ಬೆಂಗಳೂರು: ರಿಯಾಲಿಟಿ ಶೋ ಮೂಲಕ ರಾಜ್ಯದಲ್ಲಿ ಖ್ಯಾತಿ ಪಡೆದು ಬಳಿಕ ಬಾರ್ ಗಲಾಟೆ, ಕಿಡ್ನ್ಯಾಪ್ ಪ್ರಕರಣಗಳಲ್ಲಿ ಪೊಲೀಸರ ಅತಿಥಿಯಾಗಿದ್ದ ಸುನಾಮಿ ಕಿಟ್ಟಿ ಆತನ ಮೇಲೆ ಬಂದಿರುವ ಆರೋಪದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾನೆ. ಪಬ್ನಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯಿಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಸುನಾಮಿ ಕಿಟ್ಟಿ ಮತ್ತು ಸ್ನೇಹಿತ ಚೇತನ್ ಗೌಡ ಅವರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಪ್ರತಿಯಾಗಿ ಪ್ರಶಾಂತ್ ಎಂಬುವರಿಂದ ಪ್ರತಿ ದೂರು ದಾಖಲಾಗಿತ್ತು.
ಇದನ್ನೂ ಓದಿ : GPay ಬಳಸುವಾಗ ಈ ಸಲಹೆ ಅನುಸರಿಸಿದ್ರೆ ಅತಿ ಹೆಚ್ಚು ಕ್ಯಾಶ್ಬ್ಯಾಕ್ ಪಡೆಯಬಹುದು!
ಮಾಧ್ಯಮಗಳಲ್ಲಿ ಈ ಸುದ್ದಿ ವರದಿಯಾಗುತ್ತಿದ್ದಂತೆ ಸುನಾಮಿ ಕಿಟ್ಟಿ ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದಾನೆ. ಜುಲೈ 24ರ ರಾತ್ರಿ ಚರ್ಚ್ ಸ್ಟ್ರೀಟ್ನ ಪಬ್ ವೊಂದರಲ್ಲಿ ಪಾರ್ಟಿಗೆ ಸ್ನೇಹಿತ ಚೇತನ್ ಗೌಡ ಜೊತೆ ಹೋದಾಗ ಶ್ಯಾಂಪೆನ್ ಓಪನ್ ಮಾಡುವ ವಿಚಾರದಲ್ಲಿ ಮಾತುಕತೆಯಾಗಿತ್ತು. ಅಲ್ಲಿ ಬೇರೆ ಏನು ಆಗಿಲ್ಲ. ಯಾವುದೇ ಗಲಾಟೆಯಲ್ಲಿ ನಾನು ಭಾಗಿಯಾಗಿಲ್ಲ. ಸ್ಟೇಷನ್ ಬೆಲ್ ಪಡೆದುಕೊಂಡು ಬಂದಿದ್ದೇನೆ. ಮಾಧ್ಯಮಗಳಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನೂ ಘಟನೆಗೆ ಸಂಬಂಧಿಸಿದಂತೆ ಚೇತನ್ ಕಿಶೋರ್ ಎಂಬುವವರಿಂದ ಸಹ ದೂರು ದಾಖಲಾಗಿದ್ದು ಶಾಂಪೇನ್ ಅವರ ಮೇಲೆ ಬಿದ್ದಿದ್ದಕ್ಕೆ ನಮ್ಮನ್ನು ಪ್ರಶ್ನಿಸಿ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎರಡೂ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕುಡಿದ ಅಮಲಿನಲ್ಲಿ ರಿಯಾಲಿಟಿ ಶೋ ಖ್ಯಾತಿಯ ಸುನಾಮಿ ಕಿಟ್ಟಿ ಗಲಾಟೆ, ದೂರು ದಾಖಲು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.