ಇರುವ ಕಡೆಯೇ ಸಂವಿಧಾನ ಓದುವ ಮೂಲಕ ಅಂಬೇಡ್ಕರ್ ಜಯಂತಿ ಆಚರಿಸಲು ಡಿಕೆಶಿ ಕರೆ
ಕರೋನಾ ಕಾರಣದಿಂದ ರಾಜ್ಯದ ರಕ್ತ ನಿಧಿಗಳಲ್ಲಿ ರಕ್ತದ ಕೊರತೆ ಹೆಚ್ಚಾಗುತ್ತಿದೆ. ಈ ಕುರಿತು ವೈದ್ಯರು ಹಾಗೂ ರಕ್ತ ನಿಧಿಗಳ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇನೆ. ಈ ಸಂದರ್ಭದಲ್ಲಿ ನಮ್ಮ ಆರೋಗ್ಯವಂತ ಯುವಕರು, ವಿದ್ಯಾರ್ಥಿಗಳು ರಕ್ತದಾನ ಮಾಡಬೇಕು ಎಂದು ಡಿ.ಕೆ. ಶಿವಕುಮಾರ್ ಮನವಿ
ಬೆಂಗಳೂರು: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜನಿಸಿ ಏಪ್ರಿಲ್ 14ಕ್ಕೆ 129 ವರ್ಷವಾಗಲಿದೆ. ಅಂದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ (Constitution)ದ ಪ್ರಸ್ತಾವನೆಯನ್ನು ಇರುವ ಸ್ಥಳದಲ್ಲೇ 1 ನಿಮಿಷ ಓದುವ ಮೂಲಕ ನಮ್ಮ ಐಕ್ಯತೆ, ಸಮಗ್ರತೆ, ಬ್ರಾತೃತ್ವವನ್ನು ಎತ್ತಿ ಹಿಡಿದು ವಿಶೇಷವಾಗಿ ಆಚರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಮನವಿ ಮಾಡಿಕೊಂಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆ ಮಲಗಿದೆ, ಸಚಿವ ಈಶ್ವರಪ್ಪ ಎಲ್ಲಿದ್ದಾರೋ ಗೊತ್ತಿಲ್ಲ: ಡಿ.ಕೆ. ಶಿವಕುಮಾರ್
ಶುಕ್ರವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇದು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲಾ ಪಕ್ಷದವರೂ ಇದನ್ನು ಪಾಲಿಸಬಹುದು. ಇದನ್ನು ನಾವು ಸಂಭ್ರಮದಿಂದ ಮಾಡುವ ಅಗತ್ಯವಿಲ್ಲ. ಸರಳವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಡಬೇಕಿದೆ. ಯಾರ ಜತೆಗೂ ಸ್ಪರ್ಧೆ ನಡೆಸಲು ಈ ಕಾರ್ಯಕ್ರಮ ಮಾಡುತ್ತಿಲ್ಲ. ಸ್ಪರ್ಧೆ ಮಾಡುವ ಅಗತ್ಯವೂ ನಮಗಿಲ್ಲ. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಮೂಲಕ ದೇಶವನ್ನು ಕಟ್ಟುತ್ತಿದ್ದೇವೆ. ಸಂವಿಧಾನವೇ ನಮ್ಮ ದೇಶಕ್ಕೆ ದೊಡ್ಡ ಆಸ್ತಿ. ಹೀಗಾಗಿ ಅಂಬೇಡ್ಕರ್ ಜನ್ಮದಿನದ ಸುಸಂದರ್ಭದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಸಂವಿಧಾನದ ಮಹತ್ವವನ್ನು ತಿಳಿಸಲು ಈ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಮಾತಿಗೆ ತಕ್ಕಂತೆ ಕೋಮು ಸಾಮರಸ್ಯ ಕದಡುವರ ವಿರುದ್ದ ಕ್ರಮ ಕೈಗೊಳ್ಳಿ: ಬಿಎಸ್‌ವೈಗೆ ಡಿಕೆಶಿ ಸಲಹೆ
ಇದನ್ನು ಯಾರು ಯಾವ ರೀತಿ ಬೇಕಾದರೂ ಅರ್ಥೈಸಿಕೊಳ್ಳಬಹುದು. ಅದಕ್ಕೆ ನಮ್ಮ ಅಭ್ಯಂಥರವಿಲ್ಲ. ಅಂಬೇಡ್ಕರ್ ಜಯಂತಿ ಮಾಡಬೇಕು ಅಂತಾ ಎಲ್ಲರಿಗೂ ಆಸೆ ಇದೆ. ಈ ಎಲ್ಲಾ ಕಷ್ಟಗಳು ಕಳೆಯಲಿ ನಂತರ ಒಂದು ದಿನ ಅಂಬೇಡ್ಕರ್ ಜಯಂತಿ ಆಚರಿಸೋಣ ಎಂದರು.
