ನವದೆಹಲಿ : ಕಾಲಕಾಲಕ್ಕೆ, ವಾಟ್ಸಾಪ್ (WhatsApp) ಬಳಕೆದಾರರಿಗಾಗಿ ಹೊಸ ನವೀಕರಣಗಳನ್ನು ತರುತ್ತಿದೆ. ಇತ್ತೀಚೆಗೆ ವಾಟ್ಸಾಪ್ ತನ್ನ ಆಂಡ್ರಾಯ್ಡ್ನ ಬೀಟಾ ಆವೃತ್ತಿಗೆ ಹೊಸ ನವೀಕರಣವನ್ನು ಪ್ರಕಟಿಸಿದೆ. ಈ ಹೊಸ ವೈಶಿಷ್ಟ್ಯವನ್ನು ಸುಧಾರಿತ ಹುಡುಕಾಟ ಸಂದೇಶಗಳ ಆಯ್ಕೆ(advanced search messages option)ಯೆಂದು ಹೆಸರಿಸಲಾಗಿದ್ದು ಇದರ ಸಹಾಯದಿಂದ ಮಾಧ್ಯಮ ಫೈಲ್ಗಳನ್ನು ಸುಲಭವಾಗಿ ಹುಡುಕಬಹುದು.
ಬೀಟಾ ಆವೃತ್ತಿಯಲ್ಲಿ ಹೊಸ ನವೀಕರಣ:
ಪ್ರಸ್ತುತ, ಈ ನವೀಕರಣವನ್ನು ವಾಟ್ಸಾಪ್ ಬೀಟಾ ಅಪ್ಲಿಕೇಶನ್ನ ಆಂಡ್ರಾಯ್ಡ್ 2.20.117 ಆವೃತ್ತಿಗೆ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಎಲ್ಲಾ ಆವೃತ್ತಿಗಳ ಬಳಕೆದಾರರು ಈ ಹೊಸ ವೈಶಿಷ್ಟ್ಯವನ್ನು ಆನಂದಿಸುವ ನಿರೀಕ್ಷೆಯಿದೆ. WABetaInfo ಪ್ರಕಾರ ಕಂಪನಿಯು ವೀಡಿಯೊ, ಆಡಿಯೋ ಮತ್ತು ಫೋಟೋಗಳಂತಹ ವಿಭಿನ್ನ ಮಾಧ್ಯಮ ಫೈಲ್ಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಕಲರ್ ಕೋಡಿಂಗ್ ಅನ್ನು ಬಳಸುತ್ತದೆ.
ಗ್ರೂಪ್ ವಿಡಿಯೋ ಕಾಲಿಂಗ್ನಲ್ಲಿ ಮಹತ್ವದ ಬದಲಾವಣೆ ಮಾಡಿದ Whatsapp
ಈ ಬಣ್ಣಗಳ ಬಳಕೆ:
ಈ ಹೊಸ ಅಪ್ಡೇಟ್ನಲ್ಲಿ ಕಂಪನಿಯು ಫೋಟೋಗಳಿಗೆ ಕೆಂಪು ಬಣ್ಣ, ಆಡಿಯೊಗೆ ಸಾಸಿವೆ ಬಣ್ಣ, ಜಿಐಎಫ್ಗಳಿಗೆ (GIFs) ಗುಲಾಬಿ ಬಣ್ಣ ಮತ್ತು ವೀಡಿಯೊಗಳಿಗೆ ನೇರಳೆ ಬಣ್ಣವನ್ನು ಬಳಸುತ್ತದೆ. ಲಿಂಕ್ಗಳನ್ನು ಹಸಿರು ಬಣ್ಣದಲ್ಲಿ ಹೈಲೈಟ್ ಮಾಡಲಾಗುವುದು, ಅದೇ ಸಮಯದಲ್ಲಿ, ಕಂಪನಿಯು ನೀಲಿ ಬಣ್ಣದ ಕೋಡಿಂಗ್ ಸಹಾಯದಿಂದ ದಾಖಲೆಗಳನ್ನು ಹೈಲೈಟ್ ಮಾಡುತ್ತದೆ.
Whatsapp trick: ಯಾರಾದರೂ ನಿಮ್ಮನ್ನು ಬ್ಲಾಕ್ ಲಿಸ್ಟಿನಲ್ಲಿ ಹಾಕಿದ್ದಾರಾ! ಅದನ್ನು ಹೀಗೆ ಪತ್ತೆ ಹಚ್ಚಿ
ಇಂದಿನಿಂದ ಈ ರೀತಿಯಾಗಿ ಫೈಲ್ಗಳನ್ನು ಹುಡುಕಬಹುದು:
ಐಫೋನ್ ಬಳಕೆದಾರರು ಈಗಾಗಲೇ ಈ ವೈಶಿಷ್ಟ್ಯವನ್ನು ಪಡೆದುಕೊಂಡಿದ್ದಾರೆ ಮತ್ತು ಶೀಘ್ರದಲ್ಲೇ ಇದನ್ನು ಆಂಡ್ರಾಯ್ಡ್ ಅಪ್ಲಿಕೇಶನ್ನಲ್ಲಿಯೂ ಸಹ ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಪ್ರಸ್ತುತ ಹುಡುಕಾಟ (search) ಆಯ್ಕೆಯಲ್ಲಿ ನೀವು ಸಂಪರ್ಕಗಳು ಮತ್ತು ಚಾಟ್ಗಳನ್ನು ಮಾತ್ರ ಹುಡುಕಬಹುದು. ಆದರೆ ಬೀಟಾ ಅಪ್ಡೇಟ್ನಲ್ಲಿ advanced search messages option ಮೂಲಕ ಅಪ್ಲಿಕೇಶನ್ನಲ್ಲಿನ ಫೋಟೋಗಳು, ವೀಡಿಯೊಗಳು, ಡಾಕ್ಯುಮೆಂಟ್ಗಳು, ಲಿಂಕ್ಗಳು, ಆಡಿಯೊ ಫೈಲ್ಗಳು ಮತ್ತು ಜಿಐಎಫ್ಗಳನ್ನು ಸಹ ಹುಡುಕಬಹುದು.
COVID-19: ಸರ್ಕಾರ ನಿಮ್ಮ ವಾಟ್ಸಾಪ್ ಸಂದೇಶಗಳನ್ನು ಸ್ಕ್ರೀನಿಂಗ್ ಮಾಡುತ್ತಿದೆಯೇ? ವದಂತಿ ಬಗ್ಗೆ PIB ಟ್ವೀಟ್
ನಕಲಿ ಸುದ್ದಿಗಳನ್ನು ಸಹ ನಿಲ್ಲಿಸಿ:
ಇದಲ್ಲದೆ ಕರೋನಾ ವೈರಸ್ ಬಿಕ್ಕಟ್ಟಿನ ಮಧ್ಯೆ ಸುಳ್ಳು ಸುದ್ದಿ ಅಥವಾ ಮಾಹಿತಿಯ ಹರಡುವಿಕೆಯನ್ನು ತಡೆಗಟ್ಟಲು ವಾಟ್ಸಾಪ್ ಇತ್ತೀಚೆಗೆ ಸಂದೇಶದ ನಿಯಮಗಳನ್ನು ಸಹ ಬದಲಾಯಿಸಿತು. ಇದರ ಅಡಿಯಲ್ಲಿ ಒಂದು ಸಮಯದಲ್ಲಿ ಹೆಚ್ಚಿನ ಬಳಕೆದಾರರಿಗೆ ಅಥವಾ ಗುಂಪಿಗೆ ಸಂದೇಶಗಳನ್ನು ಫಾರ್ವರ್ಡ್ ಮಾಡಲು Whatsapp ಅನುಮತಿಸುವುದಿಲ್ಲ. ವಾಟ್ಸಾಪ್ ತನ್ನ ಬ್ಲಾಗ್ ವಿಭಾಗದಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿತ್ತು. ಕೋವಿಡ್ 19 ಕಾರಣದಿಂದಾಗಿ ದಾರಿತಪ್ಪಿಸುವ ಮಾಹಿತಿಯ ಹರಡುವಿಕೆಯನ್ನು ತಡೆಯಲು ಕಂಪನಿಯು ಈ ಕ್ರಮವನ್ನು ಕೈಗೊಂಡಿದೆ. ಇದನ್ನು ಪ್ರಪಂಚದಾದ್ಯಂತ ಜಾರಿಗೆ ತರಲಾಗುತ್ತಿದೆ ಎಂದು ವಾಟ್ಸಾಪ್ ಹೇಳಿದೆ.