ಪಠ್ಯದಲ್ಲಿ ಭಗವದ್ಗೀತೆ ವಿಚಾರ: ಕಾಂಗ್ರೆಸ್ ಟೀಕೆಗೆ ಬಿಜೆಪಿ ತಿರುಗೇಟು

ಗುಜರಾತ್ ಮಾದರಿಯಲ್ಲಿ ರಾಜ್ಯದ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರ್ಪಡೆಗೊಳಿಸುವ ಸಂಬಂಧ ಚರ್ಚೆ ಆರಂಭವಾಗಿದೆ.

Written by - Zee Kannada News Desk | Last Updated : Mar 19, 2022, 01:49 PM IST
  • ಬಹುಸಂಖ್ಯಾತ ಹಿಂದೂಗಳ ಪರವಾಗಿರುವ ಪ್ರತೀ ನಿರ್ಧಾರಕ್ಕೂ ಕಾಂಗ್ರೆಸ್ ವಿರೋಧಿಸುತ್ತದೆ
  • ಹಿಂದೂ ವಿರೋಧಿ ಕಾಂಗ್ರೆಸ್ ತನಗೆ ಒಂದು ಸಮುದಾಯದ ಮತಗಳು ಮಾತ್ರ ಬೇಕು ಎಂದು ಘೋಷಿಸಬೇಕಲ್ಲವೇ?
  • ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ತಿರುಗೇಟು
ಪಠ್ಯದಲ್ಲಿ ಭಗವದ್ಗೀತೆ ವಿಚಾರ: ಕಾಂಗ್ರೆಸ್ ಟೀಕೆಗೆ ಬಿಜೆಪಿ ತಿರುಗೇಟು   title=
ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಗರಂ

ಬೆಂಗಳೂರು: ಎಲ್ಲವನ್ನು ತಿಳಿದವರೇ ಸೇರಿ ಶಾಲಾ ಪಠ್ಯಕ್ರಮ ರಚಿಸಿದ್ದು, ಹೊಸದಾಗಿ ಭಗವದ್ಗೀತೆ(Bhagavad Gita) ಸೇರಿಸುವ ಅವಶ್ಯಕತೆ ಇಲ್ಲವೆಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.

ಶಾಲಾ ಪಠ್ಯದಲ್ಲಿ ಭಗವದ್ಗೀತೆ(Bhagavad Gita) ಸೇರಿಸುವ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್(BC Nagesh) ತಿಳಿಸಿದ್ದರು. ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. #ಹಿಂದೂವಿರೋಧಿಕಾಂಗ್ರೆಸ್ ಹ್ಯಾಶ್ ಟ್ಯಾಗ್ ಬಳಸಿ ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

‘ದೇವಾಲಯಗಳನ್ನು ಸರ್ಕಾರಿ ಆಡಳಿತದಿಂದ ಮುಕ್ತ ಮಾಡುವ ನಿರ್ಧಾರಕ್ಕೆ ಕೋಮುವಾದಿ ಕಾಂಗ್ರೆಸ್(Congress) ವಿರೋಧಿಸುತ್ತದೆ. ಗೋಹತ್ಯೆ ನಿಷೇಧ ಕಾನೂನು, ಮತಾಂತರ ನಿಯಂತ್ರಣ ಕಾಯ್ದೆ ವಿರೋಧಿಸುವ ಕಾಂಗ್ರೆಸ್ ಇದೀಗ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವ ನಿರ್ಧಾರವನ್ನೂ ವಿರೋಧಿಸುತ್ತಿದೆ’ ಅಂತಾ ಕಿಡಿಕಾರಿದೆ.

ಇದನ್ನೂ ಓದಿ: Basavaraja Bommai : 'ಉಕ್ರೇನ್ ನಿಂದ ಸೋಮವಾರ ನವೀನ್ ಪಾರ್ಥಿವ ಶರೀರ ಬೆಂಗಳೂರಿಗೆ'

‘ಬಹುಸಂಖ್ಯಾತ ಹಿಂದೂಗಳ ಪರವಾಗಿರುವ ಪ್ರತೀ ನಿರ್ಧಾರಗಳಿಗೂ ಕಾಂಗ್ರೆಸ್ ವಿರೋಧಿಸುತ್ತಿದೆ. ಹಿಂದೂ ವಿರೋಧಿ ಕಾಂಗ್ರೆಸ್ ತನಗೆ ಒಂದು ಸಮುದಾಯದ ಮತಗಳು ಮಾತ್ರ ಬೇಕು ಎಂದು ಘೋಷಿಸಬೇಕಲ್ಲವೇ?’ ಅಂತಾ ಪ್ರಶ್ನಿಸಿದೆ.

‘ಡಿ.ಕೆ.ಶಿವಕುಮಾರ್(DK Shivakumar) ಅವರೇ ಎಲ್ಲಾ ತಿಳಿದವರು ಎಂದರೆ ಯಾರು ಸ್ವಾಮಿ? ಒಂದು ವರ್ಗವನ್ನು ಓಲೈಸಲು ಅಕ್ಬರ್ ದಿ ಗ್ರೇಟ್ ಎಂದವರು ಎಲ್ಲಾ ತಿಳಿದವರೇ? ಹಿಂದೂ ಅಸ್ಮಿತೆಯ ಕುರುಹುಗಳನ್ನು ಪಠ್ಯಪುಸ್ತಕಗಳಲ್ಲಿ ನಾಶ ಪಡಿಸಿದವರು ಎಲ್ಲಾ ತಿಳಿದವರೇ? ಇವರೆಲ್ಲಾ ತಿಳಿದವರಲ್ಲ, ಕಾಂಗ್ರೆಸ್ ನೀರು‌ ಕುಡಿದವರು!!!’ ಅಂತಾ ಕುಟುಕಿದೆ.

ಇದನ್ನೂ ಓದಿ: DK Shivakumar : 'ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬೇಕಿರುವುದು ರಾಜಕೀಯ ಇಚ್ಛಾಶಕ್ತಿ'

ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸಲು ನಿರ್ಧಾರ

ರಾಜ್ಯದ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸುವ ಸಂಬಂಧ ಹಲವೆಡೆಯಿಂದ ಬೇಡಿಕೆ ಬಂದಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಗುಜರಾತ್ ಮಾದರಿಯಲ್ಲಿ ರಾಜ್ಯದ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರ್ಪಡೆಗೊಳಿಸುವ ಸಂಬಂಧ ಚರ್ಚೆ ಆರಂಭವಾಗಿದೆ. ಈ ಕುರಿತು ಮುಖ್ಯಮಂತ್ರಿ(Basavaraj Bommai)ಗಳೊಂದಿಗೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದರು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News