Tejasvi Surya : ಎಂಪಿ ತೇಜಸ್ವಿ ಸೂರ್ಯ ಮನೆಗೆ ಡೆಲಿವರಿ ಆಯ್ತು ಕಾಂಗ್ರೆಸ್ ಮಸಾಲೆ ದೋಸೆ
ಕೊನೆಗೂ ಕಾಂಗ್ರೆಸ್ ಕಾರ್ಯಕರ್ತರು ಸಂಸದ ತೇಜಸ್ವಿ ಸೂರ್ಯ ಮನೆಗೆ ಮಸಾಲೆ ದೋಸೆಯನ್ನು ಪಾರ್ಸಲ್ ಕಳುಹಿಸಿ ಕೊಟ್ಟಿದ್ದಾರೆ. ಆದರೆ ದೋಸೆ ಡೆಲಿವರಿ ಬಾಯ್ ಅನ್ನು ಬಿಜೆಪಿ ಕಾರ್ಯಕರ್ತರು ಪೊಲೀಸರಿಗೆ ಹಿಡಿದು ಒಪ್ಪಿಸಿದ್ದಾರೆ.
ಬೆಂಗಳೂರು : ಕೊನೆಗೂ ಕಾಂಗ್ರೆಸ್ ಕಾರ್ಯಕರ್ತರು ಸಂಸದ ತೇಜಸ್ವಿ ಸೂರ್ಯ ಮನೆಗೆ ಮಸಾಲೆ ದೋಸೆಯನ್ನು ಪಾರ್ಸಲ್ ಕಳುಹಿಸಿ ಕೊಟ್ಟಿದ್ದಾರೆ. ಆದರೆ ದೋಸೆ ಡೆಲಿವರಿ ಬಾಯ್ ಅನ್ನು ಬಿಜೆಪಿ ಕಾರ್ಯಕರ್ತರು ಪೊಲೀಸರಿಗೆ ಹಿಡಿದು ಒಪ್ಪಿಸಿದ್ದಾರೆ.
ಗಿರಿನಗರ ಪೊಲೀಸರು ಮುಂಜಾಗೃತಾ ಕ್ರಮವಾಗಿ ದೋಸೆ ಡೆಲಿವರಿಗೆ ಬಂದಿದ್ದ ವಿನೋದ್ ಕುಮಾರ್, ವಿಶ್ವನಾಥ್ ಹಾಗೂ ನೂರ್ ಸಿಂಗ್ ಎಂಬುವವರನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಆದ್ರೆ, ಈ ಘಟನೆ ಸಂಬಂಧಪಟ್ಟಂತೆ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ.
CT Ravi : 'ಪ್ರಾಸ ಬದ್ದವಾಗಿ ಸಿಟಿನ ಲೂಟಿ ಅನ್ನುವುದಾದರೆ ಸಿದ್ದುನ ಪೆದ್ದ ಅನ್ನಬಹುದು'
ಇಂದು ಬೆಳಗ್ಗೆ ಸಂಸದ ತೇಜಸ್ವಿ ಸೂರ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಎಲ್ಲಿದೆ ದೋಸೆ? 24 ಗಂಟೆಯಾದರೂ ನನ್ನ ಮನೆಗೆ ದೋಸೆ ಬಂದಿಲ್ಲ, ದೋಸೆ ವಿಚಾರದಲ್ಲೂ ಕಾಂಗ್ರೆಸ್ ಮೋಸ ಮಾಡುತ್ತಿದೆ. ಅವರಿಗೆ ಸರಿಯಾಗಿ ದೋಸೆ ಕೊಡಲು ಸಾಧ್ಯವಿಲ್ಲ. ಹೀಗಿದ್ದರೂ ಉತ್ತಮ ಆಡಳಿತ ನೀಡುವ ಕನಸು ಕಾಣುತ್ತಾರೆ ಎಂದು ಕಾಂಗ್ರೆಸ್ ನಾಯಕರನ್ನ ಕೆಣಕಿದ್ದರು.
[[{"fid":"257053","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ತೇಜಸ್ವಿ ಸೂರ್ಯ ವಿರುದ್ಧ ಪ್ರತಿಭಟನೆ ನಡೆಸಿ ಮಸಾಲೆ ದೋಸೆ ಡೊನ್ಜೊ ಮೂಲಕ ಕಳುಹಿಸಿ ಕೊಟ್ಟಿದ್ದರು. ಈ ಸಂಬಂಧ ಸಂಸದರು ಇಂದು, ಮಸಾಲೆ ದೋಸೆ ಬಂದಿಲ್ಲ ಎಂದು ಟ್ವೀಟ್ ಮಾಡಿದ್ದರು. ಈ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಡೊನ್ಜೊ ಡೆಲಿವರಿ ಬಾಯ್ ಮೂಲಕ ಎಂಪಿ ತೇಜಸ್ವಿ ಅವರ ಗಿರಿನಗರದ ಮನೆಗೆ ಕಳುಹಿಸಿದ್ದಾರೆ. ಈ ವೇಳೆ ಮನೆಯ ಮುಂದಿದ್ದ ಬಿಜೆಪಿ ಕಾರ್ಯಕರ್ತರು ಡೆಲಿವರಿ ಬಾಯ್ ಗಳನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ : Video : ಟ್ರಾಫಿಕ್‌ನಲ್ಲಿ ಸಿಲುಕಿದ ಕಾರು, ರೋಗಿಯ ಜೀವ ಉಳಿಸಲು 3 ಕಿಮೀ ಓಡಿದ ಡಾಕ್ಟರ್!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.