ಬೆಂಗಳೂರು: ಇದನ್ನು ನಿಜವಾದ ಕರ್ತವ್ಯ ಪ್ರಜ್ಞೆ ಎಂದು ಕರೆಯಲಾಗುತ್ತದೆ. ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ, ಆದರೆ ತಡ ಮಾಡದೆ ಬೆಂಗಳೂರಿನ ವೈದ್ಯರೊಬ್ಬರು ನಡುರಸ್ತೆಯಲ್ಲೇ ಕಾರಿನಿಂದ ಇಳಿದು ಸುಮಾರು 3 ಕಿಲೋ ಮೀಟರ್ ದೂರ ಓಡಿ ಆಸ್ಪತ್ರೆ ತಲುಪಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಆಸ್ಪತ್ರೆಗೆ ತಲುಪಲು ಬೆಂಗಳೂರಿನ ಬೀದಿಗಳಲ್ಲಿ ಓಡುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ಬೆಂಗಳೂರಿನಲ್ಲಿ ನವೆಂಬರ್ ವರೆಗೂ ಸುರಿಯಲಿದೆ ಮಳೆ.! ರಾಜಧಾನಿಗೆ ಮತ್ತೆ ಕಂಟಕ ತರುವನಾ ವರುಣ
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯ ಡಾ.ಗೋವಿಂದ್ ನಂದಕುಮಾರ್ ಅವರನ್ನು ನೋಡಿ ಎಲ್ಲರೂ ಖುಷಿಪಟ್ಟರು. ಆಗಸ್ಟ್ 30 ರಂದು ಆಸ್ಪತ್ರೆಗೆ ತೆರಳಿದ್ದರು. ಆದರೆ ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದ್ದು, ಸರ್ಜಾಪುರ-ಮಾರತಹಳ್ಳಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆಸ್ಪತ್ರೆಯಲ್ಲಿ ವೈದ್ಯರೇ ರೋಗಿಗಳಿಗೆ ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು. ಆದರೆ ಅವರು ಈ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದರು. ರೋಗಿಯ ಬಗ್ಗೆ ಯೋಚಿಸಿದ ವೈದ್ಯ ನಂದಕುಮಾರ್ ಕೊನೆಗೆ ಕಾರಿನಿಂದ ಇಳಿದು ಓಡತೊಡಗಿದ್ದಾರೆ.
@BPACofficial @BSBommai @sarjapurblr @WFRising @blrcitytraffic sometimes better to run to work ! pic.twitter.com/6mdbLdUdi5
— Govind Nandakumar MD (@docgovind) September 10, 2022
ಹೀಗೆ ಓಡಲು ಆರಂಭಿಸಿದ ಈ ವೈದ್ಯರು, ಮಣಿಪಾಲ್ ಆಸ್ಪತ್ರೆ ತಲುಪಬೇಕಿತ್ತು. ಅತಿವೃಷ್ಟಿ ಹಾಗೂ ನೀರು ನಿಂತಿದ್ದರಿಂದ ರಸ್ತೆಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ಸಮಯ ವ್ಯಯ ಮಾಡಲು ಮನಸ್ಸಾಗಲಿಲ್ಲ. ರೋಗಿಗಳು ನನಗಾಗಿ ಕಾಯುತ್ತಿದ್ದರು. ಅದಕ್ಕಾಗಿ ಓಡಲು ನಿರ್ಧರಿಸಿದೆ ಎಂದು ವೈದ್ಯರು ಹೇಳಿದ್ದಾರೆ.
ಸುದ್ದಿ ಸಂಸ್ಥೆಯ ಮೂಲಗಳ ಪ್ರಕಾರ, ಕಳೆದ 18 ವರ್ಷಗಳಿಂದ ನಂದಕುಮಾರ್ ಅನೇಕ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ. ವೈದ್ಯರಾಗಿಯೂ ಖ್ಯಾತಿ ಪಡೆದಿದ್ದಾರೆ. ರೋಗಿಗಳ ಬಗ್ಗೆ ಯೋಚಿಸುತ್ತಾ ವೈದ್ಯರು ಆಸ್ಪತ್ರೆಯತ್ತ ಓಡಿದ ರೀತಿಯನ್ನು ಎಲ್ಲರೂ ಪ್ರಶಂಸಿಸುತ್ತಿದ್ದಾರೆ.
ಇದನ್ನೂ ಓದಿ: WATCH : ಕಂಠಪೂರ್ತಿ ಕುಡಿದು ರಸ್ತೆ ಮಧ್ಯೆ ಯೋಗಾಸನ.. ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.