ಮೈಸೂರು:  ವೈವಿಧ್ಯಮಯ ಪ್ರಾಣಿ ಸಂಕುಲದಿಂದ ದೇಶದ ಗಮನ ಸೆಳೆದಿರುವ ಮೃಗಾಲಯಗಳಲ್ಲಿ ಮೈಸೂರು ಮೃಗಾಲಯವು (Mysore Zoo) ಕೂಡ ಒಂದು. ಇದೀಗ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯಕ್ಕೆ  ವಿದೇಶಿ ಮೂಲದ ಹೊಸ ಅತಿಥಿಯೊಂದು ಆಗಮನವಾಗಿದೆ. 


COMMERCIAL BREAK
SCROLL TO CONTINUE READING

ಮೊದಲೆಲ್ಲ ಪ್ರಾಣಿ ವಿನಿಮಯ ಯೋಜನೆ ಮೂಲಕ ದೇಶದ ವಿವಿಧ ಭಾಗಗಳಿಂದ ಪ್ರಾಣಿಗಳನ್ನು ಮೈಸೂರು (Mysore) ಮೃಗಾಲಯಕ್ಕೆ ತರಲಾಗಿದ್ದು, ಹಲವು ಪ್ರಾಣಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. 


ಮತ್ತೆ ಮೈಸೂರಿಗೆ ಸ್ವಚ್ಛತಾ ನಗರಿ ಎಂಬ ಗರಿ ಮೂಡುವುದೇ? ನಾಳೆ ಗೊತ್ತಾಗಲಿದೆ


ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆ ಮೂಲಕ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯಕ್ಕೆ ವಿದೇಶಿ ಅತಿಥಿಯ ಆಗಮನವಾಗಿದೆ. ದೂರದ ದಕ್ಷಿಣ ಆಫ್ರಿಕಾದಿಂದ ಬಂದಿರುವ ಅತಿಥಿ ಆಫ್ರಿಕನ್ ಚಿರತೆಯಾಗಿದ್ದು, ಇದನ್ನು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಸಿಂಗಾಪುರ ಮಾರ್ಗವಾಗಿ ಮೈಸೂರು ಮೃಗಾಲಯಕ್ಕೆ ತರಲಾಗಿದೆ ಎಂದು ಮೈಸೂರು ಮೃಗಾಲಯದ ನಿರ್ದೇಶಕ ಅಜಿತ್ ಕುಲಕರ್ಣಿ ಹೇಳಿದರು.


ಹುಲಿ ಚರ್ಮ ಸಾಗಿಸುತ್ತಿದ್ದವರ ಬಂಧನ


ಮೈಸೂರು ಮೃಗಾಲಯದ ನಿರ್ದೇಶಕ ಅಜಿತ್ ಕುಲಕರ್ಣಿ ನೇತೃತ್ವದ ತಂಡ ಆಫ್ರಿಕಾದಿಂದ ಚಿರತೆಯನ್ನು ತರುವಲ್ಲಿ ಯಶಸ್ವಿಯಾಗಿದೆ. ಚಿರತೆ ಈಗಾಗಲೇ ಮೈಸೂರು ಮೃಗಾಲಯ ತಲುಪಿದ್ದು ಕ್ವಾರಂಟೈನ್ ಅವಧಿ ಪೂರ್ಣಗೊಂಡ ನಂತರ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಅಜಿತ್ ತಿಳಿಸಿದರು. 


ಮೃಗಾಲಯಕ್ಕೆ ಬಂದಿರುವ ಹೊಸ ಅತಿಥಿಯನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲು ಮೃಗಾಲಯದಲ್ಲಿ ಎಲ್ಲಾ ರೀತಿಯ ‌ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಮೃಗಾಲಯದ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.