Amrit Bharat Station Scheme: ನೈರುತ್ಯ ರೈಲ್ವೆ ನಿಲ್ದಾಣಗಳಿಗೆ ಸಿಗಲಿದೆ ಸ್ಮಾರ್ಟ್ಟಚ್..!
Amrit Bharat Station Scheme: ನೈರುತ್ಯ ರೈಲ್ವೆ ಇಲಾಖೆ ಒಟ್ಟು 15 ರೈಲ್ವೆ ನಿಲ್ದಾಣಗಳಿಗೆ 372,13 ಕೋಟಿ ರೂ. ಮೀಸಲಿಡಲಾಗಿದೆ. ಬೆಂಗಳೂರು ವಿಭಾಗದ 15 ನಿಲ್ದಾಣಗಳನ್ನು ನೈರುತ್ಯ ಇಲಾಖೆ ಆಯ್ಕೆ ಮಾಡಿಕೊಂಡಿದೆ. ರೈಲ್ವೆ ನಿಲ್ದಾಣಗಳಲ್ಲಿ ಎಸ್ಕಲೆಟರ್, ಸ್ಮಾರ್ಟ್ ಪಾರ್ಕಿಂಗ್, ಶೌಚಾಲಯ ಸೇರಿದಂತೆ ವಿವಿಧ ರೀತಿಯಲ್ಲಿ ಪುನರ್ ಅಭಿವೃದ್ಧಿ ಮಾಡಲಾಗುತ್ತದೆ.
ಬೆಂಗಳೂರು: ನೈರುತ್ಯ ರೈಲ್ವೆ ನಿಲ್ದಾಣಗಳಿಗೆ ಸ್ಮಾರ್ಟ್ ಟಚ್ ಸಿಗಲಿದೆ. ಕೇಂದ್ರ ಸರ್ಕಾರದ ʼಅಮೃತ್ ಭಾರತ್ ಸ್ಟೇಷನ್ ಸ್ಕೀಂʼ ಅಡಿಯಲ್ಲಿ ರೈಲ್ವೆ ಇಲಾಖೆಯು ಅಭಿವೃದ್ಧಿಪಡಿಸಲಿದೆ. ನೈರುತ್ಯ ರೈಲ್ವೆ ಇಲಾಖೆ ಒಟ್ಟು 15 ರೈಲ್ವೆ ನಿಲ್ದಾಣಗಳಿಗೆ 372,13 ಕೋಟಿ ರೂ. ಮೀಸಲಿಡಲಾಗಿದೆ. ಬೆಂಗಳೂರು ವಿಭಾಗದ 15 ನಿಲ್ದಾಣಗಳನ್ನು ನೈರುತ್ಯ ಇಲಾಖೆ ಆಯ್ಕೆ ಮಾಡಿಕೊಂಡಿದೆ.
ಇದೇ ತಿಂಗಳ 26ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲ್ವೆ ಮರು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ರೈಲ್ವೆ ನಿಲ್ದಾಣಗಳಲ್ಲಿ ಎಸ್ಕಲೆಟರ್, ಸ್ಮಾರ್ಟ್ ಪಾರ್ಕಿಂಗ್, ಶೌಚಾಲಯ ಸೇರಿದಂತೆ ವಿವಿಧ ರೀತಿಯಲ್ಲಿ ಪುನರ್ ಅಭಿವೃದ್ಧಿ ಮಾಡಲಾಗುತ್ತದೆ. ಈ ಬಗ್ಗೆ ನೈರುತ್ಯ ರೈಲ್ವೆ ಡಿಆರ್ ಎಂ.ಯೋಗೇಶ್ ಮೋಹನ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೇರಳದ ವೈನಾಡಿನ ಆನೆ ದಾಳಿ ಪ್ರಕರಣ, ಕುಟುಂಬಸ್ತರ ಭೇಟಿ ಮಾಡಿದ ಸಚಿವರು
ಯಾವೆಲ್ಲಾ ರೈಲ್ವೆ ನಿಲ್ದಾಣಕ್ಕೆ ಸ್ಮಾರ್ಟ್ಟಚ್ ಸಿಗಲಿದೆ
ನಿಲ್ದಾಣ | ಅಂದಾಜು ವೆಚ್ಚ |
ಬಂಗಾರಪೇಟೆ ರೈಲ್ವೆ ನಿಲ್ದಾಣ | ₹21.5 ಕೋಟಿ |
ಚನ್ನಪಟ್ಟಣ ರೈಲ್ವೆ ನಿಲ್ದಾಣ | ₹20.9 ಕೋಟಿ |
ಧರ್ಮಪುರಿ ರೈಲ್ವೆ ನಿಲ್ದಾಣ | ₹25.4 ಕೋಟಿ |
ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣ | ₹21.3 ಕೋಟಿ |
ಹಿಂದೂಪುರ ರೈಲ್ವೆ ನಿಲ್ದಾಣ | ₹23.9 ಕೋಟಿ |
ಹೊಸೂರು ರೈಲ್ವೆ ನಿಲ್ದಾಣ | ₹22.3 ಕೋಟಿ |
ಕೆಂಗೇರಿ ರೈಲ್ವೆ ನಿಲ್ದಾಣ | ₹21 ಕೋಟಿ |
ಕೃಷ್ಣರಾಜಪುರ ರೈಲ್ವೆ ನಿಲ್ದಾಣ | ₹21.1 ಕೋಟಿ |
ಕುಪ್ಪಂ ರೈಲ್ವೆ ನಿಲ್ದಾಣ | ₹17.6 ಕೋಟಿ |
ಮಲ್ಲೇಶ್ವರ ರೈಲ್ವೆ ನಿಲ್ದಾಣ | ₹20 ಕೋಟಿ |
ಮಾಲೂರು ರೈಲ್ವೆ ನಿಲ್ದಾಣ | ₹20.4 ಕೋಟಿ |
ಮಂಡ್ಯ ರೈಲ್ವೆ ನಿಲ್ದಾಣ | ₹20.1 ಕೋಟಿ |
ರಾಮನಗರ ರೈಲ್ವೆ ನಿಲ್ದಾಣ | ₹21 ಕೋಟಿ |
ತುಮಕೂರು ರೈಲ್ವೆ ನಿಲ್ದಾಣ | ₹24.1 ಕೋಟಿ |
ವೈಟ್ ಫೀಲ್ಡ್ ರೈಲ್ವೆ ನಿಲ್ದಾಣ | ₹23.3 ಕೋಟಿ |
ಇದನ್ನೂ ಓದಿ: ಲೋಕಸಭೆ ಹೊತ್ತಿನಲ್ಲಿ ತುಮಕೂರಿನಲ್ಲಿ ಬಿಜೆಪಿಗೆ ಬಿಗ್ ಶಾಕ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.