Bhagavad Gita: ನಾವು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟಿದ್ದೇವೆಂದ ಸಿದ್ದರಾಮಯ್ಯ

ನಮ್ಮದು ಮೃದು ಹಿಂದೂತ್ವವಾಗಲೀ, ಕಠೋರ ಹಿಂದುತ್ವವಾಗಲೀ ಅಲ್ಲ. ನಾವು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟಿದ್ದೇವೆ. ಸಂವಿಧಾನ ಹೇಳಿದಂತೆ ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Written by - Prashobh Devanahalli | Edited by - Puttaraj K Alur | Last Updated : Mar 19, 2022, 03:45 PM IST
  • ನಮ್ಮದು ಮೃದು ಹಿಂದೂತ್ವವಾಗಲೀ, ಕಠೋರ ಹಿಂದುತ್ವವಾಗಲೀ ಅಲ್ಲ
  • ಸಂವಿಧಾನ ಹೇಳಿದಂತೆ ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತೇವೆ
  • ನಾವು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟಿದ್ದೇವೆ ಎಂದ ಸಿದ್ದರಾಮಯ್ಯ
Bhagavad Gita: ನಾವು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟಿದ್ದೇವೆಂದ ಸಿದ್ದರಾಮಯ್ಯ title=
'ಭಗವದ್ಗೀತೆ ಹೇಳಿಕೊಟ್ಟರೆ ತಪ್ಪೇನಿಲ್ಲ'

ಬೆಂಗಳೂರು: ನಾವು ಹಿಂದೂ ಧರ್ಮ(Hinduism)ದಲ್ಲಿ ನಂಬಿಕೆ ಇಟ್ಟಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ. ಪಠ್ಯದಲ್ಲಿ ಭಗವದ್ಗೀತೆ ಸೇರಿಸುವ ವಿಚಾರ ಸಂಬಂಧ ಅವರು ಮಾಧ್ಯಮ ಪ್ರತನಿಧಿಗಳಿಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.   

ಶನಿವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನೈತಿಕ ವಿಷಯವನ್ನು ಶಾಲಾ ಮಕ್ಕಳಿಗೆ ಕಲಿಸಲು ನಮ್ಮಿಂದ ಯಾವುದೇ ತಕರಾರಿಲ್ಲ. ನಾವು ಸಂವಿಧಾನ ಮತ್ತು ಜಾತ್ಯಾತೀತತೆಯಲ್ಲಿ ನಂಬಿಕೆ ಇಟ್ಟವರು. ಮಕ್ಕಳಿಗೆ ಭಗವದ್ಗೀತೆ, ಖುರಾನ್, ಬೈಬಲ್ ಯಾವುದನ್ನಾದರೂ ಹೇಳಿಕೊಡಲಿ, ಆದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕಾದುದ್ದು ಮುಖ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ಉತ್ತಮ ಶಿಕ್ಷಣ ಸಿಗಬೇಕು. ಭಗವದ್ಗೀತೆ(Bhagavad Gita in Textbook) ಹೇಳಿಕೊಟ್ಟರೆ ತಪ್ಪೇನಿಲ್ಲ, ನಮಗೂ ಮನೆಯಲ್ಲಿ ರಾಮಾಯಣ, ಮಹಾಭಾರತ, ಭಗವದ್ಗೀತೆ ಹೇಳಿಕೊಟ್ಟಿದ್ದಾರೆ. ನಾವೇನು ಹಿಂದೂಗಳಲ್ಲವೆ? ಅಂತಾ ಹೇಳಿದ್ದಾರೆ.

ಇದನ್ನೂ ಓದಿ: DK Shivakumar : 'ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬೇಕಿರುವುದು ರಾಜಕೀಯ ಇಚ್ಛಾಶಕ್ತಿ'

ಹಳ್ಳಿಗಳಲ್ಲಿ, ನಾಟಕಗಳಲ್ಲಿ ಭಗವದ್ಗೀತೆ(Bhagavad Gita)ಗಳ ವಿಚಾರಗಳನ್ನು ಹಾಡೋದು ನೋಡಿದ್ದೇವೆ. ನಾವು ಭಗವದ್ಗೀತೆ, ಖುರಾನ್, ಬೈಬಲ್ ಇವು ಯಾವುದಕ್ಕೂ ವಿರೋಧ ಮಾಡಲ್ಲ. ನಮ್ಮದು ಬಹು ಸಂಸ್ಕೃತಿಯ ದೇಶ, ಶಿಕ್ಷಣದಲ್ಲಿ ಕಲಿಸುವ ವಿಷಯ ಸಂವಿಧಾನ ಬದ್ಧವಾಗಿರಬೇಕು ಅಷ್ಟೇ. ಸಹಿಷ್ಣುತೆ ಮತ್ತು ಸಹಬಾಳ್ವೆಯಲ್ಲಿ ನಮಗೆ ನಂಬಿಕೆ ಇದೆ ಎಂದು ಸಿದ್ದರಾಮಯ್ಯ ಹೇಳಿದರು.

‘ದಿ ಕಾಶ್ಮೀರಿ ಫೈಲ್’(The Kashmir Files) ಸಿನೆಮಾ ಮೂಲಕ ಸತ್ಯ ತೋರಿಸಿದರೆ ಯಾರಿಗೂ ತೊಂದರೆ ಇಲ್ಲ. ಕಾಶ್ಮೀರದಲ್ಲಿ ಭಯೋತ್ಪಾದಕರು ಏನೆಲ್ಲಾ ಮಾಡಿದರು?, ಕಾಶ್ಮೀರಿ ಪಂಡಿತರಿಗೆ ಏನು ತೊಂದರೆ ಮಾಡಿದರು?, ಆ ಕಾಲದಲ್ಲಿ ಯಾರ ಸರ್ಕಾರ ಇತ್ತು? ಇವನ್ನೆಲ್ಲಾ ತೋರಿಸಬೇಕು. ಸತ್ಯ ಹೇಳಿದ್ರೆ ಯಾರಿಗೂ ಸಮಸ್ಯೆ ಇಲ್ಲ. ಇದರ ಜೊತೆಗೆ ಉತ್ತರಪ್ರದೇಶದ ಲಿಖಿಂಪುರ್ ಖೇರಿ ಹಿಂಸಾಚಾರದ ಬಗ್ಗೆಯೂ ಸಿನೆಮಾ ಮಾಡಿ ಜನರಿಗೆ ತೋರಿಸಲಿ ಅಂತಾ ಹೇಳಿದರು.

ನಾನು ಚಿತ್ರಮಂದಿರಕ್ಕೆ ಹೋಗಿ ಸಿನೆಮಾ ನೋಡಿದ್ದು ತುಂಬಾ ಕಡಿಮೆ. ಬಹುತೇಕ ಸಿನೆಮಾಗಳನ್ನು ನಾನು ನೋಡಿಲ್ಲ, ಅದರಲ್ಲಿ ‘ದಿ ಕಾಶ್ಮೀರಿ ಫೈಲ್ಸ್’ ಕೂಡ ಒಂದು. ಸಿನೆಮಾ ನೋಡಲೇಬೇಕು ಅಂತ ಎಲ್ಲಿದೆ? ಎಂದು ಇದೇ ವೇಳೆ ಸಿದ್ದರಾಮಯ್ಯ ಪ್ರಶ್ನಿಸಿದರು.

ಇದನ್ನೂ ಓದಿ: 'ಮೇಕೆದಾಟು ಯೋಜನೆಗೆ ತ್ವರಿತ ಅನುಮೋದನೆ ಪಡೆಯಲು ಕ್ರಮ'

ನಮ್ಮದು ಮೃದು ಹಿಂದೂತ್ವವಾಗಲೀ, ಕಠೋರ ಹಿಂದುತ್ವವಾಗಲೀ ಅಲ್ಲ. ನಾವು ಹಿಂದೂ ಧರ್ಮ(Hinduism)ದಲ್ಲಿ ನಂಬಿಕೆ ಇಟ್ಟಿದ್ದೇವೆ. ಸಂವಿಧಾನ ಹೇಳಿದಂತೆ ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತೇವೆ. ಅದು ಕ್ರಿಶ್ಚಿಯನ್, ಮುಸ್ಲಿಂ, ಸಿಖ್‌, ಪಾರಸಿ ಅಥವಾ ಬೌದ್ಧ ಧರ್ಮವೇ ಆಗಿರಲಿ ಎಲ್ಲರನ್ನು ಸಮಾನವಾಗಿ ಕಾಣುತ್ತೇವೆ ಎಂದು ಹೇಳಿದ ಅವರು, ಹಿಜಾಬ್ ತೀರ್ಪಿನ ಬಗ್ಗೆ ಅಸಮಾಧಾನ ಇರುವವರು ಕೆಲವು ಕಡೆ ಬಂದ್ ಗೆ ಕರೆ ಕೊಟ್ಟಿದ್ದರು. ಆದರೆ ನ್ಯಾಯಾಂಗದ ನಿರ್ಣಯವನ್ನು ಯಾರೂ ಕೂಡ ವಿರೋಧ ಮಾಡಬಾರದು ಅಂತಾ ಹೇಳಿದರು.

ಹಿಂದೂ ಧಾರ್ಮಿಕ ಕಾರ್ಯಕ್ರಮಗಳ ಸ್ಥಳದಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಅಭಿಯಾನದ ಕುರಿತು ಪ್ರತಿಕ್ರಿಸಿದ ಅವರು, ಯಾವುದೇ ಧರ್ಮವಾಗಿರಲಿ ಅವರು ಕೋಮುವಾದ ಮಾಡಕೂಡದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News