ಬೆಂಗಳೂರು: ರಾಜ್ಯದಲ್ಲಿ ಮಂತ್ರಿಯಾಗಿದ್ದಾಗ ಪರ್ಸಂಟೇಜ್ ರಾಜಕಾರಣವನ್ನು ಅಧಿಕೃತಗೊಳಿಸಿದ್ದೇ #ಮಹಾನಾಯಕ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. #40PercentCONgressToolkit ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಆತಕ್ಯಾಬಿನೆಟ್ ಸೇರುವುದು ಬೇಡ, ದುಡ್ಡು ಹೊಡೆಯುತ್ತಾನೆ ಎಂದು ಸಿದ್ದರಾಮಯ್ಯ ಅವರೇ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು. ಡಿಕೆಶಿ ಇಂಧನ ಸಚಿವರಾಗಿದ್ದಾಗ ಭ್ರಷ್ಟಾಚಾರದ #ಲಕ್ಷ್ಮಿಕಟಾಕ್ಷ ಎಷ್ಟಿತ್ತು? ಎಂದು ಪ್ರಶ್ನಿಸಿದೆ.


COMMERCIAL BREAK
SCROLL TO CONTINUE READING

ಕಾಂಗ್ರೆಸ್ ಭ್ರಷ್ಟಾಚಾರದ ಜನಕ ಎನ್ನುವುದರಲ್ಲಿ ಅತಿಶಯವಿಲ್ಲ. ತನ್ನ ಪಕ್ಷವನ್ನೇ ಲೂಟಿ ಮಾಡಿದ ಉದಾಹರಣೆ ಕಾಣಸಿಗುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ, ನ್ಯಾಶನಲ್ ಹೆರಾಲ್ಡ್ ಪ್ರಕರಣ. ಇಂತಹ ಘನ ಇತಿಹಾಸ ಹೊಂದಿರುವ ಪಕ್ಷ ಮತ್ತು ಅದರ ನಾಯಕರು ಕರ್ನಾಟಕದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಹೊರಟಿರುವುದು ಚೋದ್ಯ!’ವೆಂದು ಬಿಜೆಪಿ ವ್ಯಂಗ್ಯವಾಡಿದೆ.


‘ಸಾವಿನ ಮನೆಯಲ್ಲಿ ರಾಜಕಾರಣ ನಡೆಸುವ ರಣಹದ್ದುಗಳು ಬೀದಿಗೆ ಇಳಿದಿವೆ!’


‘ಇಂಧನ ಮತ್ತು ಜಲಸಂಪನ್ಮೂಲ ಸಚಿವರಾಗಿದ್ದಾಗ #ಬೇನಾಮಿಅಧ್ಯಕ್ಷೆ ಯನ್ನು #ಮಹಾನಾಯಕ ಹೀಗೇ ಕರೆದಿರಬಹುದೇ? ಏಕೆಂದರೆ ರಾಜ್ಯದಲ್ಲಿ ಗುತ್ತಿಗೆದಾರರಿಂದ ಕಮಿಷನ್ ಪರ್ಸಂಟೇಜ್ ಫಿಕ್ಸ್ ಮಾಡಿಸಿದ್ದೇ ಇವರಲ್ಲವೇ? ರಾಜ್ಯದಲ್ಲಿ ಸರ್ಕಾರಿ ಕಾಮಗಾರಿಗಳಿಂದ ದುಡ್ಡು ಹೊಡೆಯುವ ಜಾಲ ಬೆಳೆಸಿದ್ದು ಹಾಗೂ ಪರ್ಸಂಟೇಜ್ ವ್ಯವಹಾರ ಶುರು ಮಾಡಿದ್ದೇ #ಭ್ರಷ್ಟಾಧ್ಯಕ್ಷ ಎಂಬ ರಹಸ್ಯ ಕೆಪಿಸಿಸಿ ಕಚೇರಿಯಿಂದಲೇ ಹೊರ ಬಂದಿತ್ತು. ಈ ಭ್ರಷ್ಟಾಧ್ಯಕ್ಷರ ಸತ್ಯವ್ರತನ ಸೋಗನ್ನು ಜನ ನಂಬುತ್ತಾರೆಯೇ? ಮಾಡುವುದೆಲ್ಲ ಅನಾಚಾರ, ಮನೆಮುಂದೆ ಬೃಂದಾವನ!’ ಎಂದು ಕುಟುಕಿದೆ.


"ತನಿಖೆಯ ವರದಿ ಬರುವವರೆಗೆ ಯಾವುದೇ ಕ್ರಮ ಇಲ್ಲ"


ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಕಮಿಷನ್ ದಂಧೆಯ ಬಗ್ಗೆ ಮಾತನಾಡಬೇಕಾದರೆ ಅದರ ಆಳ ಎಷ್ಟಿರಬೇಕು? 4 ಕೋಟಿ ಮೊತ್ತದ ಕಾರ್ಯಾದೇಶವಿಲ್ಲದ ಬೆಳಗಾವಿ ಗ್ರಾಮಾಂತರದ ಕಾಮಗಾರಿಗಳಿಗೆ #ಭಷ್ಟಾಧ್ಯಕ್ಷ ರ ಭ್ರಷ್ಟಾಚಾರದ ಹಣ #ಬೇನಾಮಿಅಧ್ಯಕ್ಷೆ ಯ ಮೂಲಕ ಗುತ್ತಿಗೆದಾರನಿಗೆ ತಲುಪಿತ್ತೇ?’ ಎಂದು ಬಿಜೆಪಿ ಪ್ರಶ್ನಿಸಿದೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.