಹಿತಿ
>> ಮತದಾರರ ಸಂಖ್ಯೆ-2,21,073
>> ಪುರುಷ ಮತದಾರರ ಸಂಖ್ಯೆ-1,16,826
>> ಮಹಿಳಾ ಮತದಾರರ ಸಂಖ್ಯೆ-1,04,232

ಬೀದರ್ ಜಿಲ್ಲೆಯ ಬಸವ ಕಲ್ಯಾಣ ಕ್ಷೇತ್ರದ ಕುರಿತು ಹೇಳುವುದಾದರೆ,   ಈ   ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಶರಣು ಸಲಗರ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ವಿಜಯ್ ಸಿಂಗ್ ಅವರನ್ನು ಭರ್ಜರಿ 14415 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಶರಣು ಸಲಗರ್ ಅವರಿಗೆ 92920 (52.8%) ಮತಗಳು ಬಂದರೆ, ಕಾಂಗ್ರೆಸ್ ಅಭ್ಯರ್ಥಿ 78505 (44.61 %) ಮತಗಳನ್ನು ಪಡೆದುಕೊಂಡಿದ್ದಾರೆ. 

2018ರ ವಿಧಾನಸಭೆ ಚುನಾವಣಾ ಫಲಿತಾಂಶ
INC- ಬಿ ನಾರಾಯಣರಾವ್-61,425- ಅಂತರ: 17272(42.27%)
BJP- ಮಲ್ಲಿಕಾರ್ಜುನ ಖೂಬಾ- 44,153 (30.38%)    
JDS-ಪಿ ಜಿ ಆರ್ ಸಿಂಧ್ಯ- 31,414 (21.62%)

2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ಶರಣು ಸಲಗರ್
ಕಾಂಗ್ರೆಸ್-ವಿಜಯ್ ಸಿಂಗ್
ಜೆಡಿಎಸ್- ಸಂಜು ಕುಮಾರ್ ವಾಡೇಕರ್

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News