CT Ravi : 'ಪ್ರಾಸ ಬದ್ದವಾಗಿ ಸಿಟಿನ ಲೂಟಿ ಅನ್ನುವುದಾದರೆ ಸಿದ್ದುನ ಪೆದ್ದ ಅನ್ನಬಹುದು'

ಪ್ರಾಸ ಬದ್ದವಾಗಿ ಸಿಟಿನ ಲೂಟಿ ಅನ್ನುವುದಾದರೆ  ಸಿದ್ದುನ ಪೆದ್ದ ಅನ್ನಬಹುದು ಎಂದು ಬಿಜೆಪಿ ಶಾಸಕ ಸಿಟಿ ರವಿ ಅವರು ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

Written by - Channabasava A Kashinakunti | Last Updated : Sep 12, 2022, 12:53 PM IST
  • ಪ್ರಾಸ ಬದ್ದವಾಗಿ ಸಿಟಿನ ಲೂಟಿ ಅನ್ನುವುದಾದರೆ ಸಿದ್ದುನ ಪೆದ್ದ ಅನ್ನಬಹುದು
  • ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಿಟಿ ರವಿ
  • ಸೆಂಟ್ ಹೊಡೆದುಕೊಂಡು ವಾಸನೆ ಮುಚ್ಚಿ ಹಾಕಲು ಸಾಧ್ಯವಿಲ್ಲ
CT Ravi : 'ಪ್ರಾಸ ಬದ್ದವಾಗಿ ಸಿಟಿನ ಲೂಟಿ ಅನ್ನುವುದಾದರೆ ಸಿದ್ದುನ ಪೆದ್ದ ಅನ್ನಬಹುದು' title=

ವಿಧಾನಸೌಧ : ಅದು ನನ್ನದಲ್ಲ, ಜಾಸ್ತಿ ವಿಷಯ ಬೇಕು ಅಂದ್ರೆ ವಿಶ್ವನಾಥ್ ಬರ್ತಾರೆ. ಸಿದ್ದರಾಮಯ್ಯ ಹಾಗೂ ವಿಶ್ವನಾಥ್ ರ ಬ್ಲಡ್ ಗ್ರೂಪ್ ಒಂದೆ. ಪ್ರಾಸ ಬದ್ದವಾಗಿ ಸಿಟಿನ ಲೂಟಿ ಅನ್ನುವುದಾದರೆ  ಸಿದ್ದುನ ಪೆದ್ದ ಅನ್ನಬಹುದು ಎಂದು ಬಿಜೆಪಿ ಶಾಸಕ ಸಿಟಿ ರವಿ ಅವರು ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಟಿ ರವಿ, ಕೆಂಪಣ್ಣನವರ ಆಯೋಗ ಸತ್ಯಾಸತ್ಯತೆಯನ್ನ ಹೊರಗೆ ತರಲು ರಚನೆ ಮಾಡಿದ್ದು. ಟಿಎ,ಡಿಎ ತೆಗೆದುಕೊಳ್ಳಲು ಕೆಂಪಣ್ಣ ಆಯೋಗ ರಚನೆ ಮಾಡಿದ್ದಲ್ಲ. ಸಿಟಿನ ಲೂಟಿ ಅನ್ಬೇಕಾದ್ರೆ, ಇವರನ್ನ ಏನೆಂದು ಕರೆಯಬೇಕು? ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಾ? ಟೆಬಲ್ ಗುದ್ದಿ ಕೇಳ್ತಿದ್ರು. ನಾನು ಏನು ಹೇಳಬೇಕೋ ಅದನ್ನ ಸೂಕ್ಷ್ಮವಾಗಿ ಹೇಳಿದ್ದೇನೆ. ನನಗೆ ಕೇಳಿದಂತೆ ಇತರರಿಗೂ ಅಷ್ಟೇ ಗಟ್ಟಿಯಾಗಿ ಪ್ರಶ್ನೆ ಕೇಳಿ. ಸಮಾಜವಾದಿಗಳ ಮಜವಾದಿ ತನ ನೋಡ್ತಿದ್ದೇನೆ. ಸೆಂಟ್ ಹೊಡೆದುಕೊಂಡು ವಾಸನೆ ಮುಚ್ಚಿ ಹಾಕಲು ಸಾಧ್ಯವಿಲ್ಲ. ನಾನು ಹೇಳಿಲ್ಲ ಎಂದು ಹೇಳಿಲ್ಲ, ನಿಮಗೂ ಜವಾಬ್ದಾರಿ ಇದೆ. ಉತ್ತರ ಕೊಡುವವರು ಏನು ಕೊಡ್ತಾರೆ ನೋಡೋಣ ಎಂದು ಹೇಳಿದ್ದಾರೆ.

ಇದನ್ನೂ ಓದಿ : 2nd PUC Supplementary Exam Result : ದ್ವಿತೀಯ ಪಿಯು ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ : ಹೀಗೆ ಪರಿಶೀಲಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News