ಬೆಂಗಳೂರು : ಹನಿಹನಿ ನೀರಿಗೂ ಪರಿತಪಿಸುವ ರಾಜಧಾನಿ ಬೆಂಗಳೂರಿನ ಜನ ತಮಗೇ ಗೊತ್ತಿಲ್ಲದೆ ವಿಷಯುಕ್ತ ನೀರು ಸೇವಿಸುವಂತಾಗಿದೆ‌. ಅದರಲ್ಲೂ ಕಾವೇರಿ ನೀರಿನ ಸಂಪರ್ಕ ಕಾಣದ ಬೆಂಗಳೂರು ಹೊರವಲಯ ಆನೇಕಲ್ ಸುತ್ತಮುತ್ತಲ ಭಾಗದ ಜನರು ದೊಡ್ಡ ಗಂಡಾಂತರಕ್ಕೆ ಸಿಲುಕಿದ್ದಾರೆ. ಕಾರ್ಖಾನೆಗಳ ವಿಷನೀರು ಜನರ ಜೀವಕ್ಕೆ ಕುತ್ತು ತರುತ್ತಿದೆ.


COMMERCIAL BREAK
SCROLL TO CONTINUE READING

ಆನೇಕಲ್(Anekal) ತಾಲೂಕಿಗೆ ಐತಿಹಾಸಿಕ ಹಿನ್ನೆಲೆ ಇದೆ. ಒಂದು ಕಾಲದಲ್ಲಿ ಆನೇಕಲ್ ರಾಗಿಯ ಕಣಜವಾಗಿತ್ತು. ಹಾಗೇ ಇಲ್ಲಿನ ಕೆರೆಗಳು ನೂರಾರು ವರ್ಷಗಳಿಂದ ಸ್ಥಳೀಯರ ದಾಹ ನೀಗಿಸುವ ಜೊತೆಗೆ ಕೃಷಿಗೂ ಬೆನ್ನೆಲುಬಾಗಿ ನಿಂತಿದ್ದವು. ಆದರೆ ಕಳೆದ 20-25 ವರ್ಷದಲ್ಲಿ ಎಲ್ಲವೂ ಹಾಳಾಗಿ ಹೋಗಿದೆ. ಆನೇಕಲ್ ತಾಲೂಕಿನ ಕೆರೆಗಳನ್ನು ಸ್ಥಳೀಯ ಕಾರ್ಖಾನೆಗಳು ಹಾಳು ಮಾಡಿವೆ. ಕಾರ್ಖಾನೆಗಳ ರಾಸಾಯನಿಕ ನೀರನ್ನು ಫಿಲ್ಟರ್ ಮಾಡದೇ ನೇರವಾಗಿ ಕೆರೆಗಳಿಗೆ ಬಿಡಲಾಗುತ್ತಿದೆ‌. ಹೀಗಾಗಿ ಬೆಂಗಳೂರು ಹೊರವಲಯದ ನಿವಾಸಿಗಳು ಇದೇ ವಿಷನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.


ಇದನ್ನೂ ಓದಿ : Bengaluru Road accident:ತಿಂಗಳೊಂದಕ್ಕೆ ಸಂಭವಿಸುತ್ತವೆ ಸರಾಸರಿ 5,000 ರಸ್ತೆ ಅಪಘಾತಗಳು, ಕಾರಣ.!?


ಕೆರೆಗೆ ಸೇರುತ್ತಿದೆ 'ವಿಷ'


ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ಜಿಗಣಿ ಕೈಗಾರಿಕಾ ಪ್ರದೇಶ(Jigani Industrial Area), ವೀರಸಂದ್ರ ಕೈಗಾರಿಕಾ ಪ್ರದೇಶ, ಅತ್ತಿಬೆಲೆ ಕೈಗಾರಿಕಾ ಪ್ರದೇಶ ಸೇರಿದಂತೆ ಹಲವು ಭಾಗಗಳಲ್ಲಿ ಸಾವಿರಾರು ಕಾರ್ಖಾನೆಗಳು ಸ್ಥಾಪನೆಯಾಗಿವೆ. ಆದರೆ ಇದೇ ಕಾರ್ಖಾನೆಗಳು ಅಕ್ಕಪಕ್ಕದ ಕೆರೆಗಳಿಗೆ ಕೆಮಿಕಲ್ ನೀರು ಬಿಡುತ್ತಾ ನೂರಾರು ಕೆರೆಗಳನ್ನು ಬಲಿ ಪಡೆದಿವೆ. ಹೀಗೆ ಕೆರೆಗಳಿಗೆ ನೇರವಾಗಿ ಸೇರುತ್ತಿರುವ ಕೆಮಿಕಲ್ಸ್, ಆನೇಕಲ್ ತಾಲೂಕು ಸೇರಿದಂತೆ ಸುತ್ತಮುತ್ತಲ ಭಾಗದ ಅಂತರ್ಜಲವನ್ನೇ ವಿಷ ಮಾಡಿವೆ.


ಸ್ನಾನ ಮಾಡಿದರೆ ಕೂದಲು ಇರಲ್ಲ


ಆನೇಕಲ್ ಸುತ್ತಮುತ್ತಲಿನ ಅಂತರ್ಜಲ ಅದೆಷ್ಟು ಹಾಳಾಗಿದೆ ಎಂದರೆ, ಇಲ್ಲಿನ ಬೋರ್ ವೆಲ್ ನೀರನ್ನು(Borewell Water) ಕುಡಿಯೋದು ಬಿಡಿ ಬಳಸುವುದಕ್ಕೂ ಯೋಗ್ಯವಾಗಿಲ್ಲ. ಇಲ್ಲಿನ ನೀರಲ್ಲಿ ಸ್ನಾನ ಮಾಡಿದರೆ ಚರ್ಮ ರೋಗಗಳು ವಕ್ಕರಿಸೋದು ಗ್ಯಾರಂಟಿ‌. ಹಾಗೇ ತಲೆ ಕೂದಲು ಖಾಲಿ ಆಗೋದು ಪಕ್ಕಾ.


ಇದನ್ನೂ ಓದಿ : Smoking in Public Place: 'ಧಮ್' ಹೊಡೆಯೋರೆ ಎಚ್ಚರ..! ₹2 ಲಕ್ಷ ದಂಡ ವಸೂಲಿ ಮಾಡಿದ ಪೊಲೀಸರು..!


ವಿಷವಾಗುತ್ತಿದೆ ನೀರು 


ರಾಜ್ಯದ ಹಳ್ಳಿಗಳ ಬೋರ್ ನೀರಲ್ಲಿ ಯುರೇನಿಯಂ ಸೇರಿದಂತೆ ಅತ್ಯಂತ ವಿಷಕಾರಿ ಅಂಶಗಳು ಇರುವ ವಿಚಾರ ಕೆಲದಿನಗಳ ಹಿಂದೆ ಬಯಲಾಗಿತ್ತು. ಅದೇ ರೀತಿ ಆನೇಕಲ್(Anekal Lake) ಭಾಗದಲ್ಲೂ ಸರ್ಕಾರ ಅಂತರ್ಜಲ ಪರಿಶೀಲನೆ ನಡೆಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಅಂತರ್ಜಲದ ರಾಸಾಯನಿಕ ಅಧ್ಯಯನದಲ್ಲಿ ಈ ಶಾಕಿಂಗ್ ಸಂಗತಿ ಬಯಲಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳುವಂತೆ ಗರಿಷ್ಠ ಸಾಂದ್ರತೆ ಮಿತಿ ಪ್ರತಿ ಲೀಟರ್ ಗೆ 30 ಮೈಕ್ರೋಗ್ರಾಂ ಇರಬೇಕು, ಹಾಗೇ ಭಾರತೀಯ ಅಣ್ವಸ್ತ್ರ ಶಕ್ತಿ ನಿಯಂತ್ರಣ ಸಂಸ್ಥೆಯ ಹೇಳುವಂತೆ 60 ಮೈಕ್ರೋಗ್ರಾಂ ಇದ್ದರೂ ಪರವಾಗಿಲ್ಲ.ಆದರೆ ಸದ್ಯ ರಾಜ್ಯದ 73 ಗ್ರಾಮಗಳಲ್ಲಿ ಶೇ.78 ರಷ್ಟು ಯುರೇನಿಯಂ ಸಾಂದ್ರತೆ ಇದೆ. ಇದು ಗ್ರಾಮೀಣ ಜನರ ಆರೋಗ್ಯಕ್ಕೆ ಕುತ್ತು ತರುವ ಜೊತೆಗೆ, ಭವಿಷ್ಯದಲ್ಲಿ ಅಂತರ್ಜಲ ಬಳಕೆಗೂ ಗಂಡಾಂತರ ಎದುರಾಗುವಂತೆ ಮಾಡಿದೆ. ಇದೇ ರೀತಿ ಸದ್ದೇ ಇಲ್ಲದೆ ಕಳೆದ 2 ದಶಕಗಳಿಂದ ಆನೇಕಲ್  ತಾಲೂಕಿನ ನಿವಾಸಿಗಳು ವಿಷನೀರನ್ನೇ ಬಳಸುತ್ತಿದ್ದಾರೆ. ಈಗಲಾದರೂ ಸರ್ಕಾರ ಇತ್ತ ಗಮನಹರಿಸಬೇಕಿದೆ‌.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.