ದೀಪಾವಳಿ ಸಂದರ್ಭ ನಿಲ್ದಾಣದಲ್ಲಿ ಜನದಟ್ಟಣೆ ತಡೆಯಲುಕ್ರಮ : ಪ್ಲಾಟ್‌ಪಾರಂ ಟಿಕೆಟ್ ದರ ಹೆಚ್ಚಳ

ರೈಲ್ವೆ ಪ್ರಯಾಣಿಕರಿಗೆ ಪ್ಲಾಟ್‌ಫಾರಂಗಳಲ್ಲಿ ಓಡಾಟಕ್ಕೆ ಮುಕ್ತ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪ್ಲಾಟ್‌ಫಾರಂ ಟಿಕೆಟ್ ದರವನ್ನು ತಾತ್ಕಾಲಿಕವಾಗಿ ಹೆಚ್ಚಿಸಲಾಗಿದೆ ಎಂದು ರೈಲ್ವೆಯು ಇಲಾಖೆ ತಿಳಿಸಿದೆ.

Written by - Ranjitha R K | Last Updated : Oct 18, 2022, 03:56 PM IST
  • ಪ್ಲಾಟ್‌ಫಾರಂ ಟಿಕೆಟ್ ದರ ಹೆಚ್ಚಳ
  • ಪ್ಲಾಟ್‌ಫಾರಂ ಟಿಕೆಟ್ ದರವು 20 ರೂಪಾಯಿಗೆ ಏರಿಕೆ
  • ರೈಲ್ವೆ ನಿರ್ಧಾರಕ್ಕೆ ಸಾರ್ವಜನಿಕರ ಆಕ್ರೋಶ
ದೀಪಾವಳಿ ಸಂದರ್ಭ ನಿಲ್ದಾಣದಲ್ಲಿ ಜನದಟ್ಟಣೆ  ತಡೆಯಲುಕ್ರಮ  :  ಪ್ಲಾಟ್‌ಪಾರಂ ಟಿಕೆಟ್ ದರ ಹೆಚ್ಚಳ  title=
Railway platform ticket price

ಹುಬ್ಬಳ್ಳಿ : ನಗರದ ಶ್ರೀ ಸಿದ್ಧಾರೂಢ  ರೈಲು ನಿಲ್ದಾಣದಲ್ಲಿ ಜನದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು,  ಪ್ಲಾಟ್‌ಫಾರಂ ಟಿಕೆಟ್ ದರವನ್ನು ಹೆಚ್ಚಿಸಿದೆ.  ರೈಲು ನಿಲ್ದಾಣಗಳಲ್ಲಿ  ಪ್ಲಾಟ್‌ಫಾರಂ ಟಿಕೆಟ್ ದರವನ್ನು ತಾತ್ಕಾಲಿಕವಾಗಿ 10 ರೂಪಾಯಿಯಷ್ಟು ಹೆಚ್ಚಿಸಿದೆ. ಇದರೊಂದಿಗೆ ಪ್ಲಾಟ್‌ಫಾರಂ ಟಿಕೆಟ್ ದರವು 20 ರೂಪಾಯಿಗೆ ಏರಿಕೆಯಾಗಿದೆ. ರೈಲ್ವೆ ಪ್ರಯಾಣಿಕರಿಗೆ ಪ್ಲಾಟ್‌ಫಾರಂಗಳಲ್ಲಿ ಓಡಾಟಕ್ಕೆ ಮುಕ್ತ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪ್ಲಾಟ್‌ಫಾರಂ ಟಿಕೆಟ್ ದರವನ್ನು ತಾತ್ಕಾಲಿಕವಾಗಿ ಹೆಚ್ಚಿಸಲಾಗಿದೆ ಎಂದು ರೈಲ್ವೆಯು ಇಲಾಖೆ ತಿಳಿಸಿದೆ. ಈ ಮೂಲಕ ತಮ್ಮ ಕುಟುಂಬದವರು ಹಾಗೂ ಪ್ರೀತಿ–ಪಾತ್ರರನ್ನು ಕಳುಹಿಸಿ ಕೊಡಲು ರೈಲು ನಿಲ್ದಾಣಕ್ಕೆ ಬರುವವರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಈ ಹಿನ್ನೆಲೆಯಲ್ಲಿ ರೈಲ್ವೆಯ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. 

ಹುಬ್ಬಳ್ಳಿಯ ಶ್ರೀ ಸಿದ್ಧಾರೂಡ ನೈರುತ್ಯ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ ಫಾರಂ ಟಿಕೆಟ್  ದರ ಹೆಚ್ಚಳದಿಂದ ಪ್ರಯಾಣಿಕರ ಜೇಬಿಗೆ ಕತ್ತರಿ  ಬಿದ್ದಿದೆ. ಪ್ರಯಾಣಿಕರು ಅಥವಾ ಜನರು ರೈಲು ನಿಲ್ದಾಣಕ್ಕೆ ಹೆಚ್ಚಾಗಿ ಬಂದರೆ ರೈಲ್ವೆಯ ಆದಾಯ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ದರ ಹೆಚ್ಚಿಸುವ ಬದಲು ಕಡಿಮೆ ಮಾಡಬೇಕು. ಹಾಗಾಗಿ ನೈರುತ್ಯ ರೈಲ್ವೆಯವರು ಕೈಗೊಂಡಿರುವ ಈ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. 

ಇದನ್ನೂ ಓದಿ : Mandya MP : ಎಂಪಿ ಅಂದ್ರೆ ಅಧಿಕಾರಿಗಳಿಗೆ ಲೆಕ್ಕಾ ಇಲ್ಲ : ಕಿಡಿಕಾರಿದ ಸಂಸದೆ ಸುಮಲತಾ

ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಮನಬಂದಂತೆ ಪ್ಲಾಟ್‌ಫಾರಂ ಟಿಕೆಟ್ ದರವನ್ನು ಯಾವ ಆಧಾರದಲ್ಲಿ ಹೆಚ್ಚಿಸಿರುವುದು ಸರಿಯಲ್ಲ ಎಂಬ ಮಾತು ಕೇಳಿ ಬಂದಿದೆ. ಇಡೀ ಭಾರತಕ್ಕೆ ಒಂದು ನಿಯಮವಾದರೆ, ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗಕ್ಕೆ ಬೇರೆ ನಿಯಮವಿದೆಯೇ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ‌

ಆದರೆ, ಯಾವುದೇ ರೀತಿಯ ಲಾಭಕ್ಕಾಗಿ ರೈಲ್ವೆ ಪ್ಲಾಟ್ ಫಾರಂದರ ಏರಿಕೆ ಮಾಡಿಲ್ಲ. ಬದಲಾಗಿ ಜನದಟ್ಟಣೆಯಿಂದ  ಪ್ರಯಾಣಕರಿಗೆ ತೊಂದರೆ ಆಗಬಾರದು  ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ರೀ ಸಿದ್ಧಾರೂಢ ರೈಲ್ವೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಷ ಹೆಗಡೆ ತಿಳಿಸಿದ್ದಾರೆ. 

 

ಇದನ್ನೂ ಓದಿ : ನಿಯಂತ್ರಣ ತಪ್ಪಿ ಅಪಘಾತ , ರಸ್ತೆ ಮಧ್ಯೆ ಧಗ ಧಗನೆ ಹೊತ್ತಿ ಉರಿದ ಟ್ಯಾಂಕರ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News