'ಸಿಂಧಿಯಾ ನಿರ್ಗಮನದಿಂದ ಕಾಂಗ್ರೆಸ್ ನಾಶವಾಗುವುದಿಲ್ಲ' : ಬಿಜೆಪಿಗೆ ಇತಿಹಾಸ ನೆನಪಿಸಿದ ಡಿಕೆಶಿ

ಮಧ್ಯಪ್ರದೇಶದ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ನೂತನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಾಯಕರು ಬರಬಹುದು ಮತ್ತು ನಾಯಕರು ಹೋಗಬಹುದು ಆದರೆ ಅದು ಪಕ್ಷಕ್ಕೆ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದು ಹೇಳಿದರು.ಪಕ್ಷದಲ್ಲಿನ ಆಂತರಿಕ ಸಮಸ್ಯೆಗಳನ್ನು ನಿವರಿಸುವುದರ ಮೂಲಕ ಪಕ್ಷ ಪುಟಿದೇಳುತ್ತದೆ ಎಂದು ಡಿಕೆಶಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

Last Updated : Mar 11, 2020, 09:21 PM IST
 'ಸಿಂಧಿಯಾ ನಿರ್ಗಮನದಿಂದ ಕಾಂಗ್ರೆಸ್ ನಾಶವಾಗುವುದಿಲ್ಲ' : ಬಿಜೆಪಿಗೆ ಇತಿಹಾಸ ನೆನಪಿಸಿದ ಡಿಕೆಶಿ title=

ಬೆಂಗಳೂರು: ಮಧ್ಯಪ್ರದೇಶದ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ನೂತನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಾಯಕರು ಬರಬಹುದು ಮತ್ತು ನಾಯಕರು ಹೋಗಬಹುದು ಆದರೆ ಅದು ಪಕ್ಷಕ್ಕೆ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದು ಹೇಳಿದರು.ಪಕ್ಷದಲ್ಲಿನ ಆಂತರಿಕ ಸಮಸ್ಯೆಗಳನ್ನು ನಿವರಿಸುವುದರ ಮೂಲಕ ಪಕ್ಷ ಪುಟಿದೇಳುತ್ತದೆ ಎಂದು ಡಿಕೆಶಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

'ಕಾಂಗ್ರೆಸ್ ಪಕ್ಷವನ್ನು ಯಾರೂ ನಾಶಮಾಡಲು ಸಾಧ್ಯವಿಲ್ಲ. ನಮಗೆ ನಮ್ಮದೇ ಆದ ಇತಿಹಾಸವಿದೆ. ನಾಯಕರು ಬರಬಹುದು, ನಾಯಕರು ಹೋಗಬಹುದು. ಅದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ನಾವು ಒಂದು ಸಿದ್ಧಾಂತ. ನಾನು ರಾಜಕೀಯಕ್ಕೆ ಸೇರಿದಾಗ, ಬಿಜೆಪಿಗೆ ಸಂಸತ್ತಿನಲ್ಲಿ ಕೇವಲ ಇಬ್ಬರು ಜನರಿದ್ದರು, ಅಡ್ವಾಣಿ ಜಿ ಮತ್ತು ವಾಜಪೇಯಿ ಜಿ. ಈಗ ಅವರಿಗೆ ದೊಡ್ಡ ಸಂಖ್ಯೆಯಿದೆ. ಆದ್ದರಿಂದ ನಾವು ಹಿಂತಿರುಗುತ್ತೇವೆ ಎಂಬ ವಿಶ್ವಾಸವಿದೆ. ಇಲ್ಲಿರುವ ಎಲ್ಲ ಶಾಸಕರು (ಮಧ್ಯಪ್ರದೇಶ) ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಇದನ್ನು ಶಾಸಕರು ಅರ್ಥಮಾಡಿಕೊಳ್ಳುತ್ತಾರೆ ಎಂದು ನನಗೆ ಖಾತ್ರಿಯಿದೆ, ಎಂದು ಡಿ.ಕೆ.ಶಿವಕುಮಾರ್ ಸುದ್ದಿ ಸಂಸ್ಥೆ ಎಎನ್‌ಐಗೆ ಹೇಳಿದರು.

ಇನ್ನೊಂದೆಡೆಗೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್  ಮಧ್ಯಪ್ರದೇಶದ 22 ಬಂಡಾಯ ಶಾಸಕರಲ್ಲಿ 13 ಮಂದಿ ಅವರು ಕಾಂಗ್ರೆಸ್ ತೊರೆಯುತ್ತಿಲ್ಲ ಎಂದು ಭರವಸೆ ನೀಡಿದ್ದಾರೆ, ರಾಜ್ಯದ ಕಮಲ್ ನಾಥ್ ನೇತೃತ್ವದ ಸರ್ಕಾರವು ಸದನದ ಅಗ್ನಿ ಪರೀಕ್ಷೆಯಲ್ಲಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾವು ಸುಮ್ಮನಿರುವುದಿಲ್ಲ, ನಾವು ನಿದ್ದೆ ಮಾಡುತ್ತಿಲ್ಲ ಎಂದು ಸಿಂಗ್ ಪಿಟಿಐಗೆ ತಿಳಿಸಿದರು.

ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ತೊರೆದಿದ್ದರಿಂದಾಗಿ 15 ತಿಂಗಳ ಕಮಲ್ ನಾಥ್ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಮಂಗಳವಾರ ಬೆಳಿಗ್ಗೆ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಭೇಟಿಯಾದ ಬೆನ್ನಲ್ಲೇ ಅಚ್ಚರಿಯ ಬೆಳವಣಿಗೆ ಕಂಡುಬಂದಿದೆ.

 

Trending News