ಬೆಂಗಳೂರು: ರಾಜ್ಯದಲ್ಲಿ‌ ಭಾರೀ ಸದ್ದು ಮಾಡಿರುವ ಡ್ರಗ್ಸ್ ಮಾಫಿಯಾ (Drugs Mafia)ದೊಂದಿಗೆ ಬಿಜೆಪಿ ನಾಯಕರ ಸಂಪರ್ಕ ಇದೆ ಎನ್ನುವುದನ್ನು ಕಾಂಗ್ರೆಸ್ ಇನ್ನೊಮ್ಮೆ ಬಯಲು ಮಾಡಿದೆ.


COMMERCIAL BREAK
SCROLL TO CONTINUE READING

ಮಾಜಿ ಉಪ ಮುಖ್ಯಮಂತ್ರಿ, ಮಾಜಿ ಗೃಹ ಸಚಿವರೂ ಆದ ಹಾಲಿ ಕಂದಾಯ ಸಚಿವ ಆರ್. ಅಶೋಕ್ (R Ashok) ಕಿಂಗ್ ಪಿನ್ ರಾಹುಲ್ ಜತೆ ಇರುವ ವಿವಿಧ ಫೋಟೋಗಳನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, ಡ್ರಗ್ಸ್ ಮಾಫಿಯಾ (Drugs Mafia)ದೊಂದಿಗೆ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯತ್ನಿಸಿದೆ.


CCB) ಡ್ರಗ್ ಕಿಂಗ್ ಪಿನ್  ರಾಹುಲ್ ನನ್ನು ಬಂಧಿಸಿದ್ದರು. ಈಗ ಇದೇ ರಾಹುಲ್, ಬಿಜೆಪಿ ನಾಯಕ ಅಶೋಕ್ ಜೊತೆ ಇರುವ ಪೋಟೊಗಳನ್ನು ಕಾಂಗ್ರೆಸ್ ಟ್ವೀಟರ್ ನಲ್ಲಿ‌ ಹರಿಬಿಟ್ಟಿದೆ. ಈ ಫೋಟೋಗಳು ರಾಹುಲ್ ವಿವಿಧ ಸಂದರ್ಭದಲ್ಲಿ ಅಶೋಕ್ ಜತೆ ಇದ್ದವಾಗಿವೆ ಮತ್ತು ಅಶೋಕ್ ಹಾಗೂ ರಾಹುಲ್ ನಡುವಿನ ಸಂಬಂಧವನ್ನು ಸಾರವಂತವಾಗಿವೆ.


ಡ್ರಗ್ಸ್ ಮಾಫಿಯಾಕ್ಕೆ ಬೆಂಬಲ ನೀಡಿರುವ ಬಿಜೆಪಿ ನಾಯಕರು ಈಗ ತಮ್ಮ ಮೇಲಿನ ಆರೋಪ ಮತ್ತು ಹಗರಣ ಮುಚ್ಚಿಕೊಳ್ಳಲು ಬೇರೆ ಪಕ್ಷಗಳ ನಾಯಕರ ಮೇಲೆ ಆರೋಪ ಮಾಡುತ್ತಿದ್ದಾರೆ. ಮೊದಲು ಬಿಜೆಪಿ ನಾಯಕರನ್ನ ತನಿಖೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಪಡಿಸಿದೆ.