Niranthara Ranga Utsava: ನಾಳೆಯಿಂದ 5 ದಿನಗಳ ಕಾಲ ‘ನಿರಂತರ ರಂಗ ಉತ್ಸವ’

ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಕಾರದೊಂದಿಗೆ ಪ್ರತಿವರ್ಷದಂತೆ ಈ ವರ್ಷವೂ ನಿರಂತರ ಫೌಂಡೇಶನ್ ‘ನಿರಂತರ ರಂಗ ಉತ್ಸವ'ವನ್ನು ಆಯೋಜಿಸಿದೆ.

Written by - Zee Kannada News Desk | Last Updated : Mar 22, 2022, 04:48 PM IST
  • ನಾಳೆಯಿಂದ ಮೈಸೂರಿನಲ್ಲಿ 5 ದಿನಗಳ ಕಾಲ ‘ನಿರಂತರ ರಂಗ ಉತ್ಸವ’
  • ರಾಜ್ಯದ ಪ್ರಸಿದ್ಧ ರಂಗತಂಡಗಳಿಂದ ಪ್ರಖ್ಯಾತ ನಾಟಕಗಳ ಪ್ರದರ್ಶನ
  • 5 ದಿನವೂ ರಂಗಾಸಕ್ತರಿಗೆ ವಿಭಿನ್ನ ನಾಟಕಗಳನ್ನು ನೋಡುವ ಅವಕಾಶ
Niranthara Ranga Utsava: ನಾಳೆಯಿಂದ 5 ದಿನಗಳ ಕಾಲ ‘ನಿರಂತರ ರಂಗ ಉತ್ಸವ’ title=
ಮೈಸೂರಿನಲ್ಲಿ 5 ದಿನಗಳ ಕಾಲ ‘ನಿರಂತರ ರಂಗ ಉತ್ಸವ’

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಳೆಯಿಂದ 5 ದಿನಗಳ ಕಾಲ ‘ನಿರಂತರ ರಂಗ ಉತ್ಸವ’ ನಡೆಯಲಿದೆ. ಮೈಸೂರಿನ ನಿರಂತರ ಫೌಂಡೇಶನ್(Niranthara Foundation)ವತಿಯಿಂದ ಮೈಸೂರಿನ ರಾಮಕೃಷ್ಣನಗರದ ರಮಾಗೋವಿಂದ ರಂಗ ಮಂದಿರ(Ramagovinda Rangamandira)ದಲ್ಲಿ ‘ರಂಗ ಉತ್ಸವ’ವನ್ನು ಆಯೋಜಿಸಲಾಗಿದೆ.

ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಕಾರದೊಂದಿಗೆ ಪ್ರತಿವರ್ಷದಂತೆ ಈ ವರ್ಷವೂ ನಿರಂತರ ಫೌಂಡೇಶನ್ ‘ನಿರಂತರ ರಂಗ ಉತ್ಸವ’(Niranthara Ranga Utsava)ವನ್ನು ಆಯೋಜಿಸಿದೆ. 5 ದಿನಗಳ ಕಾಲ ರಾಜ್ಯದ ಪ್ರಸಿದ್ಧ ರಂಗತಂಡಗಳು ಪ್ರಖ್ಯಾತ ನಾಟಕಗಳನ್ನು ಪ್ರದರ್ಶಿಸಲಿವೆ. 5 ದಿನವೂ ರಂಗಾಸಕ್ತರಿಗೆ ವಿಭಿನ್ನ ನಾಟಕಗಳನ್ನು ನೋಡುವ ಅವಕಾಶ ದೊರೆಯಲಿದೆ.

ಇದನ್ನೂ ಓದಿ: Niranthara Ranga Utsava: ಮಾರ್ಚ್ 23ರಿಂದ 27ರವರೆಗೆ ‘ನಿರಂತರ ರಂಗ ಉತ್ಸವ’

ನಾಳೆ(ಮಾ.23) ‘ನಿರಂತರ ರಂಗ ಉತ್ಸವ’ದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಂಜೆ 6 ಗಂಟೆಗೆ ಹಿರಿಯ ಕವಿ, ನಾಟಕಕಾರ ಎಚ್.ಎಸ್.ಶಿವಪ್ರಕಾಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್‌ಸ್(ಜೆಎಲ್‌ಆರ್)ನ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ (IFS)  ಮತ್ತು ಬೆಂಗಳೂರಿನ ಆದಾಯ ತೆರಿಗೆ ಇಲಾಖೆ ಆಯುಕ್ತ ಜಯರಾಮ್ ರಾಯಪುರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಿರಂತರದ ಪ್ರಸಾದ್ ಕುಂದೂರು ಸೇರಿದಂತೆ ರಂಗಕರ್ಮಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಸಂಜೆ 7 ಗಂಟೆಗೆ ನಿರಂತರ ರಂಗ ತಂಡ(Niranthara Foundation)ದಿಂದ ಜಯರಾಮ ರಾಯಪುರ ರಚನೆಯ ಪ್ರಸಾದ್ ಕುಂದೂರು ನಿರ್ದೇಶನದ ‘ವಾರಸುದಾರಾ’ ನಾಟಕ ಪ್ರದರ್ಶಿತಗೊಳ್ಳಲಿದೆ. 

ಮಾ.24ರಂದು ಸಂಜೆ 7 ಗಂಟೆಗೆ ಬೆಂಗಳೂರು ದೃಶ್ಯಕಾವ್ಯ ರಂಗತಂಡದಿಂದ ಕೆ.ವೈ.ನಾರಾಯಣಸ್ವಾಮಿ(KY Narayanaswamy) ರಚನೆಯ ನಂಜುಂಡೇಗೌಡ ಸಿ ನಿರ್ದೇಶನದ ‘ಮಾಯಾ ಬೇಟೆ’ ನಾಟಕ ಪ್ರದರ್ಶನವಿರುತ್ತದೆ.

ಮಾ.25ರಂದು ಸಂಜೆ 7 ಗಂಟೆಗೆ ನಿರಂತರ ರಂಗ ತಂಡದಿಂದ ವರಕವಿ ದ.ರಾ.ಬೇಂದ್ರೆ ರಚನೆಯ ಕಿರಣ್ ಬಿ.ಕೆ ಮತ್ತು ಗುರುಪ್ರಸಾದ್ ಕೆ.ವೈ ನಿರ್ದೇಶನದ ‘ಸಾಯೋ ಆಟ’ ನಾಟಕ ಪ್ರದರ್ಶನ(Drama Play)ಗೊಳ್ಳಲಿದೆ.

ಇದನ್ನೂ ಓದಿ: Mysore University Convocation: ಪಾರ್ವತಮ್ಮ & ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ 2 ಚಿನ್ನದ ಪದಕ ಘೋಷಣೆ

ಮಾ.26ರಂದು ಸಂಜೆ 7 ಗಂಟೆಗೆ ಶಿವಮೊಗ್ಗದ ರಂಗಾಯಣ(Rangayana Shimoga) ರಂಗತಂಡದಿಂದ ರಾಜಪ್ಪ ದಳವಾಯಿ ರಚಿತ ಲಕ್ಷ್ಮಣ್ ಕೆ.ಪಿ ನಿರ್ದೇಶನದ ‘ವೀ ದಿ ಪೀಪಲ್ ಆಫ್ ಇಂಡಿಯಾ’ ನಾಟಕ ಪ್ರದರ್ಶಿತವಾಗಲಿದೆ.

ಮಾ.27ರ ಸಾಯಂಕಾಲ 6 ಗಂಟೆಗೆ ‘ನಿರಂತರ ರಂಗ ಉತ್ಸವ’(Ranga Utsava)ದ ಸಮಾರೋಪ ಸಮಾರಂಭ ನಡೆಯಲಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್, ಮೈಸೂರು ರಂಗಾಯಣದ ಹಿರಿಯ ಕಲಾವಿದ ಎಸ್.ರಾಮನಾಥ್ ಹಾಗೂ ಬೆಂಗಳೂರಿನ ಹಸಿರು ಫೌಂಡೇಶನ್ ನ ಹೊನ್ಗಳ್ಳಿ ಗಂಗಾಧರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ನಿರಂತರ ಫೌಂಡೇಶನ್ ನ ಸುಗುಣ ಎಂ ಎಂ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಸಂಜೆ 7 ಗಂಟೆಗೆ ಉಡುಪಿ ರಂಗಭೂಮಿ ತಂಡದಿಂದ ಮೌನೇಶ್ ಬಡಿಗೇರ ರಚಿತ ಮಂಜುನಾಥ್ ಎಲ್.ಬಡಿಗೇರ ನಿರ್ದೇಶನದ ‘ವಿ.ಶಾಂ.ಕೇ’ ನಾಟಕ  ಪ್ರದರ್ಶನಗೊಳ್ಳಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News