ಬೆಂಗಳೂರು: ಗುಜರಾತ್ (Gujarat) ಮಾದರಿಯಲ್ಲಿ ಭಗವದ್ಗೀತೆ (Bhagavadgeete) ಪಠ್ಯಕ್ರಮದಲ್ಲಿ ಅಳವಡಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.


COMMERCIAL BREAK
SCROLL TO CONTINUE READING

ಎಲ್ಲಾ ಧರ್ಮಗಳ ಆಚಾರ-ವಿಚಾರಗಳನ್ನ ತಿಳಿದುಕೊಳ್ಳುವುದು ತಪ್ಪೇನಿಲ್ಲ. ಯಾವ ಸಿಲಾಬಸ್ ಸೇರಿಸುತ್ತಾರೋ ನೋಡೋಣ. ಹೊಸದಾಗಿ ವೈಭವಿಕರಿಸುವುದು ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.


ಇದನ್ನೂ ಓದಿ: ಎರಡನೇ ದಿನವೂ ಮುಂದುವರಿದ 'ಜೇಮ್ಸ್‌' ಜಾತ್ರೆ..!


ನಾನು ಎನ್ ಇಪಿ ಯನ್ನು (NEP) ಸಂಪೂರ್ಣವಾಗಿ ವಿರೋಧ ಮಾಡಿದ್ದೇನೆ. ದೇಶದಲ್ಲಿ ಅದರ ಅವಶ್ಯಕತೆ ಇಲ್ಲ. ಎಲ್ಲರೂ ಬುದ್ದಿವಂತರಿದ್ದಾರೆ. ಕೆಂಗಲ್ ಹನುಮಂತಯ್ಯನವರು ಆಗಲೇ ಎರಡು ರೂಪಾಯಿಗೆ ಭಗವದ್ಗೀತೆ ಪ್ರತಿಗಳನ್ನ ಹಂಚಿದ್ದರು. ಇವರು ಹೊಸದಾಗಿ ದೊಡ್ಡಾದಾಗಿ ಏನ್ ಮಾಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ. 


ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh), ಹಿಂದೆ ನಾವು ಓದುವ ಸಂದರ್ಭದಲ್ಲಿ ವಾರಕ್ಕೆ ಒಂದು ದಿನ ನೀತಿ ಶಿಕ್ಷಣ ಪಾಠ ಇರುತ್ತಿತ್ತು. ಶಿಕ್ಷಣ ತಜ್ಞರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಭಗವದ್ಗೀತೆಯನ್ನು ಮಕ್ಕಳಿಗೆ ಹೇಳಿಕೊಡಬಾರದು ಅಂತೇನೂ ಇಲ್ಲ. ರಾಮಾಯಣ, ಮಹಾಭಾರತ, ಬೈಬಲ್, ಕುರಾನ್ ಎಲ್ಲದರಲ್ಲೂ ಇರುವ ಒಳ್ಳೆಯ ಅಂಶಗಳನ್ನು ಸೇರಿಸಬಹುದು ಎಂದಿದ್ದರು. 


ಇದನ್ನೂ ಓದಿ: ಜೇಮ್ಸ್' ನೋಡುತ್ತಲೇ ಪ್ರಾಣ ಬಿಟ್ಟ ಅಪ್ಪು ಅಭಿಮಾನಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.