ಪಠ್ಯದಲ್ಲಿ ಭಗವದ್ಗೀತೆ ವಿಚಾರ: ಸಿದ್ದರಾಮಯ್ಯಗೆ ಧನ್ಯವಾದ ತಿಳಿಸಿದ ಬಿಜೆಪಿ
ನೀನು ಅತ್ತಂತೆ ಮಾಡು ನಾನು ಹೊಡೆದಂತೆ ಮಾಡುತ್ತೇನೆ ಎಂದು ಕಾಂಗ್ರೆಸ್ ನಾಯಕರು ರಾಜ್ಯದ ಜನತೆಯ ದಿಕ್ಕು ತಪ್ಪಿಸಲು ಹೊರಟಿದ್ದಾರೆ ಅಂತಾ ಬಿಜೆಪಿ ಟೀಕಿಸಿದೆ.
ಬೆಂಗಳೂರು: ಶಾಲೆಯಲ್ಲಿ ಭಗವದ್ಗೀತೆ(Bhagavad Gita)ಕಲಿಸುವುದನ್ನು ಸ್ವಾಗತಿಸುತ್ತೇನೆ, ಮಕ್ಕಳಿಗೆ ನೈತಿಕ ವಿಚಾರ ಕಲಿಸುವುದಕ್ಕೆ ನಮ್ಮ ವಿರೋಧವಿಲ್ಲವೆಂದು ಹೇಳಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah)ಗೆ ಬಿಜೆಪಿ ಧನ್ಯವಾದ ತಿಳಿಸಿದೆ. ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಹಿಂದೂ ವಿರೋಧಿ ಮನಸ್ಥಿತಿ ರಾಜ್ಯದಲ್ಲಿ ನಡೆಯುವುದಿಲ್ಲ ಎಂಬುದನ್ನು ಅರಿತುಕೊಂಡ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳು’ ಅಂತಾ ಹೇಳಿದೆ.
DK Shivakumar) ಅವರೇ ನಿಮ್ಮ ಶಾಸಕಾಂಗ ನಾಯಕರ ಹೇಳಿಕೆಗೆ ನೋಟೀಸ್ ಕಳುಹಿಸುವ ಯೋಚನೆ ಇದೆಯೇ’ ಅಂತಾ ಟ್ವೀಟ್ ಮೂಲಕ ಬಿಜೆಪಿ ಇದೇ ವೇಳೆ ವ್ಯಂಗ್ಯವಾಡಿದೆ. ‘ನೀನು ಅತ್ತಂತೆ ಮಾಡು ನಾನು ಹೊಡೆದಂತೆ ಮಾಡುತ್ತೇನೆ ಎಂದು ಕಾಂಗ್ರೆಸ್ ನಾಯಕರು ರಾಜ್ಯದ ಜನತೆಯ ದಿಕ್ಕು ತಪ್ಪಿಸಲು ಹೊರಟಿದ್ದಾರೆ’ ಅಂತಾ ಬಿಜೆಪಿ ಟೀಕಿಸಿದೆ. ‘ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನೈತಿಕ ಶಿಕ್ಷಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇಂದು ಸಿದ್ದರಾಮಯ್ಯ(Siddaramaiah) ಸ್ವಾಗತಿಸುತ್ತಿದ್ದಾರೆ. ಜನರಲ್ಲಿ ಗೊಂದಲ ಮೂಡಿಸುವುದೇ ಕಾಂಗ್ರೆಸ್ ಧೋರಣೆಯೇ?’ ಅಂತಾ ಬಿಜೆಪಿ ಪ್ರಶ್ನಿಸಿದೆ.
ಪಠ್ಯದಲ್ಲಿ ಗೀತೆ ಸೇರ್ಪಡೆ: ಕುರಾನ್ -ಬೈಬಲ್ ನಲ್ಲೂ ಒಳ್ಳೆ ಸಂಗತಿಗಳಿದ್ದರೆ ಸೇರಿಸಲಾಗುವುದು: ಸಚಿವ ಬಿ.ಸಿ.ನಾಗೇಶ್
ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು
ಪಠ್ಯದಲ್ಲಿ ಭಗವದ್ಗೀತೆ(Bhagavad Gita) ಸೇರಿಸುವ ವಿಚಾರವಾಗಿ ಶನಿವಾರ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯನವರು, ‘ನೈತಿಕ ವಿಷಯವನ್ನು ಶಾಲಾ ಮಕ್ಕಳಿಗೆ ಕಲಿಸಲು ನಮ್ಮಿಂದ ಯಾವುದೇ ತಕರಾರಿಲ್ಲ. ನಾವು ಸಂವಿಧಾನ ಮತ್ತು ಜಾತ್ಯಾತೀತತೆಯಲ್ಲಿ ನಂಬಿಕೆ ಇಟ್ಟವರು. ಮಕ್ಕಳಿಗೆ ಭಗವದ್ಗೀತೆ, ಖುರಾನ್, ಬೈಬಲ್ ಯಾವುದನ್ನಾದರೂ ಹೇಳಿಕೊಡಲಿ, ಆದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕಾದುದ್ದು ಮುಖ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ಉತ್ತಮ ಶಿಕ್ಷಣ ಸಿಗಬೇಕು. ಭಗವದ್ಗೀತೆ(Bhagavad Gita in Textbook) ಹೇಳಿಕೊಟ್ಟರೆ ತಪ್ಪೇನಿಲ್ಲ, ನಮಗೂ ಮನೆಯಲ್ಲಿ ರಾಮಾಯಣ, ಮಹಾಭಾರತ, ಭಗವದ್ಗೀತೆ ಹೇಳಿಕೊಟ್ಟಿದ್ದಾರೆ. ನಾವೇನು ಹಿಂದೂಗಳಲ್ಲವೆ? ಎಂದು ಹೇಳಿದ್ದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai)ಕೂಡ ಪಠ್ಯದಲ್ಲಿ ಭಗವದ್ಗೀತೆ ಸೇರಿಸುವ ವಿಚಾರವನ್ನು ಸಮರ್ಥಿಸಿಕೊಂಡಿದ್ದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ನೈತಿಕ ಮೌಲ್ಯಗಳನ್ನು ಕಲಿಸುವ ವಿಚಾರದಲ್ಲಿ ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಗುಜರಾತ್ ಶಿಕ್ಷಣ ಇಲಾಖೆಯೊಂದಿಗೆ ನಮ್ಮ ಶಿಕ್ಷಣ ಸಚಿವರು ಚರ್ಚಿಸಿ ಮಾಹಿತಿ ನೀಡುತ್ತೇನೆಂದು ಹೇಳಿದ್ದಾರೆ. ಅವರಿಂದ ಬರುವ ಮಾಹಿತಿ ಆಧಾರಿಸಿ ನಾವು ಪಠ್ಯದಲ್ಲಿ ಭಗವದ್ಗೀತೆ ಸೇರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆಂದು ಹೇಳಿದ್ದರು.
ಇದನ್ನೂ ಓದಿ: ಪಠ್ಯದಲ್ಲಿ ಭಗವದ್ಗೀತೆ ವಿಚಾರ: ಕಾಂಗ್ರೆಸ್ ಟೀಕೆಗೆ ಬಿಜೆಪಿ ತಿರುಗೇಟು
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.