Kalaburagi Assembly Election Result 2023: ಕಲಬುರಗಿ ಜಿಲ್ಲೆಯ 9ರ ಪೈಕಿ 7 ಕ್ಷೇತ್ರಗಳು ‘ಕೈ’ವಶ..!

Kalaburagi Assembly Election Result 2023: ಕಳೆದ ಚುನಾವಣೆಯಲ್ಲಿ ಕಲಬುರಗಿಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯು 4 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 5ರಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ 7ರಲ್ಲಿ ಜಯ ಸಾಧಿಸಿದ್ದರೆ, ಬಿಜೆಪಿ ಕೇವಲ 2 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಂಡಿದೆ.

Written by - Puttaraj K Alur | Last Updated : May 13, 2023, 05:19 PM IST
  • ಶರಣರ ನಾಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳದ್ದೇ ಪಾರುಪತ್ಯ!
  • 9 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳು ‘ಕೈ’ ಪಾಲು!
  • ಕಳೆದ ಬಾರಿ 4 ಕ್ಷೇತ್ರ ಗೆದ್ದಿದ್ದ ಬಿಜೆಪಿಗೆ ಈ ಬಾರಿ 2 ಕ್ಷೇತ್ರಗಳು
Kalaburagi Assembly Election Result 2023: ಕಲಬುರಗಿ ಜಿಲ್ಲೆಯ 9ರ ಪೈಕಿ 7 ಕ್ಷೇತ್ರಗಳು ‘ಕೈ’ವಶ..!  title=
ಕಲಬುರಗಿಯ 7 ಕ್ಷೇತ್ರಗಳು ‘ಕೈ’ಪಾಲು!

ಕಲಬುರಗಿ: ಶರಣರ ನಾಡು ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 9 ವಿಧಾನಸಭಾ ಕ್ಷೇತ್ರಗಳಿವೆ. ಕಲಬುರಗಿಯನ್ನು ಕಲಬುರಗಿ ಉತ್ತರ, ಕಲಬುರಗಿ ದಕ್ಷಿಣ, ಕಲಬುರಗಿ ಗ್ರಾಮಾಂತರ ಎಂದು 3 ವಿಧಾನಸಭಾ ಕ್ಷೇತ್ರಗಳನ್ನಾಗಿ ವಿಭಜಿಸಲಾಗಿದೆ. ಚಿತ್ತಾಪುರ, ಸೇಡಂ, ಚಿಂಚೋಳಿ, ಆಳಂದ, ಅಫ್ಜಲಪುರ, ಜೇವರ್ಗಿ ಇನ್ನುಳಿದ ಕ್ಷೇತ್ರಗಳಾಗಿವೆ.

ಇದನ್ನೂ ಓದಿ: Chikmagalur Assembly Constituency: ಎಚ್ ಡಿ ತಮ್ಮಯ್ಯಗೆ ಗೆಲುವು ಸಿಟಿ ರವಿಗೆ ಹೀನಾಯ ಸೋಲು!

ಕಲಬುರಗಿ ಫಲಿತಾಂಶದ ವಿವರ:

ಕಲಬುರಗಿ ಉತ್ತರ - ಕಾಂಗ್ರೆಸ್ - ಕನೀಝ್ ಫಾತೀಮಾ

ಕಲಬುರಗಿ ದಕ್ಷಿಣ – ಕಾಂಗ್ರೆಸ್- ಚಂದ್ರಕಾಂತ್ ಬಿ.ಪಾಟೀಲ್

ಕಲಬುರಗಿ ಗ್ರಾಮಾಂತರ – ಬಿಜೆಪಿ - ಬಸವರಾಜ್ ಮಟ್ಟಿಮಡು

ಚಿತ್ತಾಪುರ – ಕಾಂಗ್ರೆಸ್ - ಪ್ರಿಯಾಂಕ್ ಖರ್ಗೆ

ಜೇವರ್ಗಿ – ಕಾಂಗ್ರೆಸ್ - ಅಜಯ್ ಧರಮ್ ಸಿಂಗ್

ಸೇಡಂ – ಕಾಂಗ್ರೆಸ್ - ಡಾ.ಶರಣಪ್ರಕಾಶ್ ಪಾಟೀಲ್

ಚಿಂಚೋಳಿ – ಬಿಜೆಪಿ - ಅವಿನಾಶ್ ಉಮೇಶ್ ಜಾಧವ್

ಆಳಂದ – ಕಾಂಗ್ರೆಸ್ - ಭೋಜರಾಜ

ಅಫ್ಜಲ್ಪುರ - ಕಾಂಗ್ರೆಸ್ - ಎಂ.ವೈ. ಪಾಟೀಲ್

ಮೇ 10ರ ಬುಧವಾರ ನಡೆದ ಮತದಾನದಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಶೇ.66ರಷ್ಟು ಮತದಾನವಾಗಿತ್ತು. 9 ಕ್ಷೇತ್ರಗಳ ಪೈಕಿ ಸೇಡಂನಲ್ಲಿಯೇ ಅತಿಹೆಚ್ಚು ಅಂದರೆ ಶೇ.77.03ರಷ್ಟು ಮತದಾನವಾಗಿತ್ತು.

ಕಳೆದ ಚುನಾವಣೆಯಲ್ಲಿ ಕಲಬುರಗಿಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯು 4 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 5ರಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ 7ರಲ್ಲಿ ಜಯ ಸಾಧಿಸಿದ್ದರೆ, ಬಿಜೆಪಿ ಕೇವಲ 2 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಂಡಿದೆ.

ಇದನ್ನೂ ಓದಿ: Yadgir Assembly Election Result 2023: ಯಾದಗಿರಿ ಜಿಲ್ಲೆಯಲ್ಲಿ ‘ಕೈ’ಚಳಕಕ್ಕೆ ಬಿಜೆಪಿ ಕಂಗಾಲು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News