ಯಾದಗಿರಿ : ನಾಡಿನಲ್ಲೆಡೆ ಸಂಭ್ರಮದಿಂದ ಮೋಹರಂ ಹಬ್ಬ ನಡೆಯುತ್ತಿದೆ ಯಾದಗಿರಿ ಜಿಲ್ಲೆಯಲ್ಲಿ ಹಿಂದೂ ಮುಸ್ಲಿಂ ಬಾಂಧವರಿಂದ ಒಟ್ಟಾಗಿ ಮೊಹರಂ ಆಚರಣೆ ಮಾಡುತ್ತಾರೆ.


COMMERCIAL BREAK
SCROLL TO CONTINUE READING

ಸುರಪುರ ತಾಲೂಕಿನ ನಗನೂರ ಗ್ರಾಮದಲ್ಲೊಂದು ಮೊಹರಂ ಕೊನೆಯ ದಿನದಂದು ವಿಶಿಷ್ಟ ಆಚರಣೆ ಮಾಡುತ್ತಾರೆ. ಇಲ್ಲಿ ಅಲಾಹಿ ದೇವರಿಗೆ ಸಂತಾನದ ಹರಕೆ ಹೊತ್ತಿರುವವರು ತಮ್ಮ ಹರಕೆ ಪೂರ್ಣಗೊಂಡ ಬಳಿಕ ಬಂದು ಈ ರೀತಿ ಹರಕೆ ತೀರಿಸುತ್ತಾರೆ ಎನ್ನಲಾಗಿದೆ.


ಇದನ್ನೂ ಓದಿ- Har Ghar Tiranga: ರಾಜ್ಯದ 1 ಕೋಟಿ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಗುರಿ- ಸಿಎಂ ಬೊಮ್ಮಾಯಿ


ಇಲ್ಲಿ ಮೊಹರಂ ಕೊನೆಯ ದಿನದಂದು ದೇವರ ಮುಂಭಾಗ ಹಾಕಿದ ಬೆಂಕಿಯ ಕುಂಡದ ಸುತ್ತ ಸುತ್ತು ಹಾಕುತ್ತಾ ಕುಣಿದು ಕುಪ್ಪಳಿಸುವ ಹರಕೆ ಹೊತ್ತ ಭಕ್ತರ ಮಕ್ಕಳು, ನಂತರ ಕೆಸರಿನಲ್ಲಿ ಹೊರಳಾಡಿಕೊಂಡು ತಮ್ಮ ಭಕ್ತಿ ಪರಕಾಷ್ಟೆ ಮೆರೆದಿದ್ದಾರೆ. ಮಕ್ಕಳು ಮಾತ್ರ ಇದರಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದು ಇದರ ವಿಶೇಷತೆ.


ಇದನ್ನೂ ಓದಿ- ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ನೀಡಿದ ಸಚಿವ ಬಿ.ಸಿ.ನಾಗೇಶ್


ಇದು ಹಿಂದಿನಿಂದಿಲೂ ನಡೆದುಕೊಂಡು ಬರುತ್ತಿದೆಯಂತೆ. ಇಂತಹ ಒಂದು ಆಚರಣೆಯಲ್ಲಿ ಸಾವಿರಾರು ಜನರು ಪಾಲ್ಗೊಳ್ಳುತ್ತಾರೆ. ಇನ್ನು ಅತಿಯಾದ ಮಳೆಯಲ್ಲೂ ಕೂಡ ಈ ಭಾರಿ ಕೆಸರಿನಲ್ಲಿ ಹೊರಳಾಡುತ್ತಾ ಹಿಂದಿನ ಕಾಲದ ಪದ್ದತಿಯನ್ನು ಮುಂದುವರೆಸಲಾಗಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.