BMTC AC Bus Condition: ಬಿಳಿ ಆನೆ ಆದ ವೋಲ್ವೋ ಬಸ್: AC ವರ್ಕ್ ಆಗ್ತಿಲ್ಲ, ಜನ ಬಸ್ ಹತ್ತುತ್ತಿಲ್ಲ
BMTC Latest News - ಬೇಸಿಗೆ ಆರಂಭದಲ್ಲೇ ರಾಜ್ಯ ರಾಜಧಾನಿಯಲ್ಲಿ ಬಿಸಿಲು ಜನರ ನೆತ್ತಿ ಸುಡುತ್ತಿದೆ. ಬಿಸಿಲಿನ ಬೇಗೆಯಿಂದ ಪಾರಾಗಲು ಪ್ರಯಾಣಿಕರು ಹೆಚ್ಚಾಗಿ ಎಸಿ ಬಸ್ ಹತ್ತಲು ಬಯಸುತ್ತಾರೆ. ಆದ್ರೆ ಎಸಿ ಬಸ್ ಹತ್ತಬೇಕು ಅಂದ್ರೆ ಈಗ ಪ್ರಯಾಣಿಕರು ಹಿಂದೆ ಮುಂದೆ ನೋಡುವಂತಾಗಿದೆ.
ಬೆಂಗಳೂರು: BMTC Latest News - ಬೇಸಿಗೆ ಆರಂಭದಲ್ಲೇ ರಾಜ್ಯ ರಾಜಧಾನಿಯಲ್ಲಿ (Bangaluru) ಬಿಸಿಲು ಜನರ ನೆತ್ತಿ ಸುಡುತ್ತಿದೆ. ಬಿಸಿಲಿನ ಬೇಗೆಯಿಂದ ಪಾರಾಗಲು ಪ್ರಯಾಣಿಕರು ಹೆಚ್ಚಾಗಿ ಎಸಿ ಬಸ್ ಹತ್ತಲು ಬಯಸುತ್ತಾರೆ. ಆದ್ರೆ ಎಸಿ ಬಸ್ ಹತ್ತಬೇಕು ಅಂದ್ರೆ ಈಗ ಪ್ರಯಾಣಿಕರು ಹಿಂದೆ ಮುಂದೆ ನೋಡುವಂತಾಗಿದೆ. ಈಗಾಗಲೇ ನಷ್ಟದ ನಾಗಾಲೋಟದಲ್ಲಿ ಸಾಗುತ್ತಿರುವ ಬಿಎಂಟಿಸಿಗೆ ವೋಲ್ವೊ ಬಸ್‌ಗಳು (BMTC Volvo Bus) ಮತ್ತಷ್ಟು ನಷ್ಟದ ಭಾರ ಹೊರಿಸಲು ಮುಂದಾಗಿವೆ. ಬಿಎಂಟಿಸಿ (BMTC) ವೋಲ್ವೋ ಬಸ್‌ಗಳಲ್ಲಿ ಸಾಮಾನ್ಯ ಬಸ್ ದರದಕ್ಕಿಂತಲೂ ದುಪ್ಪಟ್ಟು ಟಿಕೆಟ್ ದರ (BMTC AC Bus Fare) ಇರುತ್ತದೆ. ಆದ್ರೀಗ ಈ ಬಸ್‌ಗಳಲ್ಲಿ ಎಸಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಅನ್ನೋ ಬೇಸರ ಜನರಲ್ಲಿ ಮೂಡಿದೆ. ಇದರಿಂದ ವೋಲ್ವೋ ಸಹವಾಸವೇ ಬೇಡವೆಂದು ಪ್ರಯಾಣಿಕರು ಗೊಣಗುತ್ತಿದ್ದಾರೆ.
ಎಸಿ ವರ್ಕ್ ಆಗ್ತಿಲ್ಲ, ಜನ ಬಸ್ ಹತ್ತುತ್ತಿಲ್ಲ
ಇಡೀ ದೇಶದಲ್ಲಿ ಖ್ಯಾತಿ ಗಳಿಸಿರುವ ಬಿಎಂಟಿಸಿ, ಈಗ ನಷ್ಟದ ಹಾದಿಯಲ್ಲಿ ಸಾಗುತ್ತಿದೆ. ಅದರಲ್ಲೂ ದುಬಾರಿ ಬೆಲೆಗೆ ಖರೀದಿಸಿರುವ ವೋಲ್ವೋ ಬಸ್‌ಗಳಂತೂ ಜನರ ಕೆಂಗಣ್ಣಿಗೆ ಗುರಿಯಾಗಿವೆ. ಬಿರುಬೇಸಿಗೆ ಅಂತ ಬಿಎಂಟಿಸಿ ವೋಲ್ವೋ ಎಸಿ ಬಸ್ ಹತ್ತಿ ಆರಾಮದಾಯಕ ಪ್ರಯಾಣ ಮಾಡೋಣ ಅಂತ ಬರೋ ಪ್ರಯಾಣಿಕರಿಗೆ ಈ ಬಸ್‌ಗಳು ಬೇಸರ ಮೂಡಿಸುತ್ತಿವೆ.
ಬಿಎಂಟಸಿ ಹವಾನಿಯಂತ್ರಿತ ಬಸ್ ಹತ್ತಿದ ಪ್ರಯಾಣಿಕರಿಗೆ ನೈಸರ್ಗಿಕ ಗಾಳಿಯೂ ಸಿಗಲ್ಲ, ಎಸಿ ಸೌಲಭ್ಯವೂ ಸಿಗದೆ ಪ್ರಯಾಣಿಸಬೇಕಿದೆ. ಬಸ್ ಪ್ರಯಾಣದ ವೇಳೆ ಯಾವುದೇ ಕಾರಣಕ್ಕೂ ಬಾಗಿಲುಗಳು ತೆರೆದಿರಬಾರದು ಎಂಬ ನಿಯಮ ಇದೆ. ಹೀಗಿದ್ದಾಗ ಪ್ರಯಾಣಿಕರು ಸೆಕೆಗೆ ಮತ್ತಷ್ಟು ಒದ್ದಾಡಬೇಕಾಗುತ್ತದೆ. ಸಾಮಾನ್ಯ ಬಸ್ ದರಕ್ಕೆ ಹೋಲಿಸಿದ್ರೆ ವಾಯುವಜ್ರ ವೋಲ್ವೋ ಬಸ್ (Vayuvajra Volvo Bus) ಟಿಕೆಟ್ ದರ ದುಪ್ಪಟ್ಟು ಮಾಡಲಾಗಿದೆ. ಸದ್ಯ ಈಗ ಕೆಲವೊಂದು ವೋಲ್ವೋ ವಾಯುವಜ್ರ ಬಸ್‌ಗಳಲ್ಲಿ ಎಸಿ ಕೈಕೊಟ್ಟಿದ್ದು, ರೂಟ್‌ಗೆ ಬಿಡಲಾಗಿದೆ. ಈ ನಡುವೆ ಎಸಿ ಇಲ್ಲದಿದ್ರೂ ಟಿಕೆಟ್ ದರದಲ್ಲಿ ಮಾತ್ರ ಕಡಿಮೆ ಮಾಡಿಲ್ಲ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಈ ಬಗ್ಗೆ ಬಿಎಂಟಿಸಿ ಅಧಿಕಾರಿಗಳು ಗಮನಹರಿಸಬೇಕಿದೆ ಅಂತ ಪ್ರಯಾಣಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ-Siddharamaiah Allegations On BJP: ಜೇಮ್ಸ್ ಚಿತ್ರ ನಿಲ್ಲಿಸಲು ಬಿಜೆಪಿ ಒತ್ತಡ, ಸಿದ್ದರಾಮಯ್ಯ ಆರೋಪ!
ಕೋಟಿ ಕೋಟಿ ರೂಪಾಯಿ ಸುರಿದು ಬಸ್‌ಗಳನ್ನು ಖರೀದಿಸುವ ಬಿಎಂಟಿಸಿ ನಿಗಮ ಈಗಲಾದ್ರೂ ಹವಾನಿಯಂತ್ರಿತ ಬಸ್‌ಗಳತ್ತ ಗಮನಹರಿಸಬೇಕಿದೆ. ದಿನ ಕಳೆದಂತೆ ಎಸಿ ಬಸ್‌ಗಳತ್ತ ಮುಖ ಮಾಡುತ್ತಿರೋ ಪ್ರಯಾಣಿಕರನ್ನ ತನ್ನಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ. ಇನ್ನೂ ಎಸಿ ಬಸ್‌ಗಳ ಅವ್ಯವಸ್ಥೆ ಬಗ್ಗೆ ಬಿಎಂಟಿಸಿ ಅಧ್ಯಕ್ಷರನ್ನ ಕೇಳಿದರೆ, ಎಲ್ಲವೂ ಸರಿಯಾಗುತ್ತೆ ಅಂತ ಸಮಜಾಯಿಷಿ ನೀಡುತ್ತಿದ್ದಾರೆ.
ಇದನ್ನೂ ಓದಿ-KIADB ವಶಪಡಿಸಿಕೊಂಡ ಜಮೀನಿಗೆ ಪರಿಹಾರ ಬೇಡವೆಂದವರಿಗೆ ಸೈಟ್: ಸಚಿವ ನಿರಾಣಿ
ಒಟ್ಟಿನಲ್ಲಿ ಬಿಎಂಟಿಸಿಗೆ ಎಸಿ ಬಸ್‌ಗಳು ಬಿಳಿ ಆನೆ ಸಾಕಿದಂತೆ ಆಗಿದೆ. ಒಂದು ಕಡೆ ನಿಯಮದಂತೆ ವೋಲ್ವೋ ಕಂಪನಿ ಬಸ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡ್ತಿಲ್ಲ. ನಿಗಮ ಕೂಡ ನಿರ್ವಹಣೆ ಮಾಡೋಕೆ ಆಗದೆ ಸಂಕಷ್ಟದಲ್ಲಿ ಸಿಲುಕಿದೆ. ಇದರಿಂದ ಪ್ರಯಾಣಿಕರು ಬೇಸಿಗೆಯಲ್ಲಿ ಎಸಿ ಬಸ್ ಸಹವಾಸ ಬೇಡವೇ ಬೇಡ ಅಂತಿರೋದು ಬಿಎಂಟಿಸಿಗೆ ಇನ್ನಷ್ಟು ನಷ್ಟವಾಗಲಿದೆ.
ಇದನ್ನೂ ಓದಿ-Niranthara Ranga Utsava: ನಾಳೆಯಿಂದ 5 ದಿನಗಳ ಕಾಲ ‘ನಿರಂತರ ರಂಗ ಉತ್ಸವ’
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.