ಉರಿ ಉರಿ ಬಿಸಿಲಿನ ಮಧ್ಯೆ ಕಾಯಿಲೆಗಳ ಭೀತಿ: ಸಿಲಿಕಾನ್ ಸಿಟಿಯಲ್ಲಿ ಕಾಲರಾ ಕರಾಳ ಛಾಯೆ
Cholera in Bengaluru: ಒಂದು ಕಡೆ ಜಲಕ್ಷಾಮ, ಮತ್ತೊಂದು ಕಡೆಯಲ್ಲಿ ರಣ ಬಿಸಿಲು. ಜೊತೆಗೆ ಲೋಕ ಸಮರದ ಪ್ರಚಾರದ ಕಾವು ಜೋರಾಗ್ತಾ ಇದೆ. ಇತ್ತ ಭಾಸ್ಕರನ ಅಬ್ಬರದಿಂದ ಜನ ಹೈರಾಣಾಗಿದ್ದಾರೆ. ಸುಡು ಸುಡು ಬಿಸಿಲು ಸಿಟಿ ಮಂದಿಯನ್ನ ಬೆಚ್ಚಿ ಬೀಳಿಸಿದೆ.
ಬೆಂಗಳೂರು: ಮಾರ್ಚ್ ಮುಗಿದು ಏಪ್ರಿಲ್ ಬಂದಾಗಿದೆ. ಬಿಸಿಲಿನ ತಾಪ ಕೂಡ ತೀವ್ರ ಬದಲಾಗಿದೆ. ಒಂದು ಕಡೆ ಲೋಕ ಕದನದ ಪ್ರಚಾರ ಕಾವು ಪಡೆದುಕೊಳ್ತಾ ಇದ್ರೆ, ಮತ್ತೊಂದೆಡೆ ಬೆಳಗಿನ ಜಾವವೇ ದಿನಕರ ನೆತ್ತಿ ಸುಡುವಂತೆ ಅಬ್ಬರಿಸುತ್ತಿದ್ದಾನೆ. ಮೈ ಉರಿಯೋ ಬಿಸಿಲಿಗೆ ಸಿಟಿ ಮಂದಿ ಬೇಸತ್ತು ಹೋಗಿದ್ದಾರೆ. ಇದರ ಮಧ್ಯೆ ಇದೀಗ ಜನರಿಗೆ ಮತ್ತೊಂದು ಭೀತಿ ಶುರುವಾಗಿದೆ.
ಒಂದು ಕಡೆ ಜಲಕ್ಷಾಮ, ಮತ್ತೊಂದು ಕಡೆಯಲ್ಲಿ ರಣ ಬಿಸಿಲು. ಜೊತೆಗೆ ಲೋಕ ಸಮರದ ಪ್ರಚಾರದ ಕಾವು ಜೋರಾಗ್ತಾ ಇದೆ. ಇತ್ತ ಭಾಸ್ಕರನ ಅಬ್ಬರದಿಂದ ಜನ ಹೈರಾಣಾಗಿದ್ದಾರೆ. ಸುಡು ಸುಡು ಬಿಸಿಲು ಸಿಟಿ ಮಂದಿಯನ್ನ ಬೆಚ್ಚಿ ಬೀಳಿಸಿದೆ. ಈ ಬಾರಿಯ ಬಿಸಿಲು ನೋಡ್ತಾ ಇದ್ರೆ ಬಳ್ಳಾರಿಯನ್ನೆ ಮೀರಿಸುವಂತಿದೆ. ಹೀಗಿರುವಾಗ ಜನರನ್ನ ಇದೀಗ ಕಾಯಿಲೆಗಳು ಆತಂಕಕ್ಕೀಡು ಮಾಡುತ್ತಿದೆ.
ಇದನ್ನೂ ಓದಿ: 4 AC ಮೇಲೆ ಬಂಪರ್ ಡಿಸ್ಕೌಂಟ್ ! ಅರ್ಧದಷ್ಟು ಬೆಲೆಗೆ ಸಿಗುತ್ತಿದೆ ಈ ಎಸಿ
ರಾಜ್ಯದಲ್ಲಿ ಒಂದೊಂದೆ ರೋಗಗಳು ಜನ್ಮ ತಾಳುತ್ತಿವೆ. ಈ ನಡುವೆ ರಾಜಧಾನಿಯಲ್ಲಿ ಸವಾರಿಗೆ ಸಿದ್ಧತೆ ಮಾಡ್ಕೊಂಡಿರುವ ಅದೊಂದು ಕ್ರೂರಿ, ಬೆಂಗಳೂರಿನಲ್ಲಿ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿದೆ. ಇತ್ತೀಚಿಗಷ್ಟೇ ಅತಿಸಾರ ಭೇದಿ & ವಾಂತಿ ಲಕ್ಷಣದಿಂದ 27 ವರ್ಷದ ಮಹಿಳೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೊದಲ ಪರೀಕ್ಷೆಗೊಳಪಡಿಸಿದಾಗ ಕಾಲರಾ ಪತ್ತೆಯಾಗಿತ್ತು. ಕಲ್ಚರ್ ಟೆಸ್ಟ್ ನಡೆಸಲು ಆರೋಗ್ಯ ಇಲಾಖೆ ಮುಂದಾಗಿತ್ತು. ಈ ಘಟನೆ ಆರೋಗ್ಯ ಇಲಾಖೆಯನ್ನ ಅಲರ್ಟ್ ಮಾಡಿತ್ತು. ಇದರ ಬೆನ್ನಲೇ ಇದೀಗ ಬೆಂಗಳೂರು ವೈದ್ಯಕೀಯ ಕಾಲೇಜಿನ ಮಹಿಳಾ ಹಾಸ್ಟೆಲ್ ನಲ್ಲಿ ಕಾಲರಾ ಅಟ್ಯಾಕ್ ಆಗಿದೆ.
ಕಳೆದ ರಾತ್ರಿ ಬೆಂಗಳೂರಿನ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ 47 ವಿದ್ಯಾರ್ಥಿನಿಯರು ವಾಂತಿ ಬೇಧಿಯಿಂದ ತೀವ್ರ ಅಸ್ವಸ್ಥಗೊಂಡಿದ್ದರು. ಎಲ್ಲರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಲ್ಲಿ ಇಬ್ಬರು ವಿದ್ಯಾರ್ಥಿನಿಯರಲ್ಲಿ ಕಾಲರಾ ಅಂಶ ಪತ್ತೆಯಾಗಿದೆ. ಇದರಿಂದಾಗಿ ಮತ್ತಷ್ಟು ಭೀತಿ ಎದುರಾಗಿದೆ.
ಕಾಲೇಜಿನ ಹಾಸ್ಟೆಲ್’ನಲ್ಲಿ ಇವರೆಲ್ಲಾ ವಾಸವಿದ್ದರು. ರಿಪೇರಿಯಲ್ಲಿರುವ ವಾಟರ್ ಟ್ಯಾಂಕ್’ನಿಂದ ನೀರು ಪೂರೈಕೆ ಮಾಡಲಾಗುತ್ತಿತ್ತು. ನೀರು ಕಲುಷಿತಗೊಂಡ ಕಾರಣದಿಂದ ಈ ಘಟನೆ ನಡೆದಿದೆ ಎಂಬ ಆರೋಪವೂ ಕೇಳಿಬಂದಿದೆ. ಇನ್ನು ವಿಷಯ ತಿಳಿದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಣೆ ಮಾಡಿದರು. ಇದೇ ವೇಳೆ ವಿದ್ಯಾರ್ಥಿನಿಯರು ಹಲವು ದೂರುಗಳನ್ನು ಹೇಳಿದ್ದಾರಂತೆ.
ಇನ್ನು ಘಟನೆಯ ಬಗ್ಗೆ ಮಹಿಳಾ ಆಯೋಗದಲ್ಲಿ ಸುಮೋಟೋ ಕೇಸ್ ದಾಖಲಿಸಿಕೊಳ್ಳಲಾಗಿದೆ. ಇನ್ನು ವಿದ್ಯಾರ್ಥಿನಿಲಯದಲ್ಲಿನ ವ್ಯವಸ್ಥೆ ಬಗ್ಗೆ ಮಾತನಾಡಿರುವ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ, ಒಂದು ವಾರದಲ್ಲಿ ಸಮಸ್ಯೆ ಬಗೆ ಹರಿಸುವಂತೆ ಹೇಳಿದ್ದೇನೆ. ವಸತಿ ನಿಲಯಕ್ಕೆ ವಿಕ್ಟೋರಿಯಾ ಆಸ್ಪತ್ರೆಯಿಂದ ಊಟ ಹೋಗುತ್ತದೆ. ಈ ಬಗ್ಗೆ ನಾನು ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಬಿಸಿಲಿನ ಝಳಕ್ಕೆ ತರಕಾರಿಗಳ ಬೆಲೆ ಏರಿಕೆ : ತರಕಾರಿ ಬೆಲೆ ಕೇಳಿ ಬೆಸ್ತು ಬೀಳುವ ಸ್ಥಿತಿ
ಒಟ್ಟಾರೆ ಬಿಸಿಲು ಹೆಚ್ಚಾಗ್ತಿದ್ದಂತೆ ಸಾಂಕ್ರಾಮಿಕ ರೋಗಗಳು ಜನರನ್ನು ಕಾಡಲು ಶುರು ಮಾಡುತ್ತಿವೆ. ಡಿಹೈಡ್ರೇಷನ್, ಉಸಿರಾಟದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಜನರು ಕೂಡ ಸೂಕ್ತ ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳಲಬೇಕಾಗಿದೆ. ಸ್ವಚ್ಚತೆಗೆ ಹೆಚ್ಚು ಒತ್ತು ಕೊಡುವ ಮೂಲಕ ಕಾಲರಾವನ್ನ ಕಟ್ಟಿ ಹಾಕಲು ಮುಂದಾಗಬೇಕಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.