ಬೆಂಗಳೂರು : ಬಿಡಿಎ (BDA)ಮಧ್ಯವರ್ತಿಗಳ ಮನೆಗಳ ಮೇಲೆ ದಾಳಿ ಎಸಿಬಿ ದಾಳಿ ನಡೆದಿದೆ (ACB Raid). ಬೆಂಗಳೂರಿನ ಒಟ್ಟು 9 ಕಡೆ ದಾಳಿ ನಡೆಸಲಾಗಿದೆ. 100 ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ದಾಳಿ ನಡೆದಿದೆ.
ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಎಸಿಬಿ ದಾಳಿ ನಡೆದಿದೆ (ACB Raid). ಬಿಡಿಎ ಮಧ್ಯವರ್ತಿಗಳ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಡಿಎ (BDA) ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆ ಸೇರಿ ಅವ್ಯವಾಹರದಲ್ಲಿ ತೊಡಗಿದ್ದ ಮಧ್ಯವರ್ತಿಗಳ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.
ಇದನ್ನೂ ಓದಿ : HD Kumaraswamy : ಕಸದ ಲಾರಿಗೆ ಬಾಲಕಿ ಬಲಿ : ಬಿಬಿಎಂಪಿ ವಿರುದ್ಧ ಕಿಡಿಕಾರಿದ ಹೆಚ್'ಡಿಕೆ
ಈ ಮೂಲಕ ಭ್ರಷ್ಟಾಚಾರ ನಡೆಸಿರುವ ಆರೋಪದ ಮೇಲೆ ದಾಳಿ ಮಾಡಲಾಗಿದೆ.
ಎಸಿಬಿ ಎಸ್ಪಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಪರಿಶೀಲನೆ ನಡೆಯುತ್ತಿದೆ (Bengaluru ACB Raid).
ಯಾವ್ಯಾವ ಮಧ್ಯವರ್ತಿಗಳ ಮನೆ ಮೇಲೆ ದಾಳಿ ? :
1.ರಘು ಬಿ ಎನ್.ಚಾಮರಾಜಪೇಟೆ.
2 ಮೋಹನ್,ಮನೋರಾಯನಪಾಳ್ಯ.ಆರ್.ಟಿ.ನಗರ.
3.ಮನೋಜ್, ದೊಮ್ಮಲೂರು.
4.ಮುನಿರತ್ನ ರತ್ನವೇಲು, ಮಲ್ಲತ್ತಹಳ್ಳಿ
5.ತೇಜು@ತೇಜಸ್ವಿ.ಆರ್ ಆರ್ ನಗರ
6.ಅಶ್ವತ್ @ಮುದ್ದಿನಪಾಳ್ಯ ಅಶ್ವತ್.ಕೆಜಿ ಸರ್ಕಲ್,ಮುದ್ದಿನಪಾಳ್ಯ.
7.ರಾಮ ,ಚಾಮುಂಡೇಶ್ವರಿನಗರ.ಬಿಡಿಎ ಬಡಾವಣೆ.
8.ಲಕ್ಷ್ಮಣ, ಚಾಮುಂಡೇಶ್ವರಿ ನಗರ, ಬಿಡಿಎ ಲೇಔಟ್.
9.ಚಿಕ್ಕಹನುಮ್ಮಯ್ಯ, ಮುದ್ದಿನಪಾಳ್ಯ, ಬೆಂಗಳೂರು
ಇದನ್ನೂ ಓದಿ : BBMP ಲಾರಿ ಹರಿದು ಬಾಲಕಿ ಸಾವು: 2 ಲಕ್ಷ ರೂ. ವೈಯಕ್ತಿಕ ಪರಿಹಾರ ಘೋಷಿಸಿದ ಭೈರತಿ ಸುರೇಶ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.