ಕರೋನಾ (Coronavirus) ಕಾರಣದಿಂದ ರಾಜ್ಯದ ರಕ್ತ ನಿಧಿಗಳಲ್ಲಿ ರಕ್ತದ ಕೊರತೆ ಹೆಚ್ಚಾಗುತ್ತಿದೆ. ಈ ಕುರಿತು ವೈದ್ಯರು ಹಾಗೂ ರಕ್ತ ನಿಧಿಗಳ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇನೆ. ಈ ಸಂದರ್ಭದಲ್ಲಿ ನಮ್ಮ ಆರೋಗ್ಯವಂತ ಯುವಕರು, ವಿದ್ಯಾರ್ಥಿಗಳು ರಕ್ತದಾನ ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಆಸ್ಪತ್ರೆಗಳಲ್ಲಿ ರಕ್ತ ಕೊರತೆಯಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ನಾವು ರಕ್ತನಿಧಿಗಳ ಜತೆ ಮಾತನಾಡಿ ಎಲ್ಲೆಲ್ಲಿ ರಕ್ತಧಾನ ಮಾಡಬಹುದು ಎಂಬುದನ್ನು ತಿಳಿಸುತ್ತೇವೆ. ನೀವು ಅಲ್ಲಲ್ಲೇ ರಕ್ತ ದಾನ ಮಾಡಬೇಕು. ಈ ಸಂದರ್ಭದಲ್ಲಿ ರಕ್ತ ನೀಡುವುದು ಕೂಡ ಜವಾಬ್ದಾರಿಯುತ ಕೆಲಸವಾಗಿದೆ. ನಮ್ಮ ವೈದ್ಯ ಘಟಕ ಕೆಪಿಸಿಸಿ ಟಾಸ್ಕ್ ಫೋರ್ಸ್ ವತಿಯಿಂದ ಸಹಾಯವಾಣಿ ಆರಂಭವಾಗಿದೆ. ನೂರಾರು ವೈದ್ಯರು ಕೂಡ ನಿಮಗೆ ಮಾರ್ಗಸೂಚನೆ ನೀಡಲಿದ್ದಾರೆ. ಮಾನವೀಯ ದೃಷ್ಟಿಯಿಂದ ಯುವಕರು ರಕ್ತದಾನ ಮಾಡಬೇಕಾಗಿದೆ ಎಂದು ವಿವರಿಸಿದರು.
'ಸಿಂಧಿಯಾ ನಿರ್ಗಮನದಿಂದ ಕಾಂಗ್ರೆಸ್ ನಾಶವಾಗುವುದಿಲ್ಲ' : ಬಿಜೆಪಿಗೆ ಇತಿಹಾಸ ನೆನಪಿಸಿದ ಡಿಕೆಶಿ
ರಾಜ್ಯದಲ್ಲಿ ಅಶಾಂತಿ ಮೂಡಿಸಲು ಪ್ರಯತ್ನಿಸುತ್ತಿದ್ದು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬೇರೆ ಬೇರೆ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಕುರಿತು ನಮ್ಮ ಕಾರ್ಯಾಧ್ಯಕ್ಷರು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಜತೆ ಸಮಯಾವಕಾಶ ತೆಗೆದುಕೊಂಡು ಈ ವಿಚಾರವಾಗಿ ಚರ್ಚಿಸಲಿದ್ದಾರೆ. ನಮ್ಮ ನಾಯಕರು ಹೇಳಿಕೆ ನೀಡಿದಾಗ ಕೇಸ್ ದಾಖಲಿಸಿ, ಬಂಧನ ಮಾಡಿರಲಿಲ್ಲವೇ? ಈಗ ಈ ವಿಚಾರದಲ್ಲಿ ಯಾಕೆ ಈವರೆಗೂ ಕ್ರಮ ಕೈಗೊಂಡಿಲ್ಲ. ಅನೇಕ ವಿಚಾರಗಳಲ್ಲಿ ಪೊಲೀಸ್ ಅಧಿಕಾರಿಗಳು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದು, ಈ ವಿಚಾರದಲ್ಲಿ ದೂರು ದಾಖಲಿಸಿಕೊಳ್ಳಲು ಸಾಧ್ಯವಿಲ್ಲವೇ? ಆ ಬಗ್ಗೆಯೂ ನಾವು ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದೇವೆ. ಇನ್ನು ಈ ವಿಚಾರವಾಗಿ ಮುಂಜಾಗೃತವಾಗಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇವೆ. ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ನಾವು ಕಾದು ನೋಡುತ್ತೇವೆ. ನಾವು ಸುಮ್ಮನೆ ವಿರೋಧ ಪಕ್ಷದಲ್ಲಿ ಕೂತಿಲ್ಲ. ಈ ರಾಜ್ಯದಲ್ಲಿ ಶಾಂತಿ ಕಾಪಾಡಬೇಕಿರುವುದು ನಮ್ಮೆಲ್ಲರ ಕರ್ತವ್ಯ ಎಂದರು.
COVID-19: 13 ಲಕ್ಷ ಉದ್ಯೋಗಿಗಳನ್ನು ರಕ್ಷಿಸಲು ಪ್ರೋಟೋಕಾಲ್ ಸಿದ್ಧಪಡಿಸಿದ ಭಾರತೀಯ ರೈಲ್ವೆ
ಸರ್ಕಾರ ಎಲ್ಲರ ಜತೆ ಚರ್ಚೆ ಮಾಡುತ್ತಿದೆ. ಹೀಗಾಗಿ ಏ.14ರ ನಂತರದ ಕುರಿತು ಸರ್ಕಾರ ಸದ್ಯದಲ್ಲೇ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ. ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡುತ್ತಿದ್ದೇವೆ. ಇಂದು ಸಂಜೆ ನಮ್ಮ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ನಾವು ನಮ್ಮ ನಾಯಕರ ಜತೆ ಚರ್ಚೆ ಮಾಡಿ ರಾಜ್ಯದ ಪರವಾಗಿ ನಮ್ಮ ಅಭಿಪ್ರಾಯ ತಿಳಿಸಲಿದ್ದೇನೆ. ಆ ಅಭಿಪ್ರಾಯ ಏನು ಎಂಬುದನ್ನು ಈಗ ತಿಳಿಸಲು ಸಾಧ್ಯವಿಲ್ಲ. ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ನಮ್ಮ ಕಾರ್ಯಕರ್ತರು ಏನೆಲ್ಲಾ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸುತ್ತಿದ್ದೇವೆ. ಕಾರ್ಯಕರ್ತರು ತಮ್ಮ ಪ್ರದೇಶಗಳಲ್ಲೇ ಅಗತ್ಯವಿರುವವರಿಗೆ ನೆರವು ನೀಡಬೇಕು ಎಂದು ಇಲ್ಲಿಂದಲೇ ಮನವಿ ಮಾಡುತ್ತೇನೆ. ನಿಮ್ಮನ್ನು ದೂರ ಮಾಡುವ ಪ್ರಶ್ನೆ ಇಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ ನಿಮ್ಮನ್ನು ಬೆಂಗಳೂರಿನಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿರೋಧ ಪಕ್ಷವಾನಿ ನಾವು ಒಳ್ಳೆಯ ಕೆಲಸಗಳಿಗೆ ಸಹಕಾರ ಕೊಡಬೇಕಿದೆ. ನ್ಯೂನ್ಯತೆಗಳನ್ನು ಸರ್ಕಾರದ ಗಮನಕ್ಕೆ ತಂದು ಎಚ್ಚರಿಕೆ ನೀಡಬೇಕಿದೆ. ಈ ನಿಟ್ಟಿನಲ್ಲಿ ನಾವು ಇಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
PPF ಸೇರಿದಂತೆ ಈ ಯೋಜನೆಗಳ ಖಾತೆದಾರರಿಗೆ ದೊಡ್ಡ ಪರಿಹಾರ ಪ್ರಕಟಿಸಿದ ಅಂಚೆ ಇಲಾಖೆ
ಸರ್ಕಾರದ ಹಣದಲ್ಲಿ ನೀಡುವ ಯೋಜನೆಗೆ ಬಿಜೆಪಿ ನಾಯಕರು ಶಾಸಕರು ತಮ್ಮ ಭಾವಚಿತ್ರ ಹಾಕಿಕೊಂಡು ರಾಜಕೀಯ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ನಾನು ಈ ಬಗ್ಗೆ ಫೋಟೋ ಹಾಗೂ ದಾಖಲೆಗಳನ್ನು ನಿಮ್ಮ ಮುಂದೆ ಬಿಡುಗಡೆ ಮಾಡಿದ್ದೇನೆ. ಬಿಜೆಪಿ ನಾಯಕರು ಸರ್ಕಾರದ ವಸ್ತುಗಳ ಮೇಲೆ ತಮ್ಮ ಸ್ಟಿಕ್ಕರ್ ಹಂಟಿಸಿಕೊಳ್ಳುತ್ತಿರುವ ವಿಡಿಯೋ ಇದೆ. ನಾವು ಇದನ್ನು ಪ್ರಶ್ನಿಸಿದ ನಂತರ ಅದನ್ನು ಕಿತ್ತುಹಾಕುತ್ತಿರುವ ವಿಡಿಯೋ ಕೂಡ ಇದೆ. ಸುಮ್ಮನೆ ಯಾರೋ ಹೇಳಿದ್ದನ್ನು ನಾನು ಕೇಳುವುದಿಲ್ಲ. ದಾಖಲೆ ಇಟ್ಟುಕೊಂಡೇ ಮಾತನಾಡುತ್ತಿದ್ದೇನೆ. ಸರ್ಕಾರಿ ಚಿಹ್ನೆ ಇಟ್ಟುಕೊಂಡು ತಮ್ಮ ಭಾವಚಿತ್ರವನ್ನು ಮುದ್ರಿಸಿ ದುರ್ಬಳಕೆ ಮಾಡಿಕೊಳ್ಳುವುದು ಕಾನೂನು ಬಾಹೀರ. ಬಿಜೆಪಿ ನಾಯಕರು ತಮ್ಮ ದುಡ್ಡಿನಲ್ಲಿ ನೀಡುವುದಾದರೆ ಯಾರ ಫೋಟೋ ಬೇಕಾದರೂ ಹಾಕಿಕೊಳ್ಳಲಿ ನಾನು ಅದನ್ನು ಪ್ರಶ್ನಿಸುವುದಿಲ್ಲ. ಸರ್ಕಾರದ ದುಡ್ಡಲ್ಲಿ ಯಾರೂ ಕೂಡ ಸರ್ಕಾರದ ಚಿಹ್ನೆ ಮುದ್ರಿಸಿ ಹಂಚಲು ಸಾಧ್ಯವಿಲ್ಲ. ಅದು ಟ್ಯಾಂಪರಿಂಗ್ ಪ್ರಕರಣವಾಗುತ್ತದೆ. ಅಧಿಕಾರ ದುರುಪಯೋಗ ಮಾಡಿಕೊಂಡು ಅನಧಿಕೃತವಾಗಿ ಸರ್ಕಾರದ ಚಿಹ್ನೆ ಮುದ್ರಿಸಿರುವುದರಿಂದ ಅದನ್ನು ಹಂಚುತ್ತಿರುವವರೆಗೂ ಎಲ್ಲರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ವಾಟ್ಸಾಪ್‌ನಲ್ಲಿ 'ಸುಧಾರಿತ' ಸರ್ಚ್ ಫೀಚರ್, ಚಾಟ್ ಮಾಡುವುದು ಇನ್ನಷ್ಟು ಸುಲಭ
ಸರ್ಕಾರದಲ್ಲಿ ಯಾರನ್ನು ಬೇಕಾದರೂ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿಕೊಳ್ಳಲಿ. ಅದು ಅವರ ವೈಯುಕ್ತಿಕ ವಿಚಾರ, ನಮಗೆ ಬೇಕಿಲ್ಲ. ಅವರ ಪಕ್ಷದಲ್ಲಿ ಯಾರನ್ನಾದರೂ ನೇಮಕ ಮಾಡಿಕೊಳ್ಳಲಿ, ಕಂಪನವನ್ನಾದರೂ ಮಾಡಿಕೊಳ್ಳಲಿ. ನಾವು ಪ್ರತಿಪಕ್ಷವಾಗಿ ಸಲಹೆ ಕೊಡಬಹುದಷ್ಟೇ. ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ ಅಂತ ಮನವಿ ಮಾಡುತ್ತೇನೆ ಎಂದರು.
ರಾಜ್ಯದ ಅನೇಕ ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಮಾಸ್ಕ್, ಮೆಡಿಕಲ್ ಕಿಟ್ ಕೊರತೆ ಇದೆ. ಸದ್ಯ ಮೆಡಿಕಲ್ ಕಿಟ್ ಇರಲಿ ಕೆಲವು ಕಡೆ ಮೂಲಭೂತವಾಗಿ ಬೇಕಾಗಿರುವ ಆಹಾರವೇ ತಲುಪಿಲ್ಲ. ಅನೇಕ ಕಡೆಗಳಲ್ಲಿ ದಿನಸಿ ಪದಾರ್ಥ ಇವತ್ತು ಬರ್ತಿದೆ, ನಾಳೆ ಬರ್ತಿದೆ ಅಂತ ಹೇಳ್ತಿದ್ದಾರೆ. ಇನ್ನು ಮಾಸ್ಕ್, ವೆಂಟಿಲೇಟರ್, ಮೆಡಿಕಲ್ ಕಿಟ್ ಬಗ್ಗೆ ಗೊಂದಲ ಮುಂದುವರಿದಿದೆ. ಪಾಪ ನರ್ಸ್ ಗಳಿಗೆ ರಕ್ಷಣೆ ನೀಡೋದು ಹೇಗೆ, ಪೊಲೀಸರನ್ನ ರಕ್ಷಣೆ ಹೇಗೆ ಮಾಡ್ತಿದ್ದಾರೋ ಗೊತ್ತಿಲ್ಲ ಎಂದರು.