/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಬೆಂಗಳೂರು : ಬಹುನಿರೀಕ್ಷಿತ 'ಜೇಮ್ಸ್‌' ಸಿನಿಮಾ ರಿಲೀಸ್‌ ಆಗಿ ಇವತ್ತಿಗೆ 2ನೇ ದಿನ. ಆದ್ರೆ ಅಭಿಮಾನಿಗಳ ಸಂಭ್ರಮ ಸಡಗರ ಮಾತ್ರ ದಿನೇ ದಿನೇ ಹೆಚ್ಚಾಗುತ್ತಿದ್ದು, ಪವರ್‌ ಸ್ಟಾರ್ ಅಪ್ಪು ಅವರ ಕೊನೆಯ ಸಿನಿಮಾ ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದು ಬರುತ್ತಿದೆ. ಥಿಯೇಟರ್‌ ಎದುರು ಇವತ್ತು ಕೂಡ ಭಾರಿ ಸಂಖ್ಯೆಯಲ್ಲಿ ಪ್ರೇಕ್ಷಕರು ಟಿಕೆಟ್‌ ಖರೀದಿಗೆ ಮುಗಿಬಿದ್ದಿದ್ದರು.

ಅಪ್ಪು ಅಂದ್ರೆ ಅಭಿಮಾನ, ಅಪ್ಪು(Puneeth Rajkumar) ಅಂದ್ರೆ ಅಭಿಮಾನಿಗಳಿಗೆ ಸಂಭ್ರಮ, ಅಪ್ಪು ಅನ್ನೋ ಹೆಸರು ಕನ್ನಡಿಗರ ಮನದಿಂದ ಎಂದೆಂದಿಗು ಮರೆಯಾಗಲು ಸಾಧ್ಯವೇ ಇಲ್ಲ. ಅಂದಹಾಗೆ ನಾವು ಹೇಳ್ತಿರೋದು 'ಜೇಮ್ಸ್‌' ಸಿನಿಮಾ ಬಗ್ಗೆ. 'ಜೇಮ್ಸ್‌' ಜಗತ್ತಿನಾದ್ಯಂತ ರಿಲೀಸ್‌ ಆಗಿ ಭರ್ಜರಿ ಓಟ ಮುಂದುವರಿಸಿದೆ. ಈ ಸಿನಿಮಾಗಾಗಿ ಕನ್ನಡಿಗರು ಸೇರಿದಂತೆ ಕೋಟ್ಯಂತರ ಭಾರತೀಯರು ಕಾಯುತ್ತಿದ್ದರು. ನಿನ್ನೆ 'ಜೇಮ್ಸ್‌' ಸಿನಿಮಾ ಸುಮಾರು 4 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆಗೆ ಅಪ್ಪಳಿಸಿದ್ದು, 2ನೇ ದಿನವೂ ಅದೇ ಸಂಭ್ರಮ ಮನೆಮಾಡಿದೆ.

ಇದನ್ನೂ ಓದಿ : ಬಿ-ಟೌನ್ ನಲ್ಲಿ ಬಣ್ಣದೋಕುಳಿಯ ವೈಭವ.. ಹೀಗಿತ್ತು ಬಾಲಿವುಡ್ ಸೆಲೆಬ್ರಿಟಿಗಳ ಹೋಳಿ ಸೆಲೆಬ್ರೇಶನ್!

ಟಿಕೆಟ್‌ ಸಿಗುತ್ತಿಲ್ಲ

ವೀರೇಶ್‌ ಚಿತ್ರಮಂದಿರ(Veeresh Cinemas)ದ ಬಳಿ ಇವತ್ತು ಕೂಡ ಭಾರಿ ಪ್ರಮಾಣದಲ್ಲಿ ಪ್ರೇಕ್ಷಕರು ನೆರೆದಿದ್ದರು. ಟಿಕೆಟ್‌ ಖರೀದಿಗೆ ಜನ ಮುಗಿಬಿದ್ದಿದ್ದರು. ಈಗಾಗಲೇ ಭಾನುವಾರದವರೆಗೂ ಟಿಕೆಟ್‌ ಬುಕ್ಕಿಂಗ್‌ ಕನ್ಫರ್ಮ್‌ ಆಗಿದ್ದು, ಬಾಕಿ ಇರುವ ಕೆಲವೇ ಟಿಕೆಟ್‌ಗೆ ಪ್ರೇಕ್ಷಕರು ಮುಗಿಬಿದ್ದಿದ್ದಾರೆ.

ಇನ್ನು ಅಪ್ಪು ಸಿನಿಮಾ ಬಗ್ಗೆ ಹೇಳಬೇಕು ಅಂದ್ರೆ, ಪವರ್‌ ಸ್ಟಾರ್‌ ಮಾಡುವ ಪ್ರತಿಯೊಂದು ಸಿನಿಮಾ(James Movie)ದಲ್ಲೂ ಒಂದೊಂದು ಸಾಮಾಜಿಕ ಸಂದೇಶ ಇದ್ದೇ ಇರುತ್ತದೆ. ಹಾಗೇ ಈ ಸಿನಿಮಾದಲ್ಲೂ ಸಾಮಾಜಿಕ ಸಂದೇಶ ನೀಡುವ ಜೊತೆಗೆ ಕೌಟುಂಬಿಕ ಪ್ರಧಾನ ಚಿತ್ರವಾಗಿಯೂ ಜೇಮ್ಸ್‌ ಸಿನಿಮಾ ಗುರುತಿಸಿಕೊಂಡಿದೆ. ಹೀಗಾಗಿ ಕುಟುಂಬ ಸಮೇತರಾಗಿ ಥಿಯೇಟರ್‌ ಕಡೆಗೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಇದನ್ನೂ ಓದಿ : The Kashmir Files: ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ Y ಕೆಟಗರಿ ಭದ್ರತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
second day also continued appu fans celebrations in bengaluru
News Source: 
Home Title: 

ಎರಡನೇ ದಿನವೂ ಮುಂದುವರಿದ 'ಜೇಮ್ಸ್‌' ಜಾತ್ರೆ..!

Appu Fans celebrations : ಎರಡನೇ ದಿನವೂ ಮುಂದುವರಿದ 'ಜೇಮ್ಸ್‌' ಜಾತ್ರೆ..!
Yes
Is Blog?: 
No
Tags: 
Facebook Instant Article: 
Yes
Highlights: 

ಬಹುನಿರೀಕ್ಷಿತ 'ಜೇಮ್ಸ್‌' ಸಿನಿಮಾ ರಿಲೀಸ್‌ ಆಗಿ ಇವತ್ತಿಗೆ 2ನೇ ದಿನ

ಅಭಿಮಾನಿಗಳ ಸಂಭ್ರಮ ಸಡಗರ ಮಾತ್ರ ದಿನೇ ದಿನೇ ಹೆಚ್ಚಾಗುತ್ತಿದ್ದು

ಅಪ್ಪು ಅಂದ್ರೆ ಅಭಿಮಾನ, ಅಪ್ಪು ಅಂದ್ರೆ ಅಭಿಮಾನಿಗಳಿಗೆ ಸಂಭ್ರಮ

Mobile Title: 
ಎರಡನೇ ದಿನವೂ ಮುಂದುವರಿದ 'ಜೇಮ್ಸ್‌' ಜಾತ್ರೆ..!
Malathesha M
Publish Later: 
No
Publish At: 
Friday, March 18, 2022 - 18:08
Reported By: 
Channabasava A Kashinakunti
Created By: 
Chennabasava A Kashinakunti
Updated By: 
Chennabasava A Kashinakunti
Published By: 
Chennabasava A Kashinakunti
Request Count: 
2
Is Breaking News: 
No