ಚಿತ್ರದುರ್ಗ : ಮುರುಘಾಶ್ರೀಗಳು ಫೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದು. ಹೀಗಾಗಿ, ಮುರುಘಾ ಮಠದ ಪೀಠ ತ್ಯಾಗಕ್ಕೆ  ತುಂಬಾ ಒತ್ತಡ ಹೆಚ್ಚಾಗಿದೆ. ಇದರ ಮಧ್ಯ ಮಾಜಿ ಸಚಿವೆ ರಾಣಿ ಸತೀಶ ಸಂಭಾಷಣೆಯ ಆಡಿಯೋ ಒಂದು ಭಾರಿ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಆಡಿಯೋ ಸಂಭಾಷಣೆಯಲ್ಲಿ ಏನಿದೆ?


 ಆಡಿಯೋದಲ್ಲಿ ಮಾಜಿ ಸಚಿವೆ ರಾಣಿ ಸತೀಶ್ ಅವರು ಚಿತ್ರದುರ್ಗ ವೀರಶೈವ ಮಹಾಸಭಾದ ಜಿಲ್ಲಾದ್ಯಕ್ಷ ಮಹಡಿ ಶಿವಮೂರ್ತಿ‌ ಜತೆ ಮಾತಾಡಿದ್ದಾರೆ.


ಇದನ್ನೂ ಓದಿ : Mandya MP : ಎಂಪಿ ಅಂದ್ರೆ ಅಧಿಕಾರಿಗಳಿಗೆ ಲೆಕ್ಕಾ ಇಲ್ಲ : ಕಿಡಿಕಾರಿದ ಸಂಸದೆ ಸುಮಲತಾ


ಎಬ್ಬರನಡುವಿನ ಸಂಭಾಷಣೆ ಹೀಗೆದೆ, ಮುರುಘಾಶ್ರೀ ಪೀಠ ತ್ಯಾಗಕ್ಕೆ ವೀರಶೈವ ಮಹಾಸಭಾ ಒತ್ತಡ ಹೇರಬೇಕು. ಎಂಬಿ ಪಾಟೀಲ್, ಈಶ್ವರ ಖಂಡ್ರೆ, ಶಾಮನೂರು ಶಂಕರಪ್ಪ ಅಂಥವರು ವಿರೋಧಿಸಬೇಕು. 


ಮುರುಘಾಶ್ರೀ ಪ್ರಕರಣದಿಂದ  ಸಮಾಜ ತಲೆತಗ್ಗಿಸುವ ಸ್ಥಿತಿ ಎದುರಾಗಿದೆ. ಸೈಲೆಂಟಾಗಿದ್ದರೆ ವೀರಶೈವರಿಂದ ಮಠ ಕೈತಪ್ಪುವ ಸಾಧ್ಯತೆ ಇದೆ. ಮುರುಘಾಶ್ರೀ ಭಂಡ, ನಿರ್ಲಜ್ಜ ಮನೋಭಾವದವನು. 


ವೀರಶೈವ ಮಹಾಸಭಾ ಈವರೆಗೆ ಯಾಕೆ ಮೌನವಾಗಿದೆ ಗೊತ್ತಿಲ್ಲ. ಶಾಮನೂರು ದುಡ್ಡು ಮುರುಘಾಶ್ರೀ ಬಳಿಯಿದೆ ಎಂದು ಜನ ಮಾತಾಡ್ತಾರೆ. ಇನ್ನೇನು ಹುಳುಕಿದೆಯೋ ಮುಚ್ಚಿ ಹಾಕಲು ಬಸವಪ್ರಭು ಶ್ರೀ ನೇಮಕ ನೇಮಕ ಮಾಡಿದ್ದಾರೆ.


ಬಿಎಸ್​ವೈ ಅವರದ್ದೂ ಮಠದಲ್ಲಿ ಹಣವಿದೆಯಂತೆ. ಏಕೆ ಮೌನವಾಗಿದ್ದೀರಿ ಎಂದು ಎಂಬಿ ಪಾಟೀಲ್ ಗೆ ನಾನು ಕೇಳಿದ್ದೇನೆ ಎಂದು ಆಡಿಯೋದಲ್ಲಿ ಮಾತನಾಡಿದ್ದಾರೆ.  


ಇದನ್ನೂ ಓದಿ : SSLC ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ : ನಿಮಗೆ 100 ದಿನ ಉಚಿತ ಕೋಚಿಂಗ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.