SSLC ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ : ನಿಮಗೆ 100 ದಿನ ಉಚಿತ ಕೋಚಿಂಗ್!

'ಜ್ಞಾನಯಜ್ಞ' ಯೋಜನೆಯಡಿ ಕಬೀರ್ ಟ್ರಸ್ಟ್ ವತಿಯಿಂದ 100 ದಿನಗಳ ಉಚಿತ ಎಸ್‌ಎಸ್‌ಎಲ್‌ಸಿ ತರಬೇತಿ ನೀಡಲಾಗುವುದು.

Written by - Channabasava A Kashinakunti | Last Updated : Oct 18, 2022, 04:50 PM IST
  • ಬಡ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ
  • ಜ್ಞಾನಯಜ್ಞ ಯೋಜನೆಯಡಿ 100 ದಿನಗಳ ಉಚಿತ ತರಬೇತಿ
  • ಅಕ್ಟೋಬರ್ 30 ರಿಂದ ಉಚಿತ ತರಬೇತಿ ಪ್ರಾರಂಭ
SSLC ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ : ನಿಮಗೆ 100 ದಿನ ಉಚಿತ ಕೋಚಿಂಗ್! title=

ಬೆಂಗಳೂರು : ನಗರ ಕಬೀರ್ ಟ್ರಸ್ಟ್ ಎಂಬ ಸಂಸ್ಧೆಯುವು ಅಕ್ಟೋಬರ್ 30 ರಂದು ಉತ್ತರ ಬೆಂಗಳೂರಿನ ಬಡ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಜ್ಞಾನಯಜ್ಞ ಯೋಜನೆಯಡಿ 100 ದಿನಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ ಎಂದು ತಿಳಿಸಿದೆ.

ಜೆಸಿ ನಗರದ ಮೋತಿನಗರದ ಕಬೀರ್ ಆಶ್ರಮದಲ್ಲಿ ಪ್ರತಿದಿನ ಸಂಜೆ 6.30ರಿಂದ ತರಗತಿಗಳು ಪ್ರಾರಂಭವಗಳಿವೆ ಎಂದು ಕಬೀರ್ ಟ್ರಸ್ಟ್ ನ ಅಧ್ಯಕ್ಷ ಟಿ.ಪ್ರಭಾಕರ್ ತಿಳಿಸಿದ್ದಾರೆ.

ಇದನ್ನೂ ಓದಿ : ದೀಪಾವಳಿ ಸಂದರ್ಭ ನಿಲ್ದಾಣದಲ್ಲಿ ಜನದಟ್ಟಣೆ ತಡೆಯಲುಕ್ರಮ : ಪ್ಲಾಟ್‌ಪಾರಂ ಟಿಕೆಟ್ ದರ ಹೆಚ್ಚಳ

ಅರ್ಜಿ ನಮೂನೆಗಳನ್ನು ಐ-ಟೆಕ್ ಇನ್‌ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ಸ್, ಕಬೀರ್ ಆಶ್ರಮದಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಸಂಗ್ರಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9845193425 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

100 ದಿನಗಳ ಉಚಿತ ತರಬೇತಿ

'ಜ್ಞಾನಯಜ್ಞ' ಯೋಜನೆಯಡಿ ಕಬೀರ್ ಟ್ರಸ್ಟ್ ವತಿಯಿಂದ 100 ದಿನಗಳ ಉಚಿತ ಎಸ್‌ಎಸ್‌ಎಲ್‌ಸಿ ತರಬೇತಿ ನೀಡಲಾಗುವುದು.

ತರಬೇತಿ ಎಲ್ಲಿ?

ಬೆಂಗಳೂರಿನ ಜೆ.ಸಿ.ನಗರ ಸಮೀಪದ ಮೋತಿನಗರದ ಕಬೀರ್ ಆಶ್ರಮದಲ್ಲಿ ಸಂಜೆ 6.30ಕ್ಕೆ ತರಬೇತಿ ಆರಂಭವಾಗಲಿದೆ.

ಈ ದಿನಾಂಕದಂದು ಪ್ರಾರಂಭ

ಅಕ್ಟೋಬರ್ 30ರಿಂದ ಉಚಿತ ಕೋಚಿಂಗ್ ತರಬೇತಿ ಆರಂಭವಾಗಲಿದ್ದು, 100 ದಿನಗಳ ಕಾಲ ನಡೆಯಲಿದೆ.

ಹೀಗೆ ಅರ್ಜಿ ಸಲ್ಲಿಸಿ 

ಆಸಕ್ತ ವಿದ್ಯಾರ್ಥಿಗಳು ಐಟೆಕ್ ಇನ್‌ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ಸ್, ಕಬೀರ್ ಆಶ್ರಮದಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ : Mandya MP : ಎಂಪಿ ಅಂದ್ರೆ ಅಧಿಕಾರಿಗಳಿಗೆ ಲೆಕ್ಕಾ ಇಲ್ಲ : ಕಿಡಿಕಾರಿದ ಸಂಸದೆ ಸುಮಲತಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News