Mandya MP : ಎಂಪಿ ಅಂದ್ರೆ ಅಧಿಕಾರಿಗಳಿಗೆ ಲೆಕ್ಕಾ ಇಲ್ಲ : ಕಿಡಿಕಾರಿದ ಸಂಸದೆ ಸುಮಲತಾ

ಎಂಪಿ ಅಂದ್ರೆ ಅಧಿಕಾರಿಗಳಿಗೆ ಲೆಕ್ಕಾ ಇಲ್ಲ. ಅಧಿಕಾರಿಗಳು ಸರಿಯಾಗಿ ಬರ್ತಿಲ್ಲ, ಗೌರವ ಕೊಡ್ತಿಲ್ಲ. ಮೂರು ತಿಂಗಳಲ್ಲಿ ಕೂಡ ಹಾಗಲ್ಲ. ಕಮಿಷನ್ ಯಾರ್ ಯಾರಿಗೆ ತಲುಪಬೇಕೊ ಗೊತ್ತಿಲ್ಲ.

Written by - Channabasava A Kashinakunti | Last Updated : Oct 18, 2022, 03:31 PM IST
  • ಎಂಪಿ ಅಂದ್ರೆ ಅಧಿಕಾರಿಗಳಿಗೆ ಲೆಕ್ಕಾ ಇಲ್ಲ
  • ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ದ ಕಿಡಿಕಾರಿದ ಸಂಸದೆ ಸುಮಲತಾ
  • ಬಾರಿ ಮಳೆಗೆ ಜಮೀನಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ
Mandya  MP : ಎಂಪಿ ಅಂದ್ರೆ ಅಧಿಕಾರಿಗಳಿಗೆ ಲೆಕ್ಕಾ ಇಲ್ಲ : ಕಿಡಿಕಾರಿದ ಸಂಸದೆ ಸುಮಲತಾ title=

ಮಂಡ್ಯ : ಎಂಪಿ ಅಂದ್ರೆ ಅಧಿಕಾರಿಗಳಿಗೆ ಲೆಕ್ಕಾ ಇಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ದ ಸಂಸದೆ ಸುಮಲತಾ ಕಿಡಿಕಾರಿದ್ದಾರೆ.

ಜಿಲ್ಲೆಯ ಬೂದನೂರು ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಸದೆ ಸುಮಲತಾ, ಬಾರಿ ಮಳೆಗೆ ಜಮೀನಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಜನ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಕಳೆದ ಬಾರಿಯೂ ಸಹ ಪರಿಶೀಲನೆ ನಡೆಸಲಾಗಿತ್ತು. ಸಮಸ್ಯೆ ಬಗಹರಿಸುವ ಬಗ್ಗೆ ಸೂಚನೆ ಕೊಡಲಾಗಿತ್ತು. ಈವರೆಗೂ ಏನು ಮಾಡಿಲ್ಲ, ಮತ್ತೆ ಯಡವಟ್ಟು ಆಗಿದೆ. ಬೇಜವಾಬ್ದಾರಿ ಅಧಿಕಾರಿಗಳ ಜೊತೆ ಹೋರಾಟ ಮಾಡಿ ಸಾಕಾಗಿದೆ. ಲೆಟರ್ ಕೂಡ ಬರೆದಿದ್ದೇನೆ, ಯಾವ ಸ್ಪಂದಿನೆ ಇಲ್ಲ. ಯಾವ ಅಧಿಕಾರಿ ಬಂದಿಲ್ಲ, ಯಾರನ್ನೋ ಕಳುಹಿಸಿದ್ದಾರೆ. ಮಿನಿಸ್ಟರ್ ಬಂದರೆ ಮಾತ್ರ ಕಾಟಚಾರಕ್ಕೆ ಅಧಿಕಾರಿಗಳು ಬರ್ತಾರೆ. ಅಪ್ರುವಲ್ ಗೆ ಕಳುಹಿಸಿದ್ದೇವೆ ಎಂದು ಬರಿ ನೆಪ ಹೇಳ್ತಾರೆ. ನಮ್ಮ ಕರ್ತವ್ಯ ಮಾಡ್ತಿದ್ದೇವೆ, ಮುಂದೆ ಜನ ರೊಚ್ಚಿಗೆಳ್ತಾರೆ. ರೈತರು ಬೆಸತ್ತಿ ಹೋಗಿದ್ದಾರೆ. ಮಳೆ ಬಂದರೆ ಸಂಕಷ್ಟ ಅನುಭವಿಸುತ್ತಿರುವರು ರೈತರು. ಸಾವಿರಾರು ಕೋಟಿ ಕಾಮಗಾರಿ ಈ ಗತಿಯಾಗಿದೆ. ಸಿಎಂ ಜೊತೆ ಚರ್ಚಿಸಿ ಪತ್ರ ಕೊಟ್ಟಿದ್ದೇನೆ.ಸಭೆ ಕರೆದು ಸೂಚನೆ ಕೊಡುವುದಾಗಿ  ತಿಳಿಸಿದ್ದಾರೆ ಎಂದರು.

ಇದನ್ನೂ ಓದಿ : AICC ಅಧ್ಯಕ್ಷರಾದರೆ ಖರ್ಗೆಗೆ ಕೆಪಿಸಿಸಿಯದ್ದೇ  ಮೊದಲ ದೊಡ್ಡ ಸವಾಲು!

ಇನ್ನೂ ಮುಂದುವರೆದು ಮಾತನಾಡಿದ ಅವರು, ಎಂಪಿ ಅಂದ್ರೆ ಅಧಿಕಾರಿಗಳಿಗೆ ಲೆಕ್ಕಾ ಇಲ್ಲ. ಅಧಿಕಾರಿಗಳು ಸರಿಯಾಗಿ ಬರ್ತಿಲ್ಲ, ಗೌರವ ಕೊಡ್ತಿಲ್ಲ. ಮೂರು ತಿಂಗಳಲ್ಲಿ ಕೂಡ ಹಾಗಲ್ಲ.
ಕಮಿಷನ್ ಯಾರ್ ಯಾರಿಗೆ ತಲುಪಬೇಕೊ ಗೊತ್ತಿಲ್ಲ. ಅವೈಜ್ಞಾನಿಕ ಕೆಲಸ ಇದು.  ಮಂಡ್ಯ ಜನಕ್ಕೆ ಅನುಕೂಲವಾಗುತ್ತೆ ಅನ್ಕೊಂಡಿದ್ದೆ. ನನಗೆ ಹುಚ್ಚು ಅನ್ಕೊಂಡಿದ್ರು, ಅವೈಜ್ಞಾನಿಕದ ಬಗ್ಗೆ ಮಾತನಾಡಿದ್ದೆ. ಮೊದಲೇ ಕ್ರಮ ತೆಗೆದುಕೊಂಡಿದ್ರೆ, ಸಮಸ್ಯೆ ಆಗುತ್ತಿರಲಿಲ್ಲ. ಶಾಲಾ ಮಕ್ಕಳಿಗೆ ತೊಂದರೆಯಾಗ್ತಿದೆ, ಎಂಟ್ರಿ, ಎಕ್ಸಿಟ್, ಪುಟ್ಟಪಾತ್, ಸರ್ವಿಸ್ ರೋಡ್ ಮಾಡಿಲ್ಲ. ಅವೈಜ್ಞಾನಿಕ ವಾಗಿದೆ ಹೆದ್ದಾರಿ ಕಾಮಗಾರಿ. ಹೆದ್ದಾರಿ ಮೈಸೂರು, ಬೆಂಗಳೂರಿನವರಿಗೆ ಮಾತ್ರನಾ, ಉಳಿದವರ ಗತಿ ಏನು? ಎಂದು ಪ್ರಶ್ನಿಸಿ ಗುಡುಗಿದ್ದಾರೆ.

ಇದನ್ನೂ ಓದಿ : ನಿಯಂತ್ರಣ ತಪ್ಪಿ ಅಪಘಾತ , ರಸ್ತೆ ಮಧ್ಯೆ ಧಗ ಧಗನೆ ಹೊತ್ತಿ ಉರಿದ ಟ್ಯಾಂಕರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News