ಬೆಂಗಳೂರು: ಕೋಮು ಪ್ರಚೋದನೆ ಹಬ್ಬಿಸಿದ ಆರೋಪದ ಹಿನ್ನೆಲೆ ಬಿಜೆಪಿ ಮುಖಂಡರಾದ ಜೆಪಿ ನಡ್ಡಾ, ಅಮಿತ್ ಮಾಳವಿಯಾ, ಅರುಣ್ ಸೂದ್ ವಿರುದ್ಧ ಕಾಂಗ್ರೆಸ್ ನಿಯೋಗ ದೂರು ಸಲ್ಲಿಸಿದೆ. ಸಚಿವ  ಪ್ರಿಯಾಂಕ್ ಖರ್ಗೆ, ರಮೇಶ್ ಬಾಬು ಸೂರ್ಯಮುಕುಂದ್ ರಾಜ್ ನೇತೃತ್ವದ ತಂಡ ಹೈ ಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಏನಿದು ಘಟನೆ?
ಜೂನ್ 17ರಂದು ಬಿಜೆಪಿ ಅಧಿಕೃತ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿತ್ತು. ಅದರಲ್ಲಿ ಕಾಂಗ್ರೆಸ್ ಪಕ್ಷ ದೇಶದ್ರೋಹಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದೆ. ರಾಹುಲ್ ಗಾಂಧಿ ವಿದೇಶಕ್ಕೆ ಹೋದಾಗೆಲ್ಲಾ ದೇಶ ಒಡೆಯೋ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ ಅಂತಾ ತೋರಿಸೋ ರೀತಿ ಪೋಸ್ಟ್ ಮಾಡಿದ್ದಾರೆ.


ಇದನ್ನೂ ಓದಿ- ಭೀಕರ ರಸ್ತೆ ಅಪಘಾತ: ಓರ್ವನ ಮೃತ್ಯು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮೂರು ಮಂದಿ


ಈ ರೀತಿ ಸುಳ್ಳು ಮಾಹಿತಿ, ಕೋಮುವಾದ ಸೃಷ್ಟಿಸುವ ಪೋಸ್ಟ್ ಗಳನ್ನ ಬಿಜೆಪಿ ಐಟಿ ಕಾರ್ಖಾನೆ ಕರ್ನಾಟಕದಲ್ಲಿ ಬಂದ್ ಮಾಡಬೇಕು. ಅವರ ಸರ್ಕಾರ ಇದ್ದಾಗ ಇದೆಲ್ಲ ನಡಿತಿತ್ತು. ಈಗ ನಮ್ಮ ಸರ್ಕಾರ ಬಂದಿದ್ದು, ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿರಬೇಕು. ನಾವು ಸರ್ವಜನಾಂಗದ ಶಾಂತಿಯ ತೋಟ ಮಾಡೋಕೆ ಹೊರಟಿದ್ದೇವೆ.ಇವರು ವಿಡಿಯೋದಲ್ಲಿ ನಾವು ಆತಂಕವಾದಿಗಳಿಗಿಂತಲೂ ಡೇಂಜರ್ ಅಂತಾರೆ. ರಾಹುಲ್ ಗಾಂಧಿ ಮುಂಚೂಣಿಯಲ್ಲಿ ನಿಂತು ಆ್ಯಂಟಿ ಇಂಡಿಯಾ ಆಕ್ಟಿವಿಟಿ ಮಾಡ್ತಾರೆ ಅಂತಾ ಹೇಳುತ್ತಾರೆ. ಅಧಿಕೃತ ಅಕೌಂಟ್ ಗಳಲ್ಲಿ ಇವರು ಈ ರೀತಿ ಆರೋಪ ಹೊರಿಸಿದ್ದಾರೆ.ಅದಕ್ಕೆ ಅವರ ವಿರುದ್ಧ ದೂರು ಕೊಟ್ಟು ಎಫ್ಐಆರ್ ಮಾಡಲು ಕೇಳಿಕೊಂಡಿದ್ದೇವೆ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. 


ಇದನ್ನೂ ಓದಿ- ಕಾನ್ಸ್ಟೇಬಲ್ ಪತ್ನಿ ಆತ್ಮಹತ್ಯೆ: ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ


ಈ ಸಂಬಂಧ ಬಿಜೆಪಿಯವರು ಕಾನೂನಿಗೆ ಉತ್ತರ ಕೊಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ. ಇನ್ನೂ ಹೈ ಗ್ರೌಂಡ್ ಪೊಲೀಸರು ಕಾನೂನು ತಜ್ಞರ ಸಲಹೆ ಪಡೆದು ಕಾನೂನು ಪ್ರಕ್ರಿಯೆ ನಡೆಸುವುದಾಗಿ  ಮಾಹಿತಿ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