'ಜೇಮ್ಸ್' ನೋಡುತ್ತಲೇ ಪ್ರಾಣ ಬಿಟ್ಟ ಅಪ್ಪು ಅಭಿಮಾನಿ!

ಅಪ್ಪು ಹುಟ್ಟುಹಬ್ಬ ಮತ್ತು ಜೇಮ್ಸ್  (James) ಸಂಭ್ರಮಾಚರಣೆಯಲ್ಲಿ ಕುಸಿದು ಬಿದ್ದ ಅಪ್ಪು (Appu Fans) ಅಭಿಮಾನಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

Written by - Zee Kannada News Desk | Last Updated : Mar 18, 2022, 05:27 PM IST
  • ಅಪ್ಪು ಹುಟ್ಟುಹಬ್ಬ ಮತ್ತು ಜೇಮ್ಸ್ ಸಂಭ್ರಮಾಚರಣೆ
  • 'ಜೇಮ್ಸ್' ನೋಡುತ್ತಲೇ ಪ್ರಾಣ ಬಿಟ್ಟ ಅಪ್ಪು ಅಭಿಮಾನಿ
'ಜೇಮ್ಸ್' ನೋಡುತ್ತಲೇ ಪ್ರಾಣ ಬಿಟ್ಟ ಅಪ್ಪು ಅಭಿಮಾನಿ!  title=
ಅಪ್ಪು ಅಭಿಮಾನಿ

ನಂಜನಗೂಡು: ಅಪ್ಪು ಹುಟ್ಟುಹಬ್ಬ ಮತ್ತು ಜೇಮ್ಸ್  (James) ಸಂಭ್ರಮಾಚರಣೆಯಲ್ಲಿ ಕುಸಿದು ಬಿದ್ದ ಅಪ್ಪು (Appu Fans) ಅಭಿಮಾನಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಹೋಳಿ ಆಡುವ ನೆಪದಲ್ಲಿ ವಸೂಲಿ ಧಂದೆ: ಹಣ ಕೊಡದಿದ್ರೆ ಹಲ್ಲೆ

ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೆಡಿಯಾಲ ಗ್ರಾಮದ ಪುನೀತ್ (Puneeth Rajkumar) ಅಭಿಮಾನಿ ಆಕಾಶ್ (22) ಅಸುನೀಗಿದ್ದಾರೆ. ಹೆಡಿಯಾಲ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಮಂಜುಳಾ ಎಂಬುವರ ಪುತ್ರನಾಗಿರುವ ಆಕಾಶ್ ಹೃದಯಾಘಾತದಿಂದ ಮೃತರಾಗಿದ್ದಾರೆ.

ನಿನ್ನೆ ಅದ್ದೂರಿ ಮತ್ತು ಸಡಗರ ಸಂಭ್ರಮದಿಂದ ಜೇಮ್ಸ್ ಮತ್ತು ಅಪ್ಪು ಹುಟ್ಟುಹಬ್ಬ (Puneeth Birthday) ಆಚರಣೆ ಮಾಡಲಾಗುತ್ತಿತ್ತು. ಹೆಡಿಯಾಲ ಗ್ರಾಮದ ಬಸ್ ನಿಲ್ದಾಣದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು. ಹೆಡಿಯಾಲ ಮತ್ತು ಸುತ್ತಮುತ್ತಲ ಗ್ರಾಮದ ಅಪ್ಪು ಅಭಿಮಾನಿ ಬಳಗ ಸಾಕಷ್ಟು ಸಂಖ್ಯೆಯಲ್ಲಿ ನೆರೆದಿತ್ತು. ಸಂಭ್ರಮಾಚರಣೆಯಲ್ಲಿ ಹರ್ಷ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಆಕಾಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಬಿ-ಟೌನ್ ನಲ್ಲಿ ಬಣ್ಣದೋಕುಳಿಯ ವೈಭವ.. ಹೀಗಿತ್ತು ಬಾಲಿವುಡ್ ಸೆಲೆಬ್ರಿಟಿಗಳ ಹೋಳಿ ಸೆಲೆಬ್ರೇಶನ್!

ಪುನೀತ್ ಅಭಿಮಾನಿ ಮೃತ  ಆಕಾಶ್  ಶವ ಸಂಸ್ಕಾರವನ್ನು ಹೆಡಿಯಾಲ ಗ್ರಾಮದ ಜಮೀನಿನಲ್ಲಿ ನೆರವೇರಿಸಲಾಗಿದೆ. ಮೃತ ಯುವಕ ಆಕಾಶ್ ಮತ್ತು ಅಪ್ಪು ಅಭಿಮಾನಿ  ಬಳಗದ ಸ್ನೇಹಿತರ  ಆಕ್ರಂದನ ಮುಗಿಲು ಮುಟ್ಟುವಂತಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News